ಸುಳ್ಳು ಜಾತಿ ಪ್ರಮಾಣ ಪತ್ರ ಆರೋಪ:ದಲಿತ ಪ್ರಗತಿಪರರ ಪ್ರತಿಭಟನೆ

0
61

ಸುರಪುರ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಸ್ಪೃಶ್ಯರಲ್ಲದವರು ಎಸ್ಸಿ ಎಸ್ಟಿ ಎಂದು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆಂದು ಆರೋಪಿಸಿ ಹಾಗೂ ಇದಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿ ನಗರದ ತಹಸೀಲ್ ಕಚೇರಿ ಮುಂದೆ ದಲಿತ ಮತ್ತು ಪ್ರಗತಿಪರ ಸಾಮೂಹಿಕ ಸಂಘಟನೆಗಳ ಒಕ್ಕೂಟದ ಮುಖಂಡರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು,ಕಲ್ಯಾಣ ಕರ್ನಾಟಕ ಭಾಗದ ಬೀದರ ಕಲಬುರ್ಗಿ ಯಾದಗಿರಿ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಮೇಲ್ವರ್ಗದ ಹಾಗೂ ಅಸ್ಪೃಶ್ಯರಲ್ಲದ ಜಾತಿಗಳು ಬೇಡ ಜಂಗಮ ಹಾಗೂ ಬುಡ್ಗ ಜಂಗಮ ಮತ್ತು ಭೋಯಿ ಹೆಸರಿನಲ್ಲಿ ಸುಳ್ಳು ಮಾಹಿತಿ ನೀಡಿ ಪರಿಶಿಷ್ಟ ಜಾತಿ ಸರ್ಟಿಫಿಕೇಟ್ ಪಡೆಯುತ್ತಿದ್ದು,ಇವರ‍್ಯಾರು ಪರಿಶಿಷ್ಟರಲ್ಲ ಮೇಲ್ವರ್ಗದ ವಿರಶೈವ ಲಿಂಗಾಯತ ಜನಾಂಗದವರಾಗಿದ್ದು ಇವರು ಪರಿಶಿಷ್ಟ ಜಾತಿಯ ಹೆಸರಿನಲ್ಲಿ ಬುಡ್ಗ ಹಾಗು ಬೇಡ ಜಂಗಮ ಹೆಸರಿನ ಮೇಲೆ ಸಂಘಟನೆಯನ್ನು ರಚಿಸಿ ಕಾನೂನು ಬಾಹಿರ ಹಾಗೂ ಅಧಿಕಾರಿಗಳಿಗೆ ಒತ್ತಡ ಹಾಕಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.ಅಲ್ಲದೆ ಅಧಿಕಾರಿಗಳ ಮೇಲೆ ಒತ್ತಡಹಾಕಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ.ಆದ್ದರಿಂದ ಇದಕ್ಕೆ ಕಡಿವಾಣ ಹಾಕಿ ಕೂಲಂಕುಶವಾಗಿ ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

Contact Your\'s Advertisement; 9902492681

ಅಲ್ಲದೆ ಪರಿಶಿಷ್ಟ ಪಂಗಡದ ಹೆಸರಿನಲ್ಲಿ ಹಿಂದುಳಿದ ಪಟ್ಟಿಯಲ್ಲಿರುವ ಜಾತಿಗಳು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿರುವ ಕಾಡುಕುರುಬ,ಗೊಂಡ ಕುರುಬ ಹಾಗೂ ಪ್ರವರ್ಗದಲ್ಲಿರುವ ಜಾತಿಗಳ ಜನಾಂಗದವರು ತಳವಾರ,ಟೋಕರೆ ಕೋಳಿ ಹೆಸರಿನಲ್ಲಿ ಸುಳ್ಳು ಮಾಹಿತಿಯನ್ನು ನೀಡಿ ಪರಿಶಿಷ್ಟ ಪಂಗಡದ ಸರ್ಟಿಫಿಕೇಟ್‌ಗಳನ್ನು ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ಅಲ್ಲದೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ಜನಾಂಗ ಇರುವುದಿಲ್ಲ,ಪರಿಶಿಷ್ಟ ಪಂಗಡದ ಜನಾಂಗದವರಾದ ವಾಲ್ಮೀಕಿ ,ನಾಯಕ,ಬೇಡ ಹಾಗೂ ಚೆಂಚು ಜನಾಂಗದವರಿಗೆ ಬಹಳ ಅನ್ಯಾಯವಾಗುತ್ತಿದೆ.ಇತ್ತೀಚೆಗೆ ಸರ್ಕಾರವು ವಾಲ್ಮೀಕಿ ಜನಾಂಗದ ಪರ್ಯಾಯ ಪದಗಳಾದ ತಳವಾರ ಹಾಗೂ ಪರಿವಾರ ಇವರ ಹೆಸರಿನಲ್ಲಿ ಪ್ರವರ್ಗದಲ್ಲಿರುವ ಜಾತಿಗಳು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಪ್ರಭಾವವನ್ನು ಬಳಸಿ ಗೊಂದಲವನ್ನು ಸೃಷ್ಟಿಸುತ್ತಿದ್ದಾರೆ.ಆದ್ದರಿಂದ ಎಸ್ಟಿ ಪ್ರಮಾಣ ಪತ್ರ ನೀಡದಂತೆ ಆಗ್ರಹಿಸಿದರು.

ನಂತರ ರಾಜ್ಯಪಾಲರಿಗೆ ಬರೆದ ಮನವಿಯನ್ನು ತಹಸೀಲ್ ಕಾರ್ಯಾಲಯದ ಸಿರಸ್ತೆದಾರ ಸೋಮನಾಥ ನಾಯಕ ಮೂಲಕ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಮುಖಂಡರಾದ ನಾಗಣ್ಣ ಕಲ್ಲದೇವನಹಳ್ಳಿ,ರಮೇಶ ದೊರೆ ಆಲ್ದಾಳ,ಭೀಮರಾಯ ಸಿಂದಗೇರಿ,ರಾಹುಲ್ ಹುಲಿಮನಿ,ಮಾಳಪ್ಪ ಕಿರದಹಳ್ಳಿ,ರವಿಚಂದ್ರ ದರಬಾರಿ, ಶಿವಲಿಂಗ ಹಸನಾಪುರ,ಶಿವಶಂಕರ ಹೊಸ್ಮನಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here