ಸುರಪುರ: ನಗರದ ನಗರದ ಸರಕಾರಿ ಕನ್ಯಾ ಮಾದರಿಯ ಪ್ರಾಥಮಿಕ ಶಾಲೆಯ (ದರಬಾರ) ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಯ(ಎಸ್‌ಡಿಎಂಸಿ) ಸಭೆ ಜರುಗಿತು, ಸಭೆಯಲ್ಲಿ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆಗೊಳಿಸಲಾಯಿತು.
ಸಜ್ಜನ್‌ಕುಮಾರ ಕಲ್ಯಾಣಶೆಟ್ಟಿ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡರು, ಹಜ್ರತ್ ಬೀ(ಉಪಾಧ್ಯಕ್ಷೆ) ಹಾಗೂ ಸದಸ್ಯರಾಗಿ ಧರ್ಮರಾಜ ಬಡಿಗೇರ, ಹೊನ್ನಪ್ಪ, ಜ್ಯೋತಿ ರಿಟ್ಟರ್, ಹಣಮಂತ ದರಬಾರಿ, ರಂಗಣ್ಣ ಭೈರಿಮಡ್ಡಿ, ವೆಂಕಟಪ್ಪ ನಾಯಕ ದೇಸಾಯಿ, ಭಾಗ್ಯಶ್ರೀ ಮಲ್ಲಿಕಾರ್ಜುನ, ಸಂಗೀತಾ ಅಮರೇಶ, ಸಾಜಿದ್ ಅಲಿ ಚೋಟುಮಿಯಾ, ನಿಂಗಪ್ಪ ಬೈರಿಮಡ್ಡಿ, ಈರಮ್ಮ ಕೊಟ್ರಯ್ಯ ಮಾಡಿ, ಮರೆಮ್ಮ ಸಿದ್ದಾಪುರ, ಸ್ವರೂಪರಾಣಿ ಶಾಬಾದಿ, ಮೈಲಾರಪ್ಪ, ಸಂತೋಷ ಹಾಗೂ ನಿಂಗಮ್ಮ (ಸದಸ್ಯರು) ಆಯ್ಕೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ್ಷೇತ್ರ ಸಮನ್ವಯಾಧಿಕಾರಿ ಅಮರೇಶ ಕುಂಬಾರ ಮಾತನಾಡಿ ಇಂದು ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಣ ಇಲಾಖೆಯಿಂದ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು ಇದರೊಂದಿಗೆ ಶಾಲೆಯ ಬೆಳವಣಿಗೆಯಲ್ಲಿ ಸಮುದಾಯದ ಪಾತ್ರ ತುಂಬಾ ಮುಖ್ಯವಾಗಿದ್ದು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರುಗಳು ಶಾಲೆಯ ಶೈಕ್ಷಣಿಕ ಬೆಳವಣಿಗೆ ಹಾಗೂ ಶಾಲೆಯ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಸಹಕರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ನರಸಿಂಹಕಾಂತ ಪಂಚಮಗಿರಿ, ಬಿಆರ್‌ಪಿ ಖಾದರ ಪಟೇಲ, ಪ್ರ ಗು ಸುಭಾಸ ಕೊಂಡಗೂಳಿ, ಹಿರಿಯ ಶಿಕ್ಷಕರಾದ ಸೋಮರೆಡ್ಡಿ ಮಂಗಿಹಾಳ ಇತರರಿದ್ದರು.