ಸುರಪುರ: ನಗರದ ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀ ಪ್ರಭು ಕಲಾ, ವಿಜ್ಞಾನ ಮತ್ತು ಜೆ.ಎಮ್. ಬೊಹ್ರಾ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಜನೆವರಿ ೧೦ರ ಸೋಮವಾರ ದಿಂದ ೧೭ನೇ ತಾರೀಖಿನ ವರೆಗೆ ಒಂದು ವಾರದ ಎನ್.ಸಿ.ಸಿ.ಯ ಬಿ ಮತ್ತುಸ ಸಿ ಸರ್ಟಿಫಿಕೇಟ್‌ನ ಎ.ಟಿ.ಸಿ ಕ್ಯಾಂಪ್ ಹಮ್ಮಿಕೊಳ್ಳಲಾಗಿತ್ತು.ಕ್ಯಾಂಪ್‌ಲ್ಲಿ ೭೫ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾಲೇಜಿನ ಎನ್.ಸಿ.ಸಿ. ಅಧಿಕಾರಿಯಾದ ಕ್ಯಾಪ್ಟನ್ ಡಾ. ರಮೇಶ ಬಿ. ಶಹಪುರಕರ ಅವರ ಮೇಲುಸ್ತುವಾರಿ ೩೫/೩ ಕರ್ನಾಟಕ, ರಾಯಚೂರ ಬಟಾಲಿಯನ್‌ನ ಅಧಿಕಾರಿಗಳಾಗಿ ಕ್ಯಾಪ್ಟನ್ ಅರುಣ ಪಾಟಿಲ್ ಮತ್ತು ಲೇಫ್ಟಿನೆಂಟ್ ಎಸ್,ಎನ್. ಹುಲಾರಿ ತರುಬೇತಿದಾರಾಗಿ ಆಗಮಿಸಿದ್ದರು. ದಿನಾಲು ಸಾಯಂಕಾಲ ವಿವಿಧ ವಿಷಯಗಳ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ ಹಾಗೂ ವ್ಯಕ್ತಿತ್ವ ವಿಕಸನ ತರಭೇತಿ ನೀಡಲಾಗುತ್ತಿತ್ತು.
ಸಮಾರೋಪ ದಿನದಂದು ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಡಾ. ಎಸ್.ಎಚ್. ಹೊಸಮನಿ ಅಧ್ಯಕ್ಷತೆ ವಹಿಸಿದ್ದರು, ಅತಿಥಿಗಳಾಗಿ ಉಪಪ್ರಾಚಾರ್ಯರಾದ ಪ್ರೊ. ವೇಣುಗೋಪಾಲ ಜೇವರ್ಗಿ, ಡಾ. ನಾಗರಾಜ ಪಟೇಲ್, ಡಾ. ಸಿ.ವಿ. ಕಲಬುರಗಿ, ಡಾ. ಗಂಧಿಗುಡಿ, ಪ್ರೊ. ಎಮ್.ಡಿ. ವಾರಿಸ್, ಡಾ. ಸಾಯಿಬಣ್ಣ, ಮಲ್ಹಾರಾವ, ಡಾ. ಸುರೇಶ ಮತ್ತು ಬೋಧಕ-ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು. ಡಾ. ಕ್ಯಾಪ್ಟನ್ ರಮೇಶ ಬಿ. ಶಹಾಪುರಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು ಡಾ. ಸಾಯಿಬಣ್ಣ ನಿರುಪಿಸಿದರು, ಹಣಮಂತ ಸಿಂಗೆ ವಂದಿಸಿದರು.