ಪತ್ನಿಯ ಬದಲು ಪತಿರಾಯರಿಂದ ಗ್ರಾಮ ಸಭೆ: ಕ್ರಮಕ್ಕೆ ಆಗ್ರಹ

0
57

ಕಲಬುರಗಿ: ಚಿಂಚೋಳಿ ತಾಲೂಕಿನ ಯಾಕಾಪುರ ಗ್ರಾಮದಲ್ಲಿ ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಇಲ್ಲದೆ ಅವರ ಪತಿಯಿಂದಲೇ ಗ್ರಾಮ ಸಭೆ ನಡೆಸಿ ತೀರ್ಮಾನ ಕೈಗೊಂಡು ಶಿಷ್ಟಾಚಾರ ಉಲ್ಲಂಘಸಿರುವ ಘಟನೆ ಯಾಕಾಪುರ ಗ್ರಾಮ ಪಂಚಾಯಿತಿ ಪಿಡಿಓ ಅಧಿಕಾರಿಯಿಂದ ನಡೆದಿದೆ.

ಪಂಚಾಯಿತಿ ವ್ಯಾಪ್ತಿಯ ಮನೆ ಹಂಚಿಕೆ ವಿಚಾರವಾಗಿ ಬುಧವಾರ ಗ್ರಾಮ ಸಭೆ ನಿಗದಿ ಪಡಿಸಲಾಗಿದೆ. ಅದರಂತೆ ಅಧ್ಯಕ್ಷರಾದ ಸರಸ್ವತಿ ಗಿರಿ ಮತ್ತು ಉಪಾಧ್ಯಕ್ಷರಾಗಿರುವ ಸವಿತಾ ಅವರಿಗೆ ನೋಟಿಸ್ ನೀಡಿ ಮಾಹಿತಿ ನೀಡಲಾಗಿತ್ತು. ಊರಲ್ಲಿ ಡಂಗುರ ಸಾರಿ ಸಭೆಯಲ್ಲಿ ಭಾಗವಹಿಸಲು ಗ್ರಾಮಸ್ಥರಿಗೆ ಕರೆ ನೀಡಲಾಗಿತು.

Contact Your\'s Advertisement; 9902492681

ಅಧ್ಯಕ್ಷ ಇಲ್ಲದೆ ಸಮಯದಲ್ಲಿ ಉಪಾಧ್ಯಕ್ಷ ನೇತೃತ್ವದಲ್ಲಿ ಗ್ರಾಮ ಸಭೆ ಮಾಡಿ ಮನೆ ಹಂಚಿಕೆ ಮಾಡಬೇಕು. ಬುಧವಾರ ಗ್ರಾಮದಲ್ಲಿ ಗ್ರಾಪಂ ಅಧ್ಯಕ್ಷೆಯ ಉಪಾಧ್ಯಕ್ಷ ಪತಿಗಳಿಂದಲೇ ಗ್ರಾಮ ಸಭೆ ನಡೆಸಿ ಸರಕಾರದ ವಿರುದ್ಧ ನೀತಿ ಅನುಸರಿಸಿದ್ದಾರೆ.

ಗ್ರಾಪಂ ಗೆ ಬರುವ ಮನೆಗಳನ್ನು ಗ್ರಾಪಂ ಸದಸ್ಯರ ಅನುಗುಣವಾಗಿ ಮನೆಗಳು ಹಂಚಿಕೆ ಮಾಡಬೇಕು, ಆದರೆ ಅಧ್ಯಕ್ಷರು ಇಲ್ಲದೆ ಸಭೆ ಮಾಡಿ. ಗ್ರಾಮ ಸಭೆಯಲ್ಲಿ ಎಲ್ಲ ತೀರ್ಮಾನಗಳು ಕೈಗೊಂಡಿದ್ದು, ಈ ಸಭೆಗೆ ಆಸಿಂಧು ಎಂದು ರದ್ಧು ಮಾಡಬೇಕು ಪತಿಯರು ವಿಶೇಷ ಗ್ರಾಮ ಸಭೆ ತೆಗೆದುಕೊಂಡು ಗ್ರಾಪಂನ ನಿಯಮಗಳು ಉಲ್ಲಂಘನೆ ಮಾಡಿದ್ದಾರೆ. ತಕ್ಷಣ ಮೇಲಧಿಕಾರಿಗಳು ಅವರ ಪತಿಯರ ವಿರುದ್ಧ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಾನೂನು ವಿರುದ್ಧ ಕ್ರಮ ಅನುಸರಿದಕ್ಕೆ ಪಿಡಿಓ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಲ್ಯಾಣ ಕರ್ನಾಟಕ ಜಾಗರಣ ಮಂಚ ಮುಖಂಡರಾದ ರಮೇಶ ಯಾಕಾಪುರ ಆಗ್ರಹಿಸಿದ್ದಾರೆ.

ಯಾಕಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರ ಪತಿರಾಯ ಆಳಂದ ತಾಲ್ಲೂಕಿನ ಡೊನ್ನೂರು ಗ್ರಾಮ ಪಂಚಾಯಿತಿ ಪಿಡಿಓ ಅಧಿಕಾರಿಯಾಗಿ ಕಾರ್ಯಾನಿರ್ವಹಿಸುತ್ತಿರುವ ಮಲ್ಲಿಕಾರ್ಜುನ್ ಗಿರಿ ಅವರಿಂದ ಇಂತಹ ಅಸಡ್ಡೆ ತೋರಿ ಶಿಷ್ಟಾಚಾರ ನಡೆದಿರುವುದು ಖಂಡನೀಯ. ತಕ್ಷಣ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಇಂತಹ ಘಟನೆ ಜಿಲ್ಲೆಯಲ್ಲಿ ನಡೆಯದಂತೆ ಜಿಲ್ಲಾ ಪಂಚಾಯಿತಿ ಅಧಿಕಾರಿ ಸಂದೇಶ ನೀಡಬೇಕು. ರಮೇಶ ಯಾಕಾಪೂರ, ಕಲ್ಯಾಣ ಕರ್ನಾಟಕ ಜಾಗರಣ ಮಂಚ ಚಿಂಚೋಳಿ.

ಗ್ರಾಮ ಸಭೆಗೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಬುರುತ್ತಿದ್ದಾರೆ ಎಂದು ತಿಳಿಸಲಾಗಿತ್ತು. ಅವರು ಬರುವಷ್ಟಿಗೆ ಸಭೆಯ ಉದ್ದೇಶ ಮತ್ತು ಯೋಜನೆಗಳ ಕುರಿತು ಸಭೆಯಲ್ಲಿ ಮಂಡಿಸುವ ಕಾರ್ಯಾ ಮಾಡಿದ್ದೇವೆ. ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಸಭೆಗೆ ಬಂದಿಲ್ಲ. ಆದರಿಂದ ಮತ್ತೊಮ್ಮೆ ಗ್ರಾಮ ಸಭೆ ಕರೆದು ತೀರ್ಮಾನ ಕೈಗೊಳ್ಳುತ್ತೇವೆ. ಬಂಡೆಪ್ಪಾ ಧನ್ನಿ. ಅಭಿವೃದ್ಧಿ ಅಧಿಕಾರಿ, ಯಾಕಾಪುರ ಗ್ರಾಮ ಪಂಚಾಯಿತಿ ಚಿಂಚೋಳಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here