ಸಂವಿಧಾನ ಮಾದರಿ ಸ್ತಬ್ದ ಚಿತ್ರ ಮೆರವಣಿಗೆ: 26 ರಂದು

0
14

ಕಲಬುರಗಿ: ೭೨ನೇ ಸಂವಿಧಾನ ದಿನಾಚರಣೆ ಅಂಗವಾಗಿ ಸಂವಿಧಾನ ಮಾದರಿ ಸ್ತಬ್ದ ಚಿತ್ರ ಮೆರವಣಿಗೆ, ವಿಶೇಷ ಉಪನ್ಯಾಸ ಕಾರ್ಯಕ್ರಮ ಬುಧವಾರ ಹಮ್ಮಿಕೊಳ್ಳಲಾಗಿದೆ ಎಂದು ಮೈತ್ರಿ ಫೌಂಡೇಷನ್ ಕಾರ್ಯದರ್ಶಿ ರೇಣುಕಾ ಸಿಂಗೆ, ಕೋಲಿ ಕಬ್ಬಲಿಗ ಬುಡಕಟ್ಟು ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಲಚ್ಚಪ್ಪ ಜಮಾದಾರ್, ಎಚ್‌ಕೆಸಿಸಿಐ ಕಾರ್ಯದರ್ಶಿ ಶರಣು ಪಪ್ಪಾ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನೇವರಿ ೨೬.ರಂದು ಬೆಳಗ್ಗೆ ೧೦. ೩೦ಕ್ಕೆ ಎಂಎಸ್‌ಕೆಮಿಲ್ ಸಮೀಪದ ಬುದ್ಧ ವಿಹಾರದಿಂದ ಜಗತ್ ವೃತ್ತದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಬಂದು ಸಾಂಕೇತಿಕವಾಗಿ ಸಂವಿಧಾನದ ಹೊತ್ತಿಗೆ ಸ್ತಬ್ದ ಚಿತ್ರದ ಮೆರವಣಿಗೆ ನಡೆಯಲಿದ್ದು, ಕೋವಿಡ್ ನಿಯಮಾವಳಿ ಪ್ರಕಾರ ನಿಗದಿತ ಜನರು ಮಾತ್ರ ಭಾಗವಹಿಸಲಿದ್ದಾರೆ.

Contact Your\'s Advertisement; 9902492681

ಬೀದರಿನ ಹತ್ಯಾಳದ ಪೂಜ್ಯ ಭಂತೆ ಧಮ್ಮನಾಗ ಸಾನಿಧ್ಯದಲ್ಲಿ ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ್ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಶಾಸಕ ಬಸವರಾಜ್ ಮತ್ತಿಮಡು ಧ್ವಜಾರೋಹಣ ನೆರವೇರಿಸಲಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಅಲ್ಲಾಭಕ್ಷ, ಎ ಉಪವಿಭಾಗದ ಎಸಿಪಿ ಗಿರೀಶ ಎಸ್.ಬಿ. ಮುಖ್ಯ ಅತಿಥಿಗಳಾಗಿ ಆಗಮಿಸುವರು.

ಮಧ್ಯಾಹ್ನ ೩ಕ್ಕೆ ವಿಶೇಷ ಉಪನ್ಯಾಸ ಏರ್ಪಡಿಸಲಾಗಿದ್ದು, ಸಂವಿಧಾನದ ಮಹತ್ವದ ಕುರಿತು ಡಾ. ಬಿ.ಆರ್. ಅಂಬೇಡ್ಕರ್ ಪದವಿ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಡಾ. ಐ.ಎಸ್. ವಿದ್ಯಾಸಾಗರ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಅಕ್ಕಮಹಾದೇವಿ ಆಶ್ರಮದ ಪೂಜ್ಯ ಮಾತೆ ಪ್ರಭುಶ್ರೀ ತಾಯಿ ಸಾನ್ನಿಧ್ಯ ವಹಿಸುವರು. ಶಾಸಕ ಎಂ.ವೈ. ಪಾಟೀಲ್ ಅಧ್ಯಕ್ಷತೆ ವಹಿಸುವರು.

ಎಚ್‌ಕೆಸಿಸಿಐ ಕಾರ್ಯದರ್ಶಿ ಶರಣು ಪಪ್ಪಾ, ಕೋಲಿ ಕಬ್ಬಲಿಗ ಬುಡಕಟ್ಟು ಸುಧಾರಣಾ ಸಮಿತಿ ರಾಜ್ಯಾಧ್ಯಕ್ಷ ಲಚ್ಚಪ್ಪ ಜಮಾದಾರ್, ನ್ಯಾಯವಾದಿ ಮಜರ್ ಹುಸೇನ್, ಕಲ್ಯಾಣ ಕರ್ನಾಟಕ ಜನಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಗುರಣ್ಣ ಐನಾಪುರ, ಮೈತ್ರಿ ಫೌಂಡೇಷನ್ ಅಧ್ಯಕ್ಷ ಪ್ರಕಾಶ ಅವರಾದಕರ್, ಎಸ್‌ಬಿಆರ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರಕಾಶ ಪಾಟೀಲ್ ಆಗಮಿಸುವರು.

ಮೈತ್ರಿ ಫೌಂಡೇಷನ್ ಅಧ್ಯಕ್ಷ ಪ್ರಕಾಶ ಅವರಾದಕರ್, ಅಲ್ಲಮಪ್ರಭು ನಿಂಬರ್ಗಾ ಮತ್ತಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here