ಸುರಪುರ: ನಗರದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಯುವ ಘಟಕ ಹಾಗು ನಗರ ಯುವ ಘಟಕದ ಮಾಸಿಕ ಸಭೆಯನ್ನು ನಡೆಸಲಾಯಿತು.
ಸಭೆಯನ್ನು ಉದ್ಘಾಟಿಸಿದ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಸೂಗುರೇಶ ವಾರದ್ ಮಾತನಾಡಿ,ನಮ್ಮ ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಯುವಕರು ಒಗ್ಗೂಡಿ ಯುವ ಘಟಕದ ಅಡಿಯಲ್ಲಿ ಅಭೀವೃಧ್ಧಿ ಕಾರ್ಯಗಳನ್ನು ಮಾಡುವಂತೆ ಹಾಗು ತಮ್ಮೊಂದಿಗೆ ನಾವೆಲ್ಲರು ಸದಾಕಾಲ ಜೊತೆಗಿರುವುದಾಗಿ ತಿಳಿಸಿದರು.
ಸಭೆಯ ನೇತೃತ್ವ ವಹಿಸಿದ್ದ ಯುವ ಘಟಕದ ತಾಲೂಕು ಅಧ್ಯಕ್ಷ ಶಿವರಾಜ ಕಲಕೇರಿ ಮಾತನಾಡಿ,ನಮ್ಮ ಸಮುದಾಯದ ಸಮಗ್ರ ಅಭಿವೃಧ್ಧಿಗಾಗಿ ಎಲ್ಲರು ಸೇರಿ ಕೆಲಸ ಮಾಡೋಣ,ಹಿರಿಯರ ಮಾರ್ಗದರ್ಶನದಲ್ಲಿ ಎಲ್ಲ ಯುವಕರು ಒಂದುಗೂಡಿ ಸಮಾಜಮುಖಿಯಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳೋಣ ಎಂದರು.ಅಲ್ಲದೆ ಶೀಘ್ರದಲ್ಲಿಯೆ ಯುವ ಘಟಕದ ನೂತನ ಸದಸ್ಯತ್ವ ಅಭಿಯಾನವನ್ನು ಆರಂಭಿಸೋಣ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮುಖಂಡ ಮಲ್ಲಿಕಾರ್ಜುನರಡ್ಡಿ ಅಮ್ಮಾಪುರ ಮಾತನಾಡಿ,ಇಂದು ನಮ್ಮ ಸಮಾಜದ ಎಲ್ಲ ಯುವ ಮಿತ್ರರು ಒಂದಾಗುವ ಅವಶ್ಯಕವಿದೆ.ಅನೇಕ ಸಂಘಟನೆಗಳು ಕೆಲಸ ಮಾಡುತ್ತಿದ್ದರೂ ಇನ್ನೂ ಹೆಚ್ಚೆಚ್ಚು ಯುವಕ ಬಂಧುಗಳು ಸಂಘಟನೆಗೊಂಡಿಲ್ಲ ಅದಕ್ಕಾಗಿ ಯುವ ಘಟಕವನ್ನು ಬಲಪಡಿಸುವ ನಿಟ್ಟಿನಲ್ಲಿ ಸಮಾಜದ ಕೆಲಸ ಮಾಡುವ ಆಸಕ್ತಿ ಇರುವವರಿಗೆ ಸಂಘಟನೆಯಲ್ಲಿ ಆದ್ಯತೆ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಜಗದೀಶ ಪಾಟೀಲ್ ಸೂಗೂರು,ಚಂದ್ರಶೇಖರ ಡೊಣೂರ,ವಿರೇಶ ಪಂಚಾಂಗಮಠ,ಸೂಗುರೇಶ ಮಡ್ಡಿ,ಸಿದ್ದನಗೌಡ ಹೆಬ್ಬಾಳ,ಚನ್ನಾರಡ್ಡಿ ದೇಸಾಯಿ ವೇದಿಕೆ ಮೇಲಿದ್ದರು.ಯುವ ಘಟಕದ ಆನಂದ ಕುಂಬಾರ ಅಶೋಕ ಹಯ್ಯಾಳ,ಸೂಗು ಸಜ್ಜನ್,ಅಜಯ್ ಪಾಟೀಲ್,ಉದಯ ಗುಳಗಿ,ಸುಪ್ರೀತ್ ಜಾಕಾ,ಸ್ವರೂಪ ಬೂದಿಹಾಳ,ಅಜಯ್ ಶೆಳ್ಳಗಿ ಸೇರಿದಂತೆ ಅನೇಕರಿದ್ದರು.