ವೀರಶೈವ ಲಿಂಗಾಯತ ವಿದ್ಯಾರ್ಥಿನಿ ವಸತಿ ನಿಲಯಕ್ಕೆ ಸಚಿವ ಮುರುಗೇಶ್ ನಿರಾಣ ಭೇಟಿ

0
11

ಕಲಬುರಗಿ: ಅಖಿಲ ಭಾರತ ವೀರಶೈವ ಮಹಾಸಭಾದ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ವೀರಶೈವ ಲಿಂಗಾಯತ ವಿದ್ಯಾರ್ಥಿನಿ ವಸತಿ ನಿಲಯಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಮುರುಗೇಶ್ ನಿರಾಣಿಯವರು ಭೇಟಿ ನೀಡಿದಾಗ ಜಿಲ್ಲಾಧ್ಯಕ್ಷರಾದ ಶರಣಕುಮಾರ ಮೋದಿ ಹಾಗೂ ಪದಾಧಿಕಾರಿಗಳು ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು.

ನಂತರ ಮಾತನಾಡಿದ ಸಚಿವರು   ಕಟ್ಟಡವನ್ನು ನೋಡಿ  ಮಹಾಸಭಾದ ಸಾಮಾಜಿಕ ಕೆಲಸಕ್ಕೆ ತುಂಬಾ ಹರ್ಷ ವ್ಯಕ್ತಪಡಿಸಿದರು. ಕಲಬುರಗಿಯಲ್ಲಿ ವೀರಶೈವ ಲಿಂಗಾಯತ ವಿದ್ಯಾರ್ಥಿನಿಯರಿಗೆ ಪ್ರಪ್ರಥಮವಾಗಿ ನಿರ್ಮಿಸುತ್ತಿರುವ ಈ ವಸತಿ ನಿಲಯಕ್ಕೆ ಸರ್ಕಾರದಿಂದ ಸಹಾಯ ಖಂಡಿತಾ ಮಾಡುವುದಾಗಿ ತಮ್ಮ ಸಹಕಾರ ಸದಾ ಇರುವುದಾಗಿ ಹೇಳಿದರು. ನಂತರ ಮಾತನಾಡಿದ ಮೋದಿಯವರು ಈ ನಿರ್ಮಾಣಕ್ಕೆ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪನವರು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಈಶ್ವರ ಖಂಡ್ರೆಯವರು, ಕಟ್ಟಡದ ಉಸ್ತುವಾರಿ ಅಧ್ಯಕ್ಷರಾದ ಶರಣಬಸಪ್ಪ ದರ್ಶನಾಪುರ ಮತ್ತು ಸಹಾಯ ಮಾಡಿದ ಹಾಗೂ ಮಾಡುವ ಆಶ್ವಾಸನೆ ನೀಡಿದ ಎಲ್ಲರಿಗೂ ಧನ್ಯವಾದಗಳು ತಿಳಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ, ಬಿ ಜಿ ಪಾಟೀಲ, ಶಾಸಕರಾದ ಬಸವರಾಜ ಮತ್ತಿಮೂಡ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಅಮರನಾಥ ಪಾಟೀಲ್, ಅಲ್ಲಮಪ್ರಭು ಪಾಟೀಲ್, ಮಾಜಿ ಶಾಸಕರಾದ ದೊಡ್ಡಪ್ಪ ಗೌಡ ನರಿಬೋಳ, ಬಸವರಾಜ ಭೀಮಳ್ಳಿ, ಕಲ್ಯಾಣಪ್ಪ ಮಳಖೇಡ, ಚಂದ್ರಶೇಖರ ತಳ್ಳಳ್ಳಿ, ಬಸವರಾಜ ದಿಗ್ಗಾವಿ, ಗೌತಮ ಪಾಟೀಲ, ಡಾ ವಿಕ್ರಂ ಪಾಟೀಲ,  ಡಾ ಶರಣಬಸಪ್ಪ ಕಾಮರೆಡ್ಡಿ, ಬಸವರಾಜ ಖಂಡೇರಾವ, ಶಿವರಾಜ್ ರದ್ದೇವಾಡಗಿ, ಅಣ್ಣಾರಾವ ಧುತ್ತರಗಾಂವ, ನೀಲಕಂಠ ಮೂಲಗೆ, ರಾಜಾ ಭೀಮಳ್ಳಿ, ಶಾಂತೂ ಬಿಲಗುಂದಿ, ಎಂ ಡಿ ಪಾಟೀಲ, ಡಾ ಶರಣ ಪಾಟೀಲ, ಸೋಮಶೇಖರ ಹಿರೇಮಠ, ಶರಣಬಸಪ್ಪ ತೆಂಗಳಿ, ಭೀಮಾಶಂಕರ ಮೀಟೇಕಾರ, ಗೌರಿ ಚಿಚ್ಕೋಟಿ, ಶೀಲಾ ಮುತ್ತಿನ, ಡಾ ಸುಧಾ ಹಾಲಕಾಯಿ, ಶೀಲಾ ಮುತ್ತಿನ, ಜ್ಯೋತಿ ಮರಗೋಳ , ಲತಾ ಬಿಲಗುಂದಿ, ಅಮರೇಶ್ ಪಾಟೀಲ, ಚನ್ನಪ್ಪ ದಿಗ್ಗಾವಿ, ಡಾ ಶಂಭುಲಿಂಗ ಬಳಬಟ್ಟಿ,ಡಾ ರಾಜಶೇಖರ ಪಾಟೀಲ, ನಾಗಲಿಂಗಯ್ಯ, ಜೆ ಕೆ ಪಾಟೀಲ್, ಅಣವೀರ ಪಾಟೀಲ, ಶಿವಕುಮಾರ್ ಬಾಳಿ,  ಶಿವರಾಜ್ ತಿಳಗೂಳ, ವಿನೋದಕುಮಾರ, ಬಸವರಾಜ ಪಾಟೀಲ, ಶರಣು ಲೇಂಗಟಿ, ರಾಜೂ, ಶ್ರೀದೇವಿ, ಬೇಬಿ ನಂದಾ ಸಮಾಜದ ಇನ್ನಿತರ ಹಿರಿಯರು ಮುಖಂಡರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here