ರಿಪಬ್ಲಿಕನ್ ಯೂತ್ ಫೆಡರೇಷನ ವತಿಯಿಂದ ಎಫ್‍ಐಆರ್ ದಾಖಲು

0
22

ಕಲಬುರಗಿ: ಜಿಲ್ಲಾಡಳಿತದಿಂದ ನಗರದ ಪೆÇೀಲಿಸ ಪರೇಡ ಮೈದಾನದಲ್ಲಿ ದೇಶದ 73ನೇ ಗಣರಾಜ್ಯೋತ್ಸವ ಸಮಾರಂಭದ ಧ್ವಜಾರೋಹಣ ಸಂದರ್ಭದಲ್ಲಿ ರಾಷ್ಟ್ರ ನಾಯಕರಾದ ಮಹಾತ್ಮಾ ಗಾಂಧೀಜಿ ಮತ್ತು ಸಂವಿಧಾನ ಪಿತಾಮಹಾ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರ ಉದ್ದೇಶ ಪೂರ್ವಕವಾಗಿ ಇಡದೆ ಅವಮಾನಿಸಿದ್ದಲ್ಲದೆ.

ಸರಕಾರದ ಸುತ್ತೋಲೆಯಂತೆ ಶಿμÁ್ಟಚಾರ ಪಾಲಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಹಾಗೂ ಸಂಭಂದ ಪಟ್ಟ ಅಧಿಕಾರಿಗಳನ್ನು ಕೂಡಲೇ ಸೇವೆಯಿಂದ ಅಮಾನತ್ತು ಮಾಡುವಂತೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಮುರುಗೇಶ ನಿರಾಣಿಯವರಿಗೆ ರಿಪಬ್ಲಿಕನ್ ಯೂತ್ ಫೆಡರೇಷನ ವತಿಯಿಂದ ಕನ್ನಡ ಭವನದಲ್ಲಿ ಭೇಟಿ ಮಾಡಿ ಭಾವಚಿತ್ರಗಳ ವಿಚಾರವಾಗಿ ಮಾತಿನ ಚಕಮಕಿ ನಡೆಸಲಾಯಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ನಮ್ಮ ಜೊತೆ ಮಾತನಾಡಿದ ಉಸ್ತುವಾರಿ ಸಚಿವರು ನಾನು ಗಮನಹರಿಸಿಲ್ಲ, ಪೆÇೀಟೊ ಇಡಬೇಕು ಇಟ್ಟಿಲ್ಲ ಅಂದ್ರೆ ಕ್ರಮ ಜರುಗಿಸಲಾಗುವುದು ಅಂತ ಹಾರಿಕೆ ಉತ್ತರ ನೀಡಿದರು, ಈ ಧ್ವಜಾರೋಹ ಸಮಾರಂಭದಲ್ಲಿ ಕೆಕೆಆರ್‍ಡಿಬಿ ಅಧ್ಯಕ್ಷರಾದ ದತ್ತಾತ್ರೇಯ ಪಾಟೀಲ ರೇವೂರ, ಕಲಬುರಗಿ ಲೋಕಸಭಾ ಸದಸ್ಯರಾದ ಉಮೇಶ ಜಾದವ, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ, ಗ್ರಾಮೀಣ ಶಾಸಕರಾದ ಬಸವರಾಜ ಮತ್ತಿಮೂಡ, ಎಸ್ ಪಿ, ಡಿ ಸಿ, ಆರ್ ಸಿ, ಪೆÇೀಲಿಸ ಆಯುಕ್ತರು, ಪೆÇೀಲಿಸ ಮಹಾ ನಿರಿಕ್ಷಕರು, ಕೆಕೆಆರ್‍ಡಿಬಿ ಕಾರ್ಯದರ್ಶಿಗಳು, ಎ.ಡಿ.ಸಿ, ಎ.ಸಿ ತಹೀಲ್ದಾರ, ಎಲ್ಲರ ಸಮ್ಮುಖದಲ್ಲೆ ರಾಷ್ಟ ನಾಯಕರಾದ ಮಹಾತ್ಮಾ ಗಾಂಧೀಜಿ ಮತ್ತು ಸಂವಿಧಾನ ಪಿತಾಮಹಾ ಡಾ:ಬಿ ಆರ್ ಅಂಬೇಡ್ಕರ್ ಅವರನ್ನು ಉದ್ದೇಶ ಪೂರ್ವಕವಾಗಿಯೇ ಅವಮಾನಿಸಿದ್ದು ಇಡೀ ದೇಶಕ್ಕೆ ಮತ್ತು ನಮ್ಮ ಜಿಲ್ಲೆಗೆ ಮಾಡಿದ ಅವಮಾನವಾಗಿದೆ.

ಈ ಘಟನೆಗೆ ಸಂಭಂದಿಸಿದಂತೆ ಕಲಬುರಗಿ ನಗರದ ಸ್ಠೇಶನ ಬಜಾರ ಪೆÇೀಲಿಸ ಠಾಣೆಗೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ದೂರು ಅರ್ಜಿ ನೀಡಲಾಗಿದೆ. ನಮ್ಮ ದೂರು ಅರ್ಜಿಯನ್ನು ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಎಫ್‍ಐಆರ್ ಬಗ್ಗೆ ತಿಳಿಲಾಗುವುದು ಎಂದು ಹೇಳಿರುತ್ತಾರೆ. ಸಂಭಂದ ಪಟ್ಟ ಮೇಲಾಧಿಕಾರಿಗಳು ಘಟನೆ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದರೆ ರಿಪಬ್ಲಿಕನ್ ಯೂತ್ ಫೆಡರೇಶನ್ ವತಿಯಿಂದ ಪ್ರತಿಭಟನೆ ಹಮ್ಮಿಕೊಳಲಾಗುವುದು.

ಈ ಸಂದರ್ಭದಲ್ಲಿ ಸಂತೋಷ ಮೇಲ್ಮನಿ, ಹಣಮಂತ ಇಟಗಿ, ನಾಗೇಂದ್ರ ಜವಳಿ, ಧರ್ಮಣ್ಣಾ ಕೋಣೆಕರ್, ರಾಣು ಮುದ್ದನಕರ್, ಸಿದ್ದು ಬೆಲಸೂರ, ಅರುಣ ಸಾಗರ, ದಶರಥ ತಳಕೇರಿ, ಮಹೇಶ ನವಲಗಿರಿ, ಅಜೇಯ ಕೋರಳ್ಳಿ, ಅಜೀತ ಕುಮಸಿ, ಶಿವು ಬುಕ್ಕನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here