ಆಳಂದ: ತಾಲೂಕಿನ ನಿಂಬರ್ಗಾ ಪೊಲೀಸ ಸೇಷ್ಟನ್ ಆವರಣದಲ್ಲಿ ರೌಡಿ ಪರೇಡ್ ನಡೆಸಿದರು. ಪಿಎಸ್‌ಐ ಭೀಮರಾಯ್ ಬಂಕಲ ನೇತೃತ್ವದಲ್ಲಿ ನಡೆದ ರೌಡಿ ಪರೇಡ್‌ನಲ್ಲಿ ೬೫ ರೌಡಿ ಶೀಟರ್‌ಗಳು ಹಾಜರಾಗಿದ್ದರು.
ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಬದಲಾಗಿ, ಅಪರಾದ ಕೃತ್ಯವ್ಯೆಸಗಿದರೆ ಹುಷ್ಯಾರವೆಂದು ಪಿಎಸ್‌ಐ ಬಂಕಲಿ ರವರು ರೌಡಿಗಳಿಗೆ ಖಡಕ್ ವಾರ್ನಿಂಗ್ ನೀಡಿದರು.
ಇದೆ ವೇಳೆ ರೌಡಿಗಳಿಗೆ ಬುದ್ದಿವಾದ ಹೇಳಿದವರು ರೌಡಿ ಶೀಟರ್ ಎಂಬುವುದು ಸಮಾಜಕ್ಕೆ ದೊಡ್ಡ ಕಳಂಕವಿದಂತೆ, ಎಲ್ಲಾ ಕೆಟ್ಟ ಕೆಲಸ ಬಿಟ್ಟು ಸಮಾಜದಲ್ಲಿ ಪ್ರತಿಯೊಬ್ಬರ ಜೊತೆ ಅನ್ಯುನ್ಯವಾಗಿ ಎಲ್ಲರೊಂದಿಗೆ ಬೆರೆತು ಜೀವನ ಸಾಗಿಸಬೇಕು, ಜನರಲ್ಲಿ ಭಯದ ವಾತಾರಣ ಮಾಡಿದರೆ ನಿಮ್ಮಗೆ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಪುನಃಉಚ್ಚರಿಸಿದರು. ನೀವು ಉತ್ತಮ ನಾಗರೀಕರಾಗಿ ಬದಲಾಗಿರುವದು ಮನದಟ್ಟಾದರೆ ನಿಮ್ಮ ಮೇಲಿನ ರೌಡಿಶೀಟರ್ ಎಂಬ ಕಳಂಕದ ಹಣೆಪಟ್ಟಿಯನ್ನು ತೆಗೆದುಹಾಕಲಾಗುವದು ಎಂದರು.
ಯಾವುದೋ ಕೆಟ್ಟ ಘಳಿಗೆಯಲ್ಲಿ ನೀವು ಮಾಡಿದ ತಪ್ಪಿನಿಂದ ರೌಡಿಶೀಟರ್‌ಗಳ ಪಟ್ಟಿಯಲ್ಲಿರಬಹುದು, ಸಮಾಜದಲ್ಲಿ ನಿಮ್ಮಗೂ ಉತ್ತಮವಾದ ಗೌರವ ದೋರಕಬೇಕೆಂದರೆ ನಿಮ್ಮಗೆ ಅಂಟಿರುವಂತ ರೌಡಿ ಎಂಬ ಪಟ್ಟ ಕಳಚಬೇಕು. ಅದಕ್ಕಾಗಿ ಒಳ್ಳೆಯವರಾಗಿ ಬದುಕಿ ಅಂದಾಗ ನಿಮ್ಮಗೂ ನಿಮ್ಮ ಕುಟುಂಬಕ್ಕೂ ಜೊತೆಗೆ ಸಮಾಜಕ್ಕೂ ಹೀತ ಎಂದು ಸಲಹೆ ನೀಡಿದರು.
ಈ ಸಂಧರ್ಭದಲ್ಲಿ ಪೋಲಿಸ್ ಸಿಬ್ಬಂದಿಗಳಾದ ಮಲ್ಲಿಕಾರ್ಜುನ ಹತ್ತಿ, ಪ್ರಶಾಂತ ಪೋದ್ದಾರ, ಶ್ರೀಕಾಂತ ಸುತ್ತಾರ, ಶರಣಮ್ಮಾ ಸಿಂಗೆ, ಸಿದ್ದಾರಾಮ ದಸಮ್ಮಾ, ಮಲ್ಲಗೊಂಡ, ಜಯಶ್ರೀ, ಜಾವೀದ್, ಸಂಜುಕುಮಾರ ಅಡವಿ, ಶಂಕರ್, ಗುರುಲಿಂಗ್ ಮತ್ತಿತರರು ಇದ್ದರು.