ಶರಣರ ಪ್ರವಚನ ಮಹಾಮಂಗಲ: 7ನೇ ಪಟ್ಟಾಧಿಕಾರ ಮಹೋತ್ಸವ

0
12

ಕಲಬುರಗಿ: ಜಿಲ್ಲೆಯ ರಟಕಲ್ ಗ್ರಾಮದ ಶ್ರೀ ರೇವಣಸಿದ್ದೇಶ್ವರ ಹಿರೇಮಠದ ಷ ಬ್ರ ಶ್ರೀ ರೇವಣಸಿದ್ದ ಶಿವಾಚಾರ್ಯರ ಪಟ್ಟಾಧಿಕಾರ ವಾರ್ಷಿಕೋತ್ಸವದ ಮಹೊತ್ಸವ ಅಂಗವಾಗಿ ಜನೇವರಿ ೨೮ ರಿಂದ ಫೆಬ್ರವರಿ ೦೨ ವರೆಗೆ ಶರಣರ ಪ್ರವಚನದ ಮಹಾಮಂಗಲ ಕಾಯ೯ಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ರಟಕಲ ಶ್ರೀ ರೇವಣಸಿದ್ದೇಶ್ವರ ಹಿರೇಮಠದ ಪೀಠಾಧಿಪತಿಗಳಾದ ಶ್ರೀ ರೇವಣಸಿದ್ದ ಶಿವಾಚಾರ್ಯರ ತುಲಾಭಾರ ಕಾರ್ಯಕ್ರಮ ಹಾಗೂ ಅದರ ಜೊತೆಗೆ ಶ್ರೀ ರೇವಣಸಿದ್ದ ಶಿವಾಚಾರ್ಯರ ೭ನೇ ಪಟ್ಟಾದಿಕಾರ ಮಹೊತ್ಸವದ ಕಾರ್ಯಕ್ರಮದಲ್ಲಿ ನಡೆಯಿತು.
ಧಾರ್ಮಿಕ ಕಾರ್ಯಕ್ರಮದ ವೇದಿಕೆ ಮೇಲೆ ರಟಕಲನ ಶ್ರೀ ಸಿದ್ದರಾಮ ಮಹಾಸ್ವಾಮಿಜಿಗಳು, ಗೌರಿಗುಡ್ಢ ರೇವಣಸಿದ್ದ ಶರಣರು, ಬಾಬಣ್ಣ ಹೋಡೆ ಬೀರನಹಳ್ಳಿ, ಶರಣಬಸಪ್ಪ ಮಮಶೆಟ್ಟಿ ಸೆರಿದಂತೆ ಅಪಾರ ಗಣ್ಯರು ಭಾಗವಹಿಸಿದ್ದರು.

Contact Your\'s Advertisement; 9902492681

ನೂರಾರು ಭಕ್ತರು ದೀಪಗಳನ್ನು ಬೆಳಗುತ್ತಾ ತುಲಾಭಾರ ಷಣ್ಮುಖಯ್ಯ ಸ್ವಾಮಿ ದಂಪತಿಗಳು ನೆರವೆರಿಸಿದರು. ಶ್ರೀ ರೇವಣಸಿದ್ದೇಶ್ವರ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ಮನೊರಂಜನೆ ಕಾರ್ಯಕ್ರಮ ಹಾಗೂ ಪಲ್ಲಕ್ಕಿ ಉತ್ಸವ ಜರಗಿತು.

ಈ ಕಾರ್ಯಕ್ರಮದಲ್ಲಿ ರಟಕಲ ಶ್ರೀ ರೇವಣಸಿದ್ದೇಶ್ವರ ಹಿರೇಮಠದ ಪೀಠಾಧಿಪತಿಗಳಾದ ಶ್ರೀ ರೇವಣಸಿದ್ದ ಶಿವಾಚಾರ್ಯ ಮಾತನಾಡಿ, ರಟಕಲ್ ಗ್ರಾಮದ ಎರಡೂ ಮಠಗಳು ಒಂದು ನಾಣ್ಯದ ಎರಡು ಮುಖಗಳಿದಂತೆ. ಗುರು ವಿರಕ್ತರು ಒಂದೇ ಎಂದು ಸಂದೇಶ ಸಾರಿದರು ಎಂದರು. ಭಕ್ತಾದಿಗಳು ಅಂದಕಾರ ಅಳೆದುಹಾಕಿ ಸಂಸ್ಕಾರವಂತರಾಗಬೇಕು ಎಂದು ಹೇಳಿದ ಅವರು, ಆಧ್ಯಾತ್ಮದಲ್ಲಿ ನಂಬಿಕೆ ಇಡಬೇಕು ಎಂದು ನುಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here