ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಕಬ್ಬಿನ ಸಿಪ್ಪಿಗೆ ಬೆಂಕಿ: ಅಪಾರ ನಷ್ಟ

0
32

ಆಳಂದ: ತಾಲೂಕಿನ ಭೂಸನೂರ ಗ್ರಾಮದ ಹತ್ತಿರದ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಬಗ್ಯಾಸ್‌ಗೆ ( ಕಬ್ಬಿನ ಸಿಪ್ಪೆಗೆ ) ಗುರುವಾರ ಸಂಜೆ ಬೆಂಕಿ ತಗುಲಿ ಅಪಾರ ಪ್ರಮಾಣದಲ್ಲಿ ನಷ್ಟವಾದ ಘಟನೆ ಸಂಭವಿಸಿದೆ.

ಸಕ್ಕರೆ ಕಾರ್ಖಾನೆಯ ಬಯಲು ಪ್ರದೇಶದಲ್ಲಿನ ನುರುಸಿದ ಸುಮಾರು ೬೦ ಸಾವಿರ ಟನ್ ದಷ್ಟು ಕಬ್ಬಿನ ಸಿಪ್ಪೆಗೆ ಬೆಂಕಿ ತಗುಲಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಕಾರ್ಖಾನೆಯಿಂದ ಸಿಪ್ಪೆ ಮಾರಾಟ ಮಾಡಲಾಗಿತ್ತು ಎನ್ನಲಾಗಿದೆ. ೨ ಹಿಟಾಚಿ , ೧ ಜೆಸಿಪಿ, ೨ ಲಾರಿಗಳ ಮೂಲಕ ಸಾಗಾಣಿಕ ಮಾಡಲು ಶುರು ಮಾಡಿದಾಗ ಹಿಟಾಚಿಯ ಬೆಂಕಿ ತಗುಲಿ ಕೆನ್ನಾಲೆಗೆ ಸಿಪ್ಪೆ ೨೫ ಸಾವಿರ ಟನ್ನ ಹಾಗೂ ೨ ಹಿಟಾಚಿ , ೧ ಜೆಸಿಪಿ, ೨ ಲಾರಿಗಳು ಸುಟ್ಟು ಕರಕಲಾಗಿದ್ದು ಬೆಂಕಿ ನಂದಿಸಲು ಕಾರಖಾನೆಯ ಕಾರ್ಮಿಕ ವರ್ಗ ಹಾಗೂ ಕಲಬುರಗಿ, ಅಫಜಲ್‌ಪೂರ, ಆಳಂದ ಅಗ್ನಿಶಾಮಕ ಸಿಬ್ಬಂದಿ ಹರ ಸಾಹಸ ಪಟ್ಟು ಬೆಂಕಿ ನಂದಿಸಿ ಮುಂದೆ ಆಗುವ ಹೆಚ್ಚಿನ ಅನಾಹುತವನ್ನು ತಡೆಯುವಲ್ಲಿ ಯಶಸ್ವಿಯಾದರು.

Contact Your\'s Advertisement; 9902492681

ಈ ವೇಳೆ ಬೆಂಕಿಯಿಂದ ಯಾವುದೇ ಜೀವ ಹಾನಿ ಸಂಭವಿಸಿಲ್ಲ ಸಿಪ್ಪೆಯ ಕೆನ್ನಾಲೆ ಬೆಂಕಿ ಹಾಗೂ ಹೊಗೆ ಬಾನೆತ್ತರ ಹೋಗಿರುವದು ಕಂಡು ಜನರು ಹೌಹಾರಿದರು. ಸ್ಥಳಕ್ಕೆ ಕಾರಖಾನೆಯ ಉಪಾಧ್ಯಕ್ಷ ದೇವರಾಜಲು, ಕಬ್ಬು ಅಭಿವೃದ್ದಿ ಅಧಿಕಾರಿ ಶಿವಾನಂದ ವಿ. ನಂದಗಾಂವ ಹಾಗೂ ಸಿಬ್ಬಂದಿ ವರ್ಗ ಹಾಜರಾಗಿ ಹಾನಿಯ ಕುರಿತು ಪರಿಶೀಲಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here