ಸುರಪುರ: ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಸೇವಾ ಸ್ವೀಕಾರ ಕಾರ್ಯಕ್ರಮ ನಡೆಸಲಾಯಿತು.
ನಿಷ್ಠಿ ಕಡ್ಲೆಪ್ಪನವರ ವಿರಕ್ತಮಠದ ಶ್ರೀ ಪ್ರಭುಲಿಂಗ ಸ್ವಾಮೀಜಿ ಸಾನಿಧ್ಯವಹಿಸಿದ್ದರು,ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ ತಾತಾ ಉದ್ಘಾಟಿಸಿ ಮಾತನಾಡಿದರು.ನಗರಸಭೆ ಅಧ್ಯಕ್ಷತೆ ಸುಜಾತಾ ವಿ ಜೇವರ್ಗಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ ಮಾತನಾಡಿ,ಜಿಲ್ಲೆಯಲ್ಲಿ ಸುರಪುರ ತಾಲೂಕು ಸಾಹಿತ್ಯದಲ್ಲಿ ಎತ್ತರ ಸ್ಥಾನದಲ್ಲಿದೆ,ಸುರಪುರ ಮತ್ತು ಶಹಾಪುರದಲ್ಲಿ ಸಾಹಿತಿಗಳ ಸಂಖ್ಯೆ ಹೆಚ್ಚಿದೆ.ಅದರಂತೆ ಇಲ್ಲಿ ನಡೆದ ೩ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಇಡೀ ರಾಜ್ಯದ ಗಮನಸೆಳೆಯುವಂತೆ ನಡೆಸಲಾಯಿತು.ಅದಕ್ಕೆ ಕಾರಣರಾಗಿದ್ದವರು ಸಾಂಸ್ಕೃತಿಕ ರಾಯಭಾರಿ ರಾಜಾ ಮನದಗೋಪಾಲ ನಾಯಕರು,ಇಂದು ಅವರನ್ನು ನಾವೆಲ್ಲರು ಸ್ಮರಿಸಬೇಕು ಎಂದರು.
ಅಲ್ಲದೆ ಇಲ್ಲಿಯವರೆಗೆ ಶ್ರೀನಿವಾಸ ಜಾಲವಾದಿಯವರು ಉತ್ತಮವಾಗಿ ಕೆಲಸ ಮಾಡಿದ್ದಾರೆ.ಅದರಂತೆ ಈಗ ಶರಣಬಸಪ್ಪ ಯಾಳವಾರ ಅವರಿಗೂ ಎಲ್ಲಾ ಕನ್ನಡ ಸಾಹಿತಿಕ ಮನಸ್ಸುಗಳು ಸಹಕಾರ ನೀಡಿ ಉತ್ತಮವಾಗಿ ಕೆಲಸ ಮಾಡಲು ಅನುವು ಮಾಡಿಕೊಡುವಂತೆ ಮನವಿ ಮಾಡಿದರು.ಅಲ್ಲದೆ ಕೆಂಭಾವಿ ವಲಯ ಸೇರಿದಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವಂತೆ ಸಲಹೆ ನೀಡಿದರು.ಅಲ್ಲದೆ ಕೆಂಭಾವಿಯಲ್ಲಿ ಸಭೆಯನ್ನು ಇಲ್ಲಿರುವ ಎಲ್ಲರು ಏರ್ಪಡಿಸಿದರೆ ನಾನು ನಿಮ್ಮೊಂದಿಗೆ ಭಾಗವಹಿಸುವ ಮೂಲಕ ಎಲ್ಲರು ಸೇರಿ ಕನ್ನಡ ಕಟ್ಟುವ ಕೆಲಸಕ್ಕೆ ಮುಂದಾಗೋಣ ಎಂದರು.
ಇದೇ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಾ:ಸುರೇಶ ಸಜ್ಜನ್ ಮಾತನಾಡಿ,ಸುರಪುರಕ್ಕೆ ಐತಿಹಾಸಿಕವಾದ ಸಾಹಿತ್ಯದ ಹಿನ್ನೆಲೆ ಇದೆ,ಹಿಂದಿನವರು ಉತ್ತಮವಾಗಿ ಸಾಹಿತ್ಯದ ಕೆಲಸ ಮಾಡಿದ್ದಾರೆ,ಮುಂದೆಯೂ ಶರಣಬಸಪ್ಪ ಯಾಳವಾರ ಅವರಿಗೆ ಎಲ್ಲ ರೀತಿಯ ನೆರವು ನೀಡುವುದಾಗಿ ತಿಳಿಸಿದರು.
ನಂತರ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದ ನಾಯಕ, ಹುಣಸಗಿ ಕಸಾಪ ತಾಲೂಕು ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ,ನಿಕಟಪೂರ್ವ ಅಧ್ಯಕ್ಷ ಶ್ರೀನಿವಾಸ ಜಾಲವಾದಿ,ನೂತನ ಅಧ್ಯಕ್ಷ ಶರಣಬಸಪ್ಪ ಯಾಳವಾರ ಮಾತನಾಡಿದರು.ಇದೇ ಸಂದರ್ಭದಲ್ಲಿ ಕನ್ನಡ ಧ್ವಜ ಹಸ್ತಾಂತರಿಸುವ ಮೂಲಕ ಸೇವಾ ಸ್ವೀಕಾರ ನಡೆಸಲಾಯಿತು.
ನಂತರ ಯಾದಗಿರಿ ಸರಕಾರಿ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ:ಸುಭಾಶ್ಚಂದ್ರ ಕೌಲಗಿ ಅಧ್ಯಕ್ಷತೆಯಲ್ಲಿ ಯುಗಾದಿ ಕವಿಗೋಷ್ಠಿ ನಡೆಸಲಾಯಿತು.ಮುಖ್ಯ ಅತಿಥಿಗಳಾಗಿ ವಕೀಲರಾದ ದೇವಿಂದ್ರಪ್ಪ ಬೇವಿನಕಟ್ಟಿ,ಜಯಲಲಿತಾ ಪಾಟೀಲ್ ಭಾಗವಹಿಸಿದ್ದರು.
ನಬಿಲಾಲ ಮಕಾಂದಾರ,ಕನಕಪ್ಪ ವಾಗಣಗೇರಿ,ಮಹಾಂತೇಶ ಗೋನಾಲ,ಕುತುಬುದ್ದಿನ್ ಅಮ್ಮಾಪುರ,ಶರಣಗೌಡ ಪಾಟೀಲ್ ಜೈನಾಪುರ ಸೇರಿದಂತೆ ಅನೇಕರು ಕವನ ವಾಚಿಸಿದರು.ಶಾಂತಪ್ಪ ಬೂದಿಹಾಳ,ಮಲ್ಲಿಕಾರ್ಜುನ ಸತ್ಯಂಪೇಟೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.