ಶಹಾಬಾದ: ತಾಲೂಕಿನ ಭಂಕೂರ ಗ್ರಾಮದಲ್ಲಿ ಶನಿವಾರ ಶ್ರೀ ರಾಮಲಿಂಗೇಶ್ವರ ಪಲ್ಲಕ್ಕಿ ಉತ್ಸವ ನೂರಾರು ಭಕ್ತಾಧಿಗಳ ಮಧ್ಯೆ ವಿಜೃಂಭಣೆಯಿಂದ ಜರುಗಿತು.
ಬೆಳಿಗ್ಗೆ ದೇವಸ್ಥಾನದಿಂದ ಮೂರ್ತಿಯನ್ನು ಕಾಗಿಣಾ ನದಿಗೆ ಕರೆದುಕೊಂಡು ಹೋಗಿ ಗಂಗಾಸ್ನಾನ, ನಂತರ ಗ್ರಾಮದ ಪ್ರದಕ್ಷಿಣೆಯ ಮೂಲಕ ದೇವಸ್ಥಾನಕ್ಕೆ ತರಲಾಯಿತು.ನಂತರ ಪುರವಂತರಿಂದ ವಿಶೇಷ ಸೇವೆ ಜರುಗಿದ್ದು ಕಂಡು ಮೈ ಜುಮ್ಮೆನ್ನುವ ಸನ್ನವೇಶ ಕಂಡು ಬಂದಿತು. ರಾಮಲಿಂಗ ಕುಂಬಾರ ಎನ್ನುವ ಪುರವಂತರು ತಮ್ಮ ಕೆನ್ನೆಗೆ ಶಸ್ತ್ರ ಚುಚ್ಚಿಕೊಂಡು ನಂತರ ಅದರಲ್ಲಿ ನೈಲಾನ ಹಗ್ಗವನ್ನು ಹಾಕಿ ಸುಮಾರು ೫೫೧ ಅಡಿ ಹಗ್ಗವನ್ನು ಒಂದು ಕೆನ್ನೆಯಿಂದ ಇನ್ನೊಂದು ಕೆನ್ನೆಯ ಮೂಲಕ ತೆಗೆಯುವ ದೃಶ್ಯ ಮಾತ್ರ ರೋಮಾಂಚನವಾಗಿತ್ತು.ಪಲ್ಲಕ್ಕಿ ಉತ್ಸವದ ನಿಮಿತ್ತ ವಿಶೇಷ ಪೂಜೆ, ಅಭಿಷೇಕ, ಪ್ರಸಾದ ಸೇವೆ ನಡೆಯಿತು.
ಈ ಸಂದರ್ಭದಲ್ಲಿ ಗ್ರಾಮದ ಗಣ್ಯರಾದ ಚನ್ನವೀರಪ್ಪ ಪಾಟೀಲ,ಹೆಚ್.ವಾಯ್.ರಡ್ಡೇರ್,ಹಣಮಂತ ಹೂಗಾರ,ನಾನಾಸಾಬ ಮಾನಕರ್,ಈರಣ್ಣ ಕಾರ್ಗಿಲ್,ಶರಣು ರಸ್ತಾಪೂರ,ಸಂಗಮೇಶ ಚಿತ್ತಾಪೂರ,ಉಮೇಶ ಪಾಟೀಲ,ವಿಜಯಕುಮಾರ ಬೆಳಗುಂಪಿ,ಲಕ್ಷ್ಮಿಕಾಂತ ಅಳೊಳ್ಳಿ, ಅಮರೇಶ ಹೂಗಾರ,ಈರಪ್ಪ ಹೂಗಾರ ಸೇರಿದಂತೆ ಅನೇಕರು ಇದ್ದರು.