ಕಲ್ಯಾಣ ಕರ್ನಾಟಕ ಜಾನಪದ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮ

0
19

ಕಲಬುರಗಿ: ಇತ್ತಿಚೇಗೆ ತಾಲೂಕಿನ ಗೊಳಾ ಗ್ರಾಮದಲ್ಲಿ ಲಲಿತ ಕಲಾ ಸೇವಾ ಸಂಸ್ಥೆ ಮತ್ತಿಮಡು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಕಲ್ಯಾಣ ಕರ್ನಾಟಕ ಜಾನಪದ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್.ಚನ್ನೂರ ಅವರು ಉದ್ಘಾಟಿಸಿ ಮಾತನಾಡುತ್ತಾ ಮನುಷ್ಯನಿಗೆ ಸಂಸ್ಕಾರ ಅಗತ್ಯ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ಆಸಕ್ತಿ ಇರುವುದು ಕೂಡ ಒಂದು ಸಂಸ್ಕಾರ ಗ್ರಾಮೀಣ ಭಾಗದಲ್ಲಿ ಇಂಥ ಕಾರ್ಯಕ್ರಮ ನಿರಂತರ ನಡೆಯಬೇಕು ಎಂದು ಅನಿಸಿಕೆ ವ್ಯಕ್ತ ಪಡಿಸಿದರು.

ಪೂಜ್ಯ ಚನ್ನಮಲ್ಲ ಮಹಾಸ್ವಾಮಿಜಿ ಅವರು ಸಾನಿಧ್ಯ ವಹಿಸಿ ಮಾತನಾಡುತ್ತಾ ಗ್ರಾಮೀಣ ಭಾಗದಲ್ಲಿ ಇಂಥ ಕಾರ್ಯಕ್ರಮ ಮಾಡುವುದರಿಂದ ನಮ್ಮ ಕಲೆ ಸಂಸ್ಕೃತಿಯ ಅರಿವು ಜನರಲ್ಲಿ ಮೂಡಿಸುವ ಪ್ರಯತ್ನ ಇದಾಗಿದೆ ನಶಿಸಿ ಹೋಗುತ್ತಿರುವ ಜಾನಪದ ಕಲೆ ಉಳಿಸುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಮಾಡುವ ಕಾರ್ಯ ಶ್ಲಾಘನೀಯ ಎಂದು ಅಭಿಪ್ರಾಯ ಪಟ್ಟರು.

Contact Your\'s Advertisement; 9902492681

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ  ಮಲ್ಲಿಕಾರ್ಜುನ ಮಣ್ಣೂರ ಫರಹತಾಬಾದ, ಶ್ರೀಧರ ಹೊಸಮನಿ, ಕಲ್ಲಿನಾಥ ಹಿರೇಮಠ ಹಿತ್ತಲಶಿರೂರ, ಸೂರ್ಯಕಾಂತ ಶಾಸ್ತ್ರಿಗಳು ದೋತ್ತರಗಾಂವ, ಗುರುಲಿಂಗಯ್ಯ ಸ್ವಾಮಿ ಬಸವಂತವಾಡಿ, ಭಂಡಯ್ಯ ಶಾಸ್ತ್ರೀಗಳು ಸುಂಟನೂರ, ಜಗದೀಶ ಶರಣರು ನಗನೂರ, ಶಂಕರ ರುದ್ರವಾಡಿ, ಶಿವಕುಮಾರ ಹಿರೇಮಠ ಜಾಲಳ್ಳಿ, ದತ್ತಾತ್ರೇಯ ಮುದಕಣ್, ಮೌನೇಶ ಬೆಣ್ಣೂರ, ರವಿ ಸ್ವಾಮಿ ಗೋಟೂರ, ಅನೀಲ ಮಠಪತಿ ಭೀಮಳ್ಳಿ, ಸೋಮಶೇಖರ ಕಲ್ಯಾಣಿ, ಶಿವಾನಂದ ಹಿತ್ತಲಶಿರೂರ ಇವರು ಸಂಗಿತ ಕಾರ್ಯಕ್ರಮ ನಡೆಸಿಕೊಟ್ಟರು. ಲಲಿತ ಕಲಾ ಸೇವಾ ಸಂಸ್ಥೆಯ ಕಾರ್ಯದರ್ಶಿ ಅಣ್ಣಾರಾವ ಶಳ್ಳಗಿ ಮತ್ತಿಮೂಡ ಹಾಗೂ ವೇದಿಕೆ ಮೇಲೆ ಅನೇಕ ಗಣ್ಯರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here