ಶಹಾಬಾದ: ನಗರದಿಂದ ಜೇವರ್ಗಿ ಹೋಗುವ ಮಧ್ಯದ ಫೀರೋಜಾಬಾದ ವೃತ್ತದಲ್ಲಿನ ಬಸ್ ತಂಗುದಾಣದಲ್ಲಿ ಕೂಡುವ ಆಸನಗಳಿಲ್ಲ.ನೆಲ ಕುಸಿದು ಹೋಗಿ ಬೀಳುವ ಹಂತಕ್ಕೆ ತಲುಪಿದ್ದು , ಅದನ್ನು ಕೂಡಲೇ ದುರಸ್ತಿಪಡಿಸಿ ಪ್ರಯಾಣಕರಿಗೆ ಅನುಕೂಲ ಮಾಡಿಕೊಡಬೇಕೆಂದು ಕಾಂಗ್ರೆಸ್ ಮುಖಂಡ ಪ್ರವೀಣ ರಾಜನ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ನಿಧನ ವಾರ್ತೆ: ಸೋಮಶೇಖರ ಮರಗೋಳ
ಕೆಲವೇ ವರ್ಷಗಳ ಹಿಂದೆ ನಿರ್ಮಿಸಿದ ತಂಗುದಾಣ ಗುತ್ತಿಗೆದಾರನ ಕಳಪೆ ಮಟ್ಟದ ಕಾಮಗಾರಿಯಿಂದ ಬೀಳುವ ಹಂತದಲ್ಲಿದೆ,ಅಲ್ಲದೇ ತಂಗುದಾಣದಲ್ಲಿರುವ ಕೂಡುವ ಆಸನಗಳು ಕಳಚಿ ಬಿದ್ದಿವೆ.ನೆಲ ಕುಸಿದು ಹೋಗಿದೆ.ಇದರಿಂದ ಪ್ರಯಾಣಿಕರಿಗೆ ಕೂಡಲು ಆಸನಗಳಿಲ್ಲದೇ, ಮಣ್ಣಿನಲ್ಲೇ ಕೂಡುವಂತ ಪರಿಸ್ಥಿತಿ ಉಂಟಾಗಿದೆ.
ಸುಮಾರು ವರ್ಷಗಳಿಂದ ಇಷ್ಟೆಲ್ಲಾ ಸಮಸ್ಯೆಯಿದ್ದರೂ ಸಂಬಂಧಿಸಿದ ಇಲಾಖೆಯವರು ಯಾವುದೇ ಕ್ರಮಕೈಗೊಳ್ಳದಿರುವುದು ದುರ್ದೈವದ ಸಂಗತಿ. ಕೂಡಲೇ ದುರಸ್ತಿಗೊಳಿಸಿ, ಸೌಲಭ್ಯ ಒದಗಿಸಿ.ಇಲ್ಲದಿದ್ದರೇ ಹೊಸದಾದ ತಂಗುದಾಣ ನಿರ್ಮಿಸಿಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಪ್ರವೀಣ ರಾಜನ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ರಾಜ್ಯದ ಎಲ್ಲಾ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳ ತನಿಖೆ ಮಾಡಿ: ವೆಂಕೋಬದೊರೆ