ನೊಂದ-ದಮನಿತ ಮಹಿಳೆಯರಿಗೆ ಸೂರು ಒದಗಿಸುವ ಕೆಲಸ ಮಾಡುತ್ತೆನೆ-ಮತ್ತಿಮಡು

0
91

ಶಹಾಬಾದ: ಸಮುದಾಯದ ದಮನಿತ, ನೊಂದ ಮಹಿಳೆಯರನ್ನು ಸಮಾಜಮುಖಿಗಳಾಗುವ ನಿಟ್ಟಿನಲ್ಲಿ ಜೀವನಜ್ಯೋತಿ ಸಂಸ್ಥೆ ಅರಿವು ಮೂಡಿಸುವ ಕೆಲಸ ಉತ್ತಮವಾಗಿ ಮಾಡುತ್ತಿರುವುದು ಶ್ಲಾಘನೀಯವಾದುದು ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಹೇಳಿದರು.

ಅವರು ಬುಧವಾರ ನಗರದ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಜೀವನ ಜ್ಯೋತಿ ಮಹಿಳಾ ಅಭಿವೃದ್ಧಿ ಸಂಸ್ಥೆ (ರಿ) ಕಲಬುರ್ಗಿ ವತಿಯಿಂದ ಆಯೋಜಿಸಲಾದ 15ನೇ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಇದನ್ನೂ ಓದಿ: ಫೀರೋಜಾಬಾದ ವೃತ್ತದ ಬಸ್ ತಂಗುದಾಣವನ್ನು ದುರಸ್ತಿಗೊಳಿಸಲು ಆಗ್ರಹ

ನೊಂದ ಮಹಿಳೆಯರಿಗೆ ಸರಕಾರದಿಂದ ಸಿಗುವ ಸೌಲಭ್ಯ, ಸವಲತ್ತುಗಳನ್ನು ನೀಡುವ ನಿಟ್ಟಿನಲ್ಲಿ ಎಲ್ಲಾ ಕ್ರಮಕೈಗೊಳ್ಳಲಾಗುವುದು.ಅದಕ್ಕಾಗಿ ಸಾಮಾಜಿಕ ಸವಲತ್ತುಗಳು ಮತ್ತು ಅಂತಹವರಿಗೆ ಸೂರು ನೀಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುತ್ತೆನೆ ಎಂದರು.

ಸಮಾಜದಲ್ಲಿ ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಸಹಾಯ ಒದಗಿಸುವಲ್ಲಿ ಮಹಿಳೆಯರಿಗೆ ಕಾನೂನು ನೆರವು, ತಾತ್ಕಾಲಿಕ ಆಶ್ರಯ, ಆರ್ಥಿಕ ಪರಿಹಾರ, ಹಾಗೂ ತರಬೇತಿ ನೀಡಿ ಸ್ವಾವಲಂಬಿಗಳಾಗುವಂತೆ ಮಾಡಿ ಸ್ವತಂತ್ರ ಬದುಕು ಸಾಗಿಸಲು ನೆರವಾಗುವುದರ ಜೊತೆಗೆ, ಅವರನ್ನು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸಶಕ್ತರನ್ನಾಗಿಸುವ ನಿಟ್ಟಿನಲ್ಲಿ ಸರಕಾರದ ಜತೆಯಾಗಿ ಸಮಾಜದ ಎಲ್ಲಾ ವರ್ಗದ ಜನರು ಸಹಾಯ ಹಸ್ತ ಚಾಚಬೇಕಿದೆ ಎಂದರು.

ಇದನ್ನೂ ಓದಿ: ನಿಧನ ವಾರ್ತೆ: ಸೋಮಶೇಖರ ಮರಗೋಳ

ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ ಮಾತನಾಡಿ, ಸರಕಾರದಿಂದ ಮಹಿಳೆಯರಿಗಾಗಿಯೇ ಚೇತನ ಯೋಜನೆ, ಧನಶ್ರೀ, ಉದ್ಯೋಗಿನಿ ಯೋಜನೆಗಳನ್ನು ಜಾರಿಗೆ ತಂದಿದೆ.ಅಲ್ಲದೇ ಸಣ್ಣ ಉಧ್ಯಮಗಳಿಗೆ ನಿಗಮದ ವತಿಯಿಂದ ಆರ್ಥಿಕ ಸಹಾಯ ನೀಡಲಾಗುತ್ತಿದೆ.ಆದ್ದರಿಂದ ಈ ಎಲ್ಲಾ ಸವಲತ್ತುಗಳನ್ನು ಪಡೆದುಕೊಳ್ಳಬೇಕಾದರೆ ಮಹಿಳೆಯರು ಮುಂದೆ ಬರಬೇಕು.ಸರಕಾರದ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕೆಂದು ಹೇಳಿದರು.

ಜೀವನ ಜ್ಯೋತಿ ಮಹಿಳಾ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಶರಣಮ್ಮ ತಳವಾರ ಅಧ್ಯಕ್ಷತೆ ವಹಿಸಿದ್ದರು.ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ, ಬಿಜೆಪಿ ಮಂಡಲ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಅಜೀಂ ಪ್ರೇಮಜಿ ಫೌಂಡೇಶನ ರುದ್ರೇಶ.ಎಸ್, ಕೆ.ಹೆಚ್.ಪಿ.ಟಿ ವ್ಯವಸ್ಥಾಪಕರಾದ ಶಿವಯೋಗಿ ಮಠಪತಿ, ಕೆಸಾಪ್ಸ ಅಧಿಕಾರಿ ಹಣಮಂತ ಜಾಧವ, ಸ್ವಸ್ತಿ ಪ್ರಾದೇಶಿಕ ಮೇಲ್ವಿಚಾರಣ ಅಧಿಕಾರಿ ಸುಭಾಷ ಗುಡದೂರ, ಕಲಬುರಗಿ ಡಾನ್ ಬಾಸ್ಕೋ ಸಂಸ್ಥೆಯ ಫಾದರ್ ಟಾಮಿ ಚಿರಾಕಲ್ ,ಪಿಎಸ್‍ಐ ಸುವರ್ಣಾ ಮಲಶೆಟ್ಟಿ, ಲತಾ ಅಲಬನೂರ್,ರಾಜಶೇಖರ್ ಮಾಡ್ನಲ್ ಸೇರಿದಂತೆ ಅನೇಕರು ಇದ್ದರು.

ಈ ಸಂದರ್ಭದಲ್ಲಿ 10 ಜನರಿಗೆ ಕೋವಿಡ್ ಲಸಿಕೆ ಮತ್ತು 400 ಜನರಿಗೆ ಆರೋಗ್ಯ ತಪಾಸಣೆ ಮಾಡಲಾಯಿತು. ಅಲ್ಲದೇ 60 ಜನ ಮಹಿಳೆಯರಿಗೆ ನಮ್ಮ ನಿಗಮದಿಂದ ಸಾಲ ಮತ್ತು ಸಹಾಯಧನವನ್ನು ನೀಡಲಾಯಿತು.

ಇದನ್ನೂ ಓದಿ: 40% ಕಮಿಷನ್ ನಲ್ಲಿ ಮೋದಿಯವರಿಗೂ ಪಾಲಿದೆಯಾ?: ಮಾಜಿ ಸಿಎಂ ಸಿದ್ದರಾಮಯ್ಯ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here