ಶಹಾಬಾದ: ನಗರದ ಗಣ್ಯರಾದ ಹಾಗೂ ಉದ್ಯಮಿಗಳಾದ ಸೋಮಶೇಖರ.ಆರ್.ಮರಗೋಳ(85) ಬುಧವಾರದಂದು ನಿಧನರಾದರು.
ಇವರಿಗೆ ಹೆಂಡತಿ, ನಾಲ್ಕು ಸುಪುತ್ರಿಯರು ,ನಾಲ್ಕು ಸುಪುತ್ರರು ಹಾಗೂ ಅಪಾರ ಬಂಧು ಬಳಗದವರು ಇದ್ದಾರೆ.
ಇವರ ಅಂತ್ಯಕ್ರಿಯೆ ಗುರುವಾರ ಬೆಳಿಗ್ಗೆ 11 ಗಂಟೆಗೆ ನಗರದ ಲಕ್ಷ್ಮಿ ಗಂಜ್‍ನ ಉಪಖಜಾನೆ ಕಚೇರಿಯ ಸಮೀಪದ ಸ್ವಂತ ಹೊಲದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲದವರು ತಿಳಿಸಿದ್ದಾರೆ.
ಸಂತಾಪ: ಸೋಮಶೇಖರ.ಆರ್.ಮರಗೋಳ ನಿಧನಕ್ಕೆ ಶಾಸಕ ಬಸವರಾಜ ಮತ್ತಿಮಡು, ನಗರಸಬೆಯ ಮಾಜಿ ಸದಸ್ಯ ಅರುಣ ಪಟ್ಟಣಕರ್,ಶಿವಕುಮಾರ ಇಂಗಿನಶೆಟ್ಟಿ, ಕಸಾಪ ತಾಲೂಕಾಧ್ಯಕ್ಷ ಶರಣಬಸಪ್ಪ ಕೋಬಾಳ, ವೀರಶೈವ ಸಮಾಜದ ಅಧ್ಯಕ್ಷ ಸೂರ್ಯಕಾಂತ ಕೋಬಾಳ, ಮೃತ್ಯುಂಜಯ್ ಹಿರೇಮಠ,ಚನ್ನಬಸಪ್ಪ ಕೊಲ್ಲೂರ್,ಆಸ್ಪಲ್ಲಿ ಶಾಲೆಯ ಮುಖ್ಯಗುರು ಹಾಗೂ ಶಿಕ್ಷಕ ವರ್ಗದವರು ಶೋಕ ವ್ಯಕ್ತಪಡಿಸಿದ್ದಾರೆ.