ನಾಳೆ ಕಸಾಪದಿಂದ ಕನ್ನಡ ಅಭಿಮಾನದ ದಿನ ಆಚರಣೆ

0
112

ಕಲಬುರಗಿ: ಕನ್ನಡ ಭಾಷೆಯನ್ನು ಹೆತ್ತ ತಾಯಿಯಂತೆ, ಗುರು ಹಿರಿಯರನ್ನ ತಂದೆಯಂತೆ, ಅಭಿಮಾನವನ್ನ ದೇವರಂತೆ, ಕನ್ನಡ ಚಿತ್ರರಂಗವನ್ನ ತನ್ನ ಸ್ವಂತ ಕುಟುಂಬದಂತೆ ಕಂಡಂತಹ ಕಲಾ ತಪಸ್ವಿಯಾಗಿದ್ದ ವರ ನಟ-ಕನ್ನಡಿಗರ ಆರಾದ್ಯ ದೈವ ಡಾ.ರಾಜಕುಮಾರ ಅವರ ಜನ್ಮದಿನದ ಪ್ರಯುಕ್ತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ‘ಕನ್ನಡ ಅಭಿಮಾನದ ದಿನ’ ವನ್ನಾಗಿ ಆಚರಿಸಿ, ಕನ್ನಡ ಚಲನಚಿತ್ರ ಗೀತೆಗಳ ಪ್ರಸ್ತುತಿ ಹಾಗೂ ಕನ್ನಡ ಭಾಷೆಯ ಬೆಳವಣಿಗೆಗಾಗಿ ಶ್ರಮಿಸುತ್ತಿರುವ ಮಹನೀಯರಿಗೆ ವಿಶೇಷ ಗೌರವ ಸಮ್ಮಾನದ ವಿಶೇಷ ಕಾರ್ಯಕ್ರಮವೊಂದನ್ನು ಇಂದು (ರವಿವಾರ) ಸಾಯಂಕಾಲ ೫.೩೦ ಕ್ಕೆ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.

ಇದನ್ನೂ ಓದಿ: ಪಿಎಸ್ಐ ಆಕ್ರಮ: ಮತ್ತೋರ್ವ ಆರೋಪಿ ಬಂಧನ

Contact Your\'s Advertisement; 9902492681

ಇದೇ ಮೊದಲ ಬಾರಿ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವರನಟನ ಜನ್ಮದಿನವನ್ನು ವಿಶೇಷ ರೀತಿಯಲ್ಲಿ ಆಚರಿಸಲು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಸೂಚಿಸಿದ್ದಾರೆ. ಇದೊಂದು ಉತ್ತಮ ಬೆಳವಣಿಗೆ. ತಮ್ಮ ನಟನೆಯ ಮೂಲಕ ಮಾತೃಭಾಷಾಭಿಮಾನ ಹೆಚ್ಚಿಸುವ ನಿಟ್ಟಿನಲ್ಲಿ ಡಾ.ರಾಜಕುಮಾರ ಅವರ ಕೊಡುಗೆ ಅಪಾರವಾಗಿದ್ದು, ಈ ನಿಟ್ಟಿನಲ್ಲಿ ಪರಿಷತ್ತು ಇಂಥ ಕಾರ್ಯಕ್ರಮದ ಮೂಲಕ ನಟನೊಬ್ಬನ ವಿಶೇಷ ವ್ಯಕ್ತಿತ್ವ ಪರಿಚಯಿಸುವ ಅಪರೂಪದ ಕಾರ್ಯ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಮಾಜಿ ಸಚಿವ ಮಾಲೀಕಯ್ಯಾ ವೆಂಕಯ್ಯಾ ಗುತ್ತೇದಾರ ಸಮಾರಂಭ ಉದ್ಘಾಟಿಸಲಿದ್ದು, ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಸಂಗೀತ ಕಲಾವಿದೆ ಡಾ.ಛಾಯಾ ಭರತನೂರ, ಜಿಲ್ಲಾ ಕಸಾಪ ಪದಾದಿಕಾರಿಗಳಾದ ಶಿವರಾಜ ಅಂಡಗಿ, ಯಶವಂತರಾಯ ಅಷ್ಠಗಿ, ಶರಣರಾಜ ಛಪ್ಪರಬಂದಿ, ವಿನೋದ ಜೇನವೇರಿ, ಶಕುಂತಲಾ ಪಾಟೀಲ ಜಾವಳಿ, ಕಲ್ಯಾಣಕುಮಾರ ಶೀಲವಂತ, ಶಿಲ್ಪಾ ಜೋಶಿ, ಸ್ನೇಹಲತಾ ಕಮಕನೂರ, ರಾಜೇಂದ್ರ ಮಾಡಬೂಳ ಸೇರಿದಂತೆ ಅನೇಕರಿರುವರು.

ಇದನ್ನೂ ಓದಿ: ಸಹಕಾರ ಇಲಾಖೆಯಲ್ಲಿ ಲಂಚಾವತಾರ: ಬೆಚ್ಚಿಬೀಳುವ ಮಾಹಿತಿ ಹೊರಗೆಡವಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here