ಆಳಂದ: ಪಟ್ಟಣದ ತಾಪಂ ಕಚೇರಿಯಲ್ಲಿ ಆರೋಗ್ಯ ಇಲಾಖೆ, ಕಲಬುರಗಿ ಮಾರ್ಗದರ್ಶಿ ಸಂಸ್ಥೆ ಮತ್ತು ಅಜೀಮ್ ಪ್ರೇಮಜಿ ಫೌಂಡೇಷನ್ ಆಶ್ರಯದಲ್ಲಿ ಕೋವಿಡ್-೧೯ ಲಸಿಕಾಕರಣ ಯಶಸ್ವೀಗೆ ಶ್ರಮಿಸಿದ ಕಾರ್ಯಕರ್ತರಿಗೆ ಪ್ರಮಾಣ ಪತ್ರ ವಿತರಣೆ ಸಮಾರಂ ನಡೆಯಿತು.
ಇದನ್ನೂ ಓದಿ: ನಿರುಗುಡಿ ಗ್ರಾಮಕ್ಕೆ ವಕ್ಕರಿಸಿದ ಬಿರುಗಾಳಿಗೆ ೬೦ಕ್ಕೂ ಹೆಚ್ಚು ಮನೆಗಳಿಗೆ ಹಾನಿ
ಈ ಸಮಾರಂಭದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸಂಗೀತಾ ಪಾಟೀಲ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಲಸಿಕಾಕರಣ ಕಾರ್ಯಕ್ಕೆ ಯಶಸ್ವೀಗೆ ಕಾರ್ಯಕರ್ತರ ಶ್ರಮಿಸಿದ್ದಾರೆ. ಮುಂದೆಯೂ ಸಹ ಆರೋಗ್ಯ ಇಲಾಖೆಯ ಕಾರ್ಯಕ್ರಮಗಳಿಗೆ ಸಹಕಾರ ನೀಡಬೇಕು ಎಂದು ಹೇಳಿದರು. ಅಲ್ಲದೆ, ಇದೇ ವೇಳೆ ೩೫ ಕಾರ್ಯಕರ್ತೆಯರಿಗೆ ಪ್ರಮಾಣ ಪತ್ರ ವಿತರಿಸಿದರು.
ಇದನ್ನೂ ಓದಿ: ರಸ್ತೆ ಅಪಘಾತ: ಕಾಂಗ್ರೆಸ್ ಬ್ಲಾಕ್ ಮುಖಂಡ ಸಾವು
ವೇದಿಕೆಯ ಮೇಲೆ ಅಜೀಮ ಪ್ರೇಮಜಿ ಫೌಂಡೇಷನ್ ಜಿಲ್ಲಾ ಸಂಯೋಜಕ ಮಹಾದೇವ ಮೂಲಗೆ ತಾಲೂಕು ಸಂಪನ್ಮೂಲ ವ್ಯಕ್ತಿ ಗುಂಡಪ್ಪಾ ಕಾಟೆಕರ್, ಇಬ್ರಾಹಿಂ, ಶಿವಾನಂದ ಚಿಲಾಮಣಿ, ಕಲಬುರಗಿ ಮಾರ್ಗದರ್ಶಿ ಸಂಸ್ಥೆಯ ನಿರ್ದೇಶಕ ಆನಂದರಾಜ ಮತ್ತಿತರು ಪಾಲ್ಗೊಂಡಿದ್ದರು.