ಕಲಬುರಗಿ: ಹಿರಿಯರು ಅನುಭಾವದ ಖನಿಜ. ಅವರ ಪ್ರತಿಯೊಂದ ಮಾತು ಕಿರಿಯರಿಗೆ ಸ್ಪೂರ್ತಿ. ಹಿರಿಯರು ಕುಟುಂಬದ ಏಳಿಗೆಗಾಗಿ ಸಾಕಷ್ಟು ದುಡಿದಿರುತ್ತಾರೆ. ಅವರ ಇಳಿವಯಸ್ಸಿನಲ್ಲಿ ಕುಟುಂಬಕ್ಕೆ ಭಾರವೆಂದು ಭಾವಿಸದೆ, ಅವರನ್ನು ಚೆನ್ನಾಗಿ ಆರೈಕೆ ಮಾಡಬೇಕು. ವೃದ್ಧಾಶ್ರಮಕ್ಕೆ ನೂಕುವ ನೀಚ ಬುದ್ದಿ ಮಾಡದೆ, ಹಿರಿಯರನ್ನು ಗೌರವಿಸುವ ಮೂಲಕ ಸಂಸ್ಕಾರಯುತ ಸಮಾಜ ನಿರ್ಮಿಸುವುದು ಈಗಿನ ಯುವ ಪೀಳಿಗೆಯ ಮೇಲಿದೆ ಎಂದು ಸಮಾಜ ಸೇವಕ, ಮುಖಂಡ ಸಂಜೀವಕುಮಾರ ಶೆಟ್ಟಿ ಹೇಳಿದರು.
ನಗರದ ಆಳಂದ ರಸ್ತೆಯ ಕೆಎಚ್‌ಬಿ ಗ್ರೀನ್ ಪಾರ್ಕನಲ್ಲ್ಲಿ ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘ ಮತ್ತು ’ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಸಂಜೆ ಏರ್ಪಡಿಲಾಗಿದ್ದ ಹಿರಿಯರಿಗೆ ಗೌರವಿಸುವ ಮತ್ತು ಜ್ಞಾನ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಇದನ್ನೂ ಓದಿ: ರಸ್ತೆ ಅಪಘಾತ: ಕಾಂಗ್ರೆಸ್ ಬ್ಲಾಕ್ ಮುಖಂಡ ಸಾವು
ಪ್ರಗತಿಪರ ಚಿಂತಕ ಶಿವಕಾಂತ ಚಿಮ್ಮಾ ಮಾತನಾಡಿ, ಅವಿಭಕ್ತ ಕುಟುಂಬಗಳು ಪ್ರಸ್ತುತ ದಿನಗಳಲ್ಲಿ ಮಾಯವಾಗುತ್ತಿವೆ. ಕಿರಿಯರು, ಹಿರಿಯರನ್ನು ಅನುಸರಿಸಬೇಕು. ಕೌಟುಂಬಿಕ ವ್ಯವಸ್ಥೆಯ ಸಫಲತೆಯಲ್ಲಿ ಸತಿ-ಪತಿಗಳ ಸಮಾನ ಪಾತ್ರವಿದೆ. ಸಂಸ್ಕಾರ, ಮಾನವೀಯ ಮೌಲ್ಯಗಳು ಬಿತ್ತುವ ಕಾರ್ಯ ನಿರಂತರವಾಗಿ ಜರುಗಬೇಕಾಗಿದೆ. ಯುವಶಕ್ತಿಯ ಸಂಪೂರ್ಣ ಸದುಪಯೋಗ ಮಾಡಿಕೊಂಡರೆ ಭಾರತ ವಿಶ್ವಕ್ಕೆ ಗುರುವಾಗಲು ಸಾಧ್ಯವಿದೆ ಎಂದರು.
ಹಿರಿಯ ಸಮಾಜ ಸೇವಕ ದಂಪತಿಗಳಾದ ವಿಜಯಲಕ್ಷ್ಮೀ ಶಿವಪುತ್ರಪ್ಪ ಪಾಟೀಲ, ಸುಗಮ ಅಂಬಾರಾಯ ವಾಡಿ, ಯುವ ಸಮಾಜ ಸೇವಕ ದಂಪತಿಗಳಾದ ಪೂರ್ಣಿಮಾ ರಾಘವೇಂದ್ರ ಬೋಗಲೆ ಅವರಿಗೆ ಸತ್ಕರಿಸಿ, ಗೌರವಿಸಲಾಯಿತು. ಆಗಮಿಸಿದ್ದ ಎಲ್ಲರಿಗೂ ಶರಣರು, ಮಹನೀಯರು, ಸ್ವಾತಂತ್ರ್ಯ ಹೋರಾಟಗಾರರು ಸೇರಿದಂತೆ ಮುಂತಾದ ಪ್ರಮುಖ ಪುಸ್ತಕಗಳನ್ನು ಉಚಿತವಾಗಿ ವಿತರಿಸಿ, ಜ್ಞಾನ ಸಂಭ್ರಮ ಜರುಗಿತು. ಸಮಾಜಮುಖಿ ಈ ಕಾರ್ಯಕ್ಕೆ ಅಪಾರವಾದ ಮೆಚ್ಚುಗೆ ವ್ಯಕ್ತವಾಯಿತು.
ಇದನ್ನೂ ಓದಿ: ನಿರುಗುಡಿ ಗ್ರಾಮಕ್ಕೆ ವಕ್ಕರಿಸಿದ ಬಿರುಗಾಳಿಗೆ ೬೦ಕ್ಕೂ ಹೆಚ್ಚು ಮನೆಗಳಿಗೆ ಹಾನಿ
ಕಾರ್ಯಕ್ರಮದಲ್ಲಿ ಚಂದ್ರಕಲಾ ಪಿ.ಪಾಟೀಲ, ಪಂಪ್ಪಣ್ಣ ಎಸ್.ಪಾಟೀಲ, ಎಚ್.ಬಿ.ಪಾಟೀಲ, ಶರಣಬಸಪ್ಪ ಮಾಲಿಬಿರಾದಾರ ದೇಗಾಂವ, ಬಾಲಕೃಷ್ಣ ಕುಲಕರ್ಣಿ, ಸಂಗಮೇಶ್ವರ ಸರಡಗಿ, ಸೂರ್ಯಕಾಂತ ಸಾವಳಗಿ, ಚಂದ್ರಕಾಂತ ತಳವಾರ, ವೀರೇಶ ಬೋಳಶೆಟ್ಟಿ ನರೋಣಾ, ಲೋಕಯ್ಯ, ರವೀಂದ್ರ ಗುತ್ತೇದಾರ, ಮಲಕಾರಿ ಪೂಜಾರಿ, ಶ್ರೀನಿವಾಸ ಬುಜ್ಜಿ, ವೀರಯ್ಯ ಹಿರೇಮಠ, ದಿಲಿಪ ಬಕರೆ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.