ಸಾತ್ವಿಕ ಶರಣ ಚೇತನ ವಿ. ಸಿದ್ಧರಾಮಣ್ಣ

0
27

ಕಲಬುರಗಿ: ಬದ್ಧತೆಯೊಂದಿಗೆ ಜನಮಾನದಲ್ಲಿ ಬಸವತತ್ವ, ಸಿದ್ಧಾಂತವನ್ನು ಜಾಗೃತಗೊಳಿಸಿದ ಶತಾಯುಷಿ ವಿ. ಸಿದ್ಧರಾಮಣ್ಣನವರು ಸಾತ್ವಿಕ ಶರಣಜೀವಿಯಾಗಿದ್ದಾರೆ ಎಂದು ಬಸವಮಾರ್ಗ ಪ್ರತಿಷ್ಠಾನದ ಅಧ್ಯಕ್ಷ, ಶರಣ ಸಾಹಿತಿ ವಿಶ್ವಾರಾಧ್ಯ ಸತ್ಯಂಪೇಟೆ ಅಭಿಪ್ರಾಯಪಟ್ಟರು.

ಬಸವಪರ ಸಂಘಟನೆಗಳು ಹಾಗೂ ಬಸವ ಸಮಿತಿ ಇವುಗಳ ಆಶ್ರಯದಲ್ಲಿ ಇಲ್ಲಿನ ಜಯನಗರದ ಅನುಭವ ಮಂಟಪದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ವಿ. ಸಿದ್ಧರಾಮಣ್ಣ ಶರಣರ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಜಂಗಮ ಪದವಿಗಿಂತ ಶರಣ ಪದವಿ ದೊಡ್ಡದು. ಶರಣರ ಚಿಂತನೆ, ತತ್ವಗಳನ್ನು ಅನುಸರಿಸಬೇಕು. ಆತ್ಮವಂಚನೆಯಿಂದ ಬದುಕಬಾರದು. ಜನಮೆಚ್ಚುವುದಕ್ಕಿಂತ ಮನಮೆಚ್ಚಿ ಬದುಕಬೇಕು ಎಂಬುದಕ್ಕೆ ಸಿದ್ಧರಾಮಣ್ಣನವರ ಸವೆಸಿದ ಬದುಕು ನಮಗೆ ದಾರಿದೀಪವಾಗಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಅಭಿನಂದನಾ ನುಡಿಗಳನ್ನಾಡಿದ ಪ್ರಗತಿಪರ ಚಿಂತಕಿ ಡಾ. ಮೀನಾಕ್ಷಿ ಬಾಳಿ, ಅಭಿನಂದನಾ ಸಮಾರಂಭಗಳ ಹಾವಳಿ, ಅಭಿನಂದನ ಗ್ರಂಥಗಳ ಸುಗ್ಗಿಯ ಈ ಕಾಲದಲ್ಲಿ ನಿಜವಾದ ಬಸವತತ್ವಾನುಯಾಯಿಯ ಅಭಿನಂದನೆ ಮಾಡುತ್ತಿರುವುದು ನಿಜಕ್ಕೂ ಆಶಾದಾಯಕ ಬೆಳವಣಿಗೆಯಾಗಿದೆ. ಸಿದ್ಧರಾಮಣ್ಣನವರ ನಡೆ-ನುಡಿ ನಮ್ಮೆಲ್ಲರನ್ನು ಪ್ರಭಾವಿಸಿದ್ದು, ಸಮತೆಯೆಂಬುದು ಯೋಗ ನೋಡಾ ಎಂದು ಲೋಕ ದುಗುಡಕ್ಕೆ ಬಲಿಯಾಗದೆ ಬಸವತತ್ವವನ್ನೇ ಉಸಿರಾಗಿಸಿಕೊಂಡ ವಿ. ಸಿದ್ಧರಾಮಣ್ಣ ಶರಣರು ಉಪಮಿಸಬಾರದ ಉಪಮಾತೀತರಾಗಿದ್ದಾರೆ ಎಂದು ಬಣ್ಣಿಸಿದರು.

ಕಲಬುರಗಿ ಬಸವ ಸಮಿತಿ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ ಅಧ್ಯಕ್ಷತೆ ವಹಿಸಿದ್ದರು. ಕುಪೇಂದ್ರ ಪಾಟೀಲ, ಪ್ರಕಾಶ ಗಂದಿಗುಡಿ ವೇದಿಕೆಯಲ್ಲಿದ್ದರು. ಡಾ. ವೀರಣ್ಣ ದಂಡೆ, ಡಾ. ಮಲ್ಲಿಕಾರ್ಜುನ ವಡ್ಡನಕೇರಿ, ಆರ್.ಜಿ. ಶೆಟಗಾರ, ರಾಜಶೇಖರ ಯಂಕಂಚಿ, ಪ್ರಭುಲಿಂಗ ಮಹಾಗಾಂವಕರ್, ಕೆ.ಎ. ಕಲಬುರಗಿ, ಬಸವರಾಜ ಧೂಳಾಗುಂಡಿ, ಮಲ್ಲಿಕಾರ್ಜುನ ಪಾಲಾಮೂರ ಉಪಸ್ಥಿತರಿದ್ದರು. ಮಹಾಂತೇಶ ಕುಂಬಾರ ನಿರೂಪಿಸಿದರು. ಡಾ. ಶಿವರಂಜನ ಸತ್ಯಂಪೇಟೆ ಸ್ವಾಗತಿಸಿದರು. ರವೀಂದ್ರ ಶಾಬಾದಿ ಪ್ರಾಸ್ತಾವಿಕ ಮಾತನಾಡಿದರು. ವಿಶ್ವನಾಥ ಮಂಗಲಗಿ ಪ್ರಾರ್ಥಿಸಿದರು. ಸಂತೋಷ ಹೂಗಾರ ವಂದಿಸಿದರು.

ವಿಶ್ವದಲ್ಲಿನ ಅಜ್ಞಾನ, ಅಂಧಕಾರ ನಿವಾರಣೆಗೆ ಬಂದ ಬಸವಣ್ಣನವರು ವಿಶ್ವಗುರು. ಜಗತ್ತಿನ ಎಲ್ಲ ರೋಗಗಳಿಗೂ ಮದ್ದು ನೀಡಿದ ಬಸವಣ್ಣ ಭವ ರೋಗದ ವೈದ್ಯ. ಜಾತಿ ರಹಿತ, ಕಾಯಕ ನಿರತ. ಧರ್ಮ ಸಹಿತ ಸಮಾಜ ಕಟ್ಟಿದ ಬಸವಣ್ಣನಿಂದ ಅಸಾಧ್ಯವೆಲ್ಲವೂ ಸಾಧ್ಯವಾಯಿತು. – ವಿ. ಸಿದ್ಧರಾಮಣ್ಣ, ಶತಾಯುಷಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here