ಹಿಂದೂ ಮುಸ್ಲಿಮರು ಒಗ್ಗಟ್ಟಾಗಿ ಆರ್ಥಿಕ, ಸಾಮಾಜಿಕ ಅಭಿವೃದ್ದಿಗೆ ಕೈಜೋಡಿಸಬೇಕು: ಪ್ರಿಯಾಂಕ್ ಖರ್ಗೆ

0
32

ಕಲಬುರಗಿ: ದೇಶದ ಎಲ್ಲ ಧರ್ಮಗಳು ಒಗ್ಗಟ್ಟಾಗಿ ಇದ್ದು ದೇಶದ ಆರ್ಥಿಕ ಹಾಗೂ ಸಾಮಾಜಿಕ ಸುಭದ್ರತೆ ನಿರ್ಮಿಸುವ ಮೂಲಕ ಧರ್ಮ ಧರ್ಮ ಗಳ ನಡುವೆ ಜಗಳ ಹಚ್ಚುವ ದೇಶದ್ರೋಹಿ ಶಕ್ತಿಗಳ ವಿರುದ್ದ ಹೋರಾಟ ನಡೆಸಬೇಕಿದೆ ಎಂದು ಮಾಜಿ‌ ಸಚಿವರಾದ, ಶಾಸಕರಾದ, ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಹೇಳಿದರು.

ಬಿಲಗುಂದಿ‌ ಫೌಂಡೇಶನ್ ವತಿಯಿಂದ ಕಲಬುರಗಿ ನಗರದ ಶಾನ್ ಭಾಗ ಕಲ್ಯಾಣ ಮಂಟಪದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರಿಗೆ ಅಹಾರ ಕಿಟ್ ವಿತರಿಸಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಇದನ್ನೂ ಓದಿ: ಡಾ.ಅಂಬೇಡ್ಕರ ಅಪ್ಪಟ ದೇಶಪ್ರೇಮಿ, ಅಹಿಂಸಾವಾದಿಯಾಗಿದ್ದರು: ಪೊ. ಪೋತೆ

ಹಿಜಾಬ್, ಹಲಾಲ್ ಕಟ್, ದೇವಸ್ಥಾನ, ಮಸೀದಿ ಹೀಗೆ ಹಲವಾರು ವಿಷಯಗಳನ್ನು ಮುಂದಿಟ್ಟುಕೊಂಡು ಹಿಂದೂ ಮುಸ್ಲಿಂರ ನಡುವೆ ವೈಮನಸ್ಸು ಮೂಡಿಸಲು ಪ್ರಯತ್ನ ನಡೆದಿದೆ. ಇತ್ತೀಚಿಗೆ ಮುಸ್ಲಿಂರಿಂದ ಮಾವಿನ ಹಣ್ಣು ಖರೀದಿ ಅವರೊಂದಿಗೆ ವ್ಯಾಪಾರ ವ್ಯವಹಾರ ಮಾಡಬೇಡಿ ಎಂದು ಹೇಳಲಾಗುತ್ತಿದೆ ಇದು‌ ಸರಿಯಲ್ಲ. ಮುಸ್ಲಿಂರ ಬಳಿ ವ್ಯಾಪಾರ ಮಾಡಬೇಡಿ ಎನ್ನುವವರು ಮುಸ್ಲಿಂ ದೇಶಗಳಿಂದ ಪೆಟ್ರೋಲ್ ಖರೀದಿ ಮಾಡುವುದನ್ನು ನಿಲ್ಲಿಸಲಿ ಎಂದು ಸವಾಲು ಹಾಕಿದರು.

ಸಂವಿಧಾನ ಇರುವವರೆಗೆ ನಾವೆಲ್ಲ ಇರುತ್ತೇವೆ. ನಾನು ಜನನಾಯಕನಲ್ಲ ಆ ಭಗವಂತ ನಿಮ್ಮೆಲ್ಲರ ಸೇವೆ ಮಾಡಲು‌ ಕಳಿಸಿರುವ ಸಾಮಾನ್ಯ ಮನುಷ್ಯ ಆದರೆ ಧರ್ಮದ ಹೆಸರಲ್ಲಿ ದೇಶದ ಮುಸ್ಲೀಮರನ್ನ ಹಿಂದೂಗಳನ್ನು‌ ವಿಭಾಗಿಸುವವರ ವಿರುದ್ದ‌ ಹೋರಾಟ ನಡೆಸುತ್ತೇನೆ ನೊಂದವರ ಧ್ವನಿಯಾಗಿ ನಿಮ್ಮ ಮನೆಯ ಮಗನಾಗಿ ಕೆಲಸ ಮಾಡುತ್ತೇನೆ ಎಂದರು.

ಇದನ್ನೂ ಓದಿ: ವಜೀರಗಾಂವ ಗ್ರಾಮದಲ್ಲಿ ನೂತನ ಕನಕದಾಸರ ವೃತ ಉದ್ಘಾಟನೆ

ಕಲಬುರಗಿ ಜಿಲ್ಲೆ ಭ್ರಾತೃತ್ವಕ್ಕೆ ಹೆಸರಾಗಿದೆ. ಸೂಫಿ ಸಂತರ ನಾಡಿದು. ಇಲ್ಲಿ ಶರಣಬಸವೇಶ್ವರ ಇದ್ದಾರೆ, ಖಾಜಾ ಬಂದೇನವಾಜ್ ಇದ್ದಾರೆ ಬುದ್ದನೂ ಇದ್ದಾರೆ.‌ ಇಂತಹ ಜಾಗದಲ್ಲಿ ಸಮಾಜವನ್ನು ವಿಭಾಗಿಸುವ ಪ್ರಯತ್ನ ಫಲ ನೀಡುವುದಿಲ್ಲ ಎಂದು ಖರ್ಗೆ ಹೇಳಿದರು.

ಸಂತೋಷ ಬಿಲಗುಂದಿ ಇಂದು 2000 ಆಹಾರ ಕಿಟ್ ವಿತರಿಸುತ್ತಿದ್ದಾರೆ. ಇದು ಅವರು ಮುಸ್ಲಿಮರ ಪ್ರೀತಿಯ ಸೇವೆಯಾಗಿದೆ. ಮುಂದಿನ ವರ್ಷ 20,000 ಆಹಾರ ಕಿಟ್ ವಿತರಿಸುವ ಶಕ್ತಿ ಆ ಭಗವಂತ ನೀಡಲಿ ಎಂದರು.

ಹಾಫಜ್ ಮಹಮ್ಮದ್ ಫಕ್ರುದ್ದೀನ್ ಸಾಬ್ ಶೇಖ್ ರೋಜಾ ಮಾತನಾಡಿ ಹಿಂದೂಸ್ಥಾನದಲ್ಲಿ ಹಿಂದೂ ಮುಸ್ಲೀಮರು ಬೇರೆಯಲ್ಲ. ಈ ದೇಶ ಬಸವಣ್ಣ, ಅಂಬೇಡ್ಕರ ಅವರ ನಾಡು ಇದನ್ನು ಒಡೆಯುವ ಯಾವ ಪ್ರಯತ್ನವನ್ನು ಮುಸ್ಲೀಮರು ಬೆಂಬಲಿಸುವುದಿಲ್ಲ. ಶಾಂತಿ ಸಂದೇಶ ಸಾರುವ ಭ್ರಾತೃತ್ವದ ಮಹತ್ವವನ್ನು ತಿಳಿಸುವ ಪವಿತ್ರ ರಂಜಾನ್ ಸಂದರ್ಭದಲ್ಲಿ ಸಂತೋಷ ಬಿಲಗುಂದಿ ಅವರು ಆಹಾರ ಕಿಟ್ ವಿತರಿಸುತ್ತಿರುವುದು ಖುಷಿಯ ಸಂಗತಿ.

ಡಿಎಮ್.ಎಸ್.ಎಸ್. ಕಚೇರಿಯಲ್ಲಿ ಪ್ರೊ.ಬಿ.ಕೃಷ್ಣಪ್ಪ ರವರ ೨೪ನೇ ಪುಣ್ಯಸ್ಮರಣೆ

ಸಂತೋಷ ಬಿಲಗುಂದಿ ಮಾತನಾಡಿ, ಕೋವಿಡ್ ಮಹಾಮಾರಿ ಸಂದರ್ಭಗಳಲ್ಲಿ ಎರಡು ವರ್ಷಗಳ ಕಾಲ ನಾವು ಸಂಕಟದಲ್ಲಿದ್ದೆವು ಆಗ ಯಾರು ಯಾರೊಂದಿಗೂ ಮುಕ್ತವಾಗಿ ಬೆರೆಯಲಾಗುತ್ತಿರಲಿಲ್ಲ. ಈ ಸಂದರ್ಭದಲ್ಲಿ ನಾನು ನಿಮ್ಮೆನ್ನೆಲ್ಲ ಭೇಟಿಯಾಗುತ್ತಿರುವುದು ಬಹಳ ಖುಷಿ ತಂದಿದೆ. ನಿಮ್ಮೆಲ್ಲರ ಸಹಕಾರದಿಂದ ಬಿಲಗುಂದಿ ಪೌಂಡೇಶನ್ ಮತ್ತಷ್ಟು ಸಾಮಾಜಿಕ ಕಾರ್ಯಾ ಮಾಡಲು ಉತ್ಸಕವಾಗಿದೆ ಎಂದರು.

ವೇದಿಕೆಯ ಮೇಲೆ ಸಂತೋಷ ಬಿಲಗುಂದಿ, ನಜರ್ ಹುಸೇನ್, ಫಾರೂಖ್ ಸೇಠ್, ಸಂತೋಷ ಪಾಟೀಲ, ಸಿದ್ದು ಪಾಟೀಲ, ಪ್ರವೀಣ್ ಹರವಾಳ, ಡಾ ಕಿರಣ್ ದೇಶಮುಖ, ಮುನ್ನಾ, ಸಚಿನ್ ಸಿರವಾಳ, ರಾಜೀವ್ ಜಾನೆ, ಈರಣ್ಣ ಝಳಕಿ ಸೇರಿದಂತೆ ಮತ್ತಿತರಿದ್ದರು.

ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೆವೂರಗೆ ಸನ್ಮಾನ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here