ಜನಾಗ್ರಹ ಸಂಸ್ಥೆಯ ಜಾಗೃತಿ ಮೂಡಿಸುವ ಕಾರ್ಯ ಶ್ಲಾಘನೀಯ: ಜಿಲ್ಲಾಧಿಕಾರಿ ಯಶ್ವಂತ ಗುರುಕರ್

0
137

ಕಲಬುರಗಿ: ಬೆಂಗಳೂರಿನ ಜನಾಗ್ರಹ ಸಂಸ್ಥೆ ವತಿಯಿಂದ ವಿವಿಧ ಸಂಘ ಸಂಸ್ಥೆಗಳು ಆಯೋಜಿಸಿದ್ದ ವಾರ್ಡ ಸಮಿತಿ ಜನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಕಲ್ಬುರ್ಗಿ ಜಿಲ್ಲಾಧಿಕಾರಿ ಯಶ್ವಂತ ಗುರುಕರ್, ಜನಾಗ್ರಹ ಸಂಸ್ಥೆಯ ಜಾಗೃತಿ ಮೂಡಿಸುವ ಕಾರ್ಯ ಶ್ಲಾಘನೀಯವಾದದ್ದು ಎಂದು ಹೇಳಿದರು.

ಮಹಾನಗರ ಪಾಲಿಕೆಯು ನಗರದ ಸಾರ್ವಜನಿಕರಿಗೆ ವಾರ್ಡ ಸದಸ್ಯತ್ವ ಪಡೆಯಲು ಅವಕಾಶ ಮಾಡಿಕೊಟ್ಟಿದ್ದು ಸಾರ್ವಜನಿಕರು ಆಸಕ್ತಿಯಿಂದ ಮುಂದೆ ಬರಬೇಕು.ವಾರ್ಡ ಸಮಿತಿಯಿಂದ ನಗರದ ಅಭಿವೃದ್ಧಿಗೆ ವೇಗ ಸಿಗುತ್ತದೆ.ಪಾಲಿಕೆ ಸದಸ್ಯರ ಅಧಿಕಾರ ಬಲವರ್ಧನೆಯಾಗುತ್ತದೆ ,ನಾಗರಿಕರು, ಮಹಾನಗರ ಪಾಲಿಕೆ ಅಧಿಕಾರಿಗಳ ಮತ್ತು ತಮ್ಮ ಕಾರ್ಪೊರೇಟರ್ ಅವರ ಸಹಕಾರದೊಂದಿಗೆ ಜನರು ತಮ್ಮ ಹಾಗೂ ನೆರೆಹೊರೆಯ ಪ್ರದೇಶಗಳ ಅಭಿವೃದ್ಧಿಗಾಗಿ ಜೊತೆಗೆ ನಗರದ ಕುಂದು ಕೊರತೆಗಳನ್ನು ತ್ವರಿತವಾಗಿ ಪರಿಹರಿಸಲು ವಾರ್ಡ ಸಮಿತಿಯು ಅನುವು ಮಾಡಿಕೊಡುತ್ತದೆ ಎಂದು ಹೇಳಿದರು.

Contact Your\'s Advertisement; 9902492681

ಇದೇ ವೇಳೆ ಮಾತನಾಡಿದ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಉಮೇಶ ಶೆಟ್ಟಿ, ಅವಧಿ ವಿಸ್ತರಣೆಯಾದರೂ ನಿಗದಿಯಷ್ಟು ಅರ್ಜಿಗಳು ಬಾರದ ಹಿನ್ನಲೆಯಲ್ಲಿ, ವಾರ್ಡ ಸಮಿತಿಯ ಸದಸ್ಯತ್ವ, ಅದರ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.ವಾರ್ಡ್ ಸಮಿತಿ ರಚನೆಯಿಂದ ನಗರದ ಅಭಿವೃದ್ಧಿಗೆ ಚಾಲನೆ ನೀಡಿದಂತಾಗುತ್ತದೆ.ಜನರಲ್ಲಿ ಈ ಕುರಿತು ತಿಳುವಳಿಕೆ ಮೂಡಿಸುವುದು ಸೂಕ್ತವಾಗಿದೆ ಎಂದರು.ನಂತರ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ,ಪರಿಷತ್ತು ಸದಾ ಜನಪರ ಕಾಳಜಿಯುಳ್ಳ ಕಾರ್ಯಗಳಿಗೆ ಬೆಂಬಲ ನೀಡುತ್ತದೆ ಎಂದರು.ಜನರಲ್ಲಿರುವ ತಪ್ಪು ಕಲ್ಪನೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ಜಾಗೃತಿ ಅಭಿಯಾನದ ಮೂಲಕ ನೆರವೇರುತ್ತದೆ ಎಂದರು.

ಜನಾಗ್ರಹ ಸಂಸ್ಥೆಯ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ ಎಲ್ಲ ಸಂಘ ಸಂಸ್ಥೆಯವರು ಮುಕ್ತ ಮನದಿಂದ ಅಭಿಯಾನಕ್ಕೆ ಬೆಂಬಲ ಸೂಚಿಸಿದರು. ಈ ಸಂದರ್ಭದಲ್ಲಿ ಇನ್ಸ್ಟಿಟುಶನ್ ಆಫ್ ಎಂಜಿನಿಯರ್ಸ ಸಂಸ್ಥೆಯ ಕಾರ್ಯದರ್ಶಿ ಹನ್ಮಯ್ಯ ಬೇಲೂರೆ, ಉದಯ ಬಳ್ಳಾರಿ, ವೀರಶೈವ ಮಹಾಸಭಾದ ಕಾರ್ಯದರ್ಶಿ ಸೋಮಶೇಖರ ಹಿರೇಮಠ, ಬಸವ ಸಮಿತಿಯ ಕಾರ್ಯದರ್ಶಿ ಡಾ ಕೆ ಎಸ್ ವಾಲಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ,ಕಾರ್ಯದರ್ಶಿ ಶಿವರಾಜ ಅಂಡಗಿ, ಸ್ಮಾರ್ಟ ಸಿಟಿ ಕ್ಲಬ್ ಜಂಟಿ ಕಾರ್ಯದರ್ಶಿ ಎಸ್ ಎಸ್ ನಿಂಗಪ್ಪ ,ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಹಾಗೂ ಸಮಾಜ ಸೇವಕ ಉಮೇಶ ಶೆಟ್ಟಿ, ರಾಮು ಪವಾರ್, ಮುಡಬಿ ಗುಂಡೇರಾವ್,ಜನಾಗ್ರಹ ಸಂಸ್ಥೆಯ ಸಂಯೋಜಕ ಅಧಿಕಾರಿ ಶ್ರಾವಣಯೋಗಿ ಹಿರೇಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here