ಆಳಂದ: ಶಿಕ್ಷಣದ ಜೋತೆಗೆ ವಿದ್ಯಾರ್ಥಿಗಳು ಮತ್ತು ಪ್ರಶಿಕ್ಷಣಾರ್ಥಿಗಳಿಗೆ ನೌತಿಕ ಮೌಲ್ಯಗಳ ಬೋಧನೆಗೆ ಒತ್ತು ನೀಡಿದರೆ ಮಾತ್ರ ಸಮಾಜ ಹಾಗೂ ದೇಶಕ್ಕೆ ಉಪಯುಕ್ತವಾಗಿ ಭಾರತ ವಿಶ್ವಗುರುವಾಗಲಿದೆ ಎಂದು ಹಿಮಾಲಯನ ಯೋಗ ಋಷಿ ಮತ್ತು ಭಾರತೀಯ ಸಂಸ್ಕೃತಿಯ ಆಧ್ಯಾತ್ಮೀಕ ಪ್ರವಚನ ರೂವಾರಿ ಶ್ರೀ ನಿರಂಜನ ಮಹಾಸ್ವಾಮೀಜಿ ಹೇಳಿದರು.
ಪಟ್ಟಣದ ಪೂಜ್ಯ ರಾಜಶೇಖರ ಮಹಾಸ್ವಾಮೀಜಿ ಬಿಎಡ್ ಕಾಲೇಜಿನಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಆಯೋಜಿಸಿದ್ದ ಶಿಕ್ಷಕ ಮತ್ತು ನೈತಿಕ ಮೌಲ್ಯಗಳ ಮಹತ್ವ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಶಿಕ್ಷಣದಿಂದ ಉನ್ನತ ಅತ್ಯುನ್ನತ ಪದವಿಗಳು ಹುದ್ದೆಗಳ ಪಡೆದರೆ ಸಾಲದು ನೈತಿಕ ಮೌಲ್ಯಗಳಿದ್ದರೆ ಬದುಕಿಗೊಂದು ಅರ್ಥ ಕಲ್ಪಿಸಲು ಸಾಧ್ಯವಿದೆ. ಇಂದು ಶಿಕ್ಷಣದ ಜೊತೆ ಜೊತೆಗೆ ಒಳ್ಳೆಯ ಸಂಸ್ಕಾರ, ವ್ಯಕ್ತಿಯ ಘನತೆ ಗೌರವ ಶಿಸ್ತು, ಸೈಯಮ, ಸಂಸ್ಕಾರ ಸೇವಾ ಮನೋಭಾ, ಮಾನಸಿಕ ಮತ್ತು ದೈಹಿಕ ಆರೋಗ್ಯವಾಗಿರಲು ಯೋಗ ಧ್ಯಾನ, ಪ್ರಾರ್ಥನೆ ಬೆಳೆಸಿಕೊಳ್ಳಬೇಕು ಎಂದರು.
ಇಂದಿನ ಪ್ರಶಿಕ್ಷಣಾರ್ಥಿಗಳು ನಾಳೆ ಶಿಕ್ಷಕರಾಗಿ ಹೊರಹೊಮ್ಮಿದ ಮೇಲೆ ಮಕ್ಕಳ ಮಾರ್ಗದರ್ಶಕರು, ದೇಶದ ಭವ್ಯ ಶಿಲ್ಪಿಗಳಾಗುತ್ತಾರೆ. ಸಮಾಜದಲ್ಲಿ ಶಿಕ್ಷಕನಿಗೆ ಗುರುವಿನಸ್ಥಾನ ಪೂಜ್ಯನಿಯ ಸ್ಥಾನ ಕಲ್ಪಿಸಲಾಗಿದೆ. ಇಂಥ ಗುರುವಾದ ಮೇಲೆ ಓದು ಮತ್ತು ಕಲಿಕೆ ನಿಲ್ಲಿಸಬಾರದು ಜೀವನ ಪರ್ಯಯಂತರ ಓದು ಕಲಿಕೆಯನ್ನು ನಿರಂತರವಾಗಿ ಮುಂದುವರೆಸಬೇಕು. ಒಂದೊಮ್ಮೆ ಇದನ್ನು ನಿಲ್ಲಿಸಿದರೆ ನಿಶ್ಯಬ್ದವಾದಂತೆ. ಹೀಗಾಗಿ ವಿದ್ಯಾರ್ಥಿಗಳನ್ನು ಶಿಕ್ಷಣದ ಬೋಧನೆಯ ಜೊತೆಗೆ ಮೌಲ್ಯ ಮತ್ತು ಸಂಸ್ಕಾರವಂತರನ್ನಾಗಿ ಮಾಡಲು ಮೊದಲು ಶಿಕ್ಷಕರಾದವರು ಪರಿಣಿತಿ, ಕಠಿಣ ಪರಿಶ್ರಮ ಪಟ್ಟರೆ ಭಾರತ ನಿರ್ಮಾಣದ ರೂವಾರಿಗಳಾಗಲು ಸಾಧ್ಯವಿದೆ ಎಂದು ಅವರು ಸಲಹೆ ನೀಡಿದರು.
ಬಿಇಡಿ ಕಾಲೇಜಿನ ಪ್ರಾಚಾರ್ಯ ಅಶೋಕ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪದವಿ ಕಾಲೇಜಿನ ಪ್ರಾಚಾರ್ಯ ಕಲ್ಯಾಣಿ ಸಾವಳಗಿ, ಕಸಾಪ ಅಧ್ಯಕ್ಷ ಹಣಮಂತ ಶೇರಿ, ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ಬುಕ್ಕೆ, ಗೋವಿಂದ ಹುಸೇನಖಾನ್, ಸುಧಾಕರ ಖಾಂಡೇಕರ, ಶಿಕ್ಷಕ ಶರಣಬಸಪ್ಪ ವಡಗಾಂವ, ಶಾಂತೇಶ ಹೂಗಾರ, ಮಲ್ಲಿನಾಥ ತುಕ್ಕಾಣೆ, ಮಹಾಂತಪ್ಪ ನಿಂಗಶೆಟ್ಟಿ, ರಾಜೇಂದ್ರ ಭಾವಿ ಪಾಲ್ಗೊಂಡಿದ್ದರು. ಬಿ.ಎಡ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.