ಶಹಾಬಾದ: ಧರ್ಮರಕ್ಷಣೆಯ ಬಗ್ಗೆ ಜಗತ್ತಿಗೆ ಸಾರಿ ಹೇಳಿದ ಆಚಾರ್ಯತ್ರಯರಲ್ಲಿ ಶಂಕರಾಚಾರ್ಯರು ಮೊದಲಿಗರು ಅವರ ಆದರ್ಶ ಗುಣಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ಸಾಗಬೇಕು ಎಂದು ಶಿಕ್ಷಕ ಶರಣು ತುಂಗಳ ಹೇಳಿದರು.
ಅವರು ಶುಕ್ರವಾರ ನಗರದ ಶಹಾಬಾದ ಪತ್ತಿನ ಸಹಕಾರ ಸಂಘದಲ್ಲಿ ಆಯೋಜಿಸಲಾದ ಶ್ರೀ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಧರ್ಮ ಅವನತಿಯಲ್ಲಿ ಸಾಗುತ್ತಿರುವಾಗ ಜ್ಞಾನದ ಮೂಲಕ ಧರ್ಮ ರಕ್ಷಣೆಗೆ ನಿಂತ ಮಹಾನೀಯರು ಶ್ರೀ ಶಂಕರಾಚಾರ್ಯರು ಇಂದು ಅವರ ಜಯಂತಿ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ. ಮಹಾನ್ ನಾಯಕರುಗಳ ಆದರ್ಶ ಗುಣಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ನಡೆಯುವಂತೆ ತಿಳಿಸಿದರು.
ಸಂಘದ ನಿರ್ದೇಶಕರಾದ ಶಿವಾನಂದ ಪಾಟೀಲ ಮಾತನಾಡಿ,ಸಮಾಜದ ಸುಧಾರಣೆಗೆ ಶ್ರಮಿಸಿದ ಆದಿ ಗುರು ಶಂಕರಾಚಾರ್ಯರರು ದೇಶದ ವಿವಿದೆಡೆ ಸಂಚರಿಸಿ ಅದ್ವೈತ ತತ್ವವನ್ನು ಸಾರುತ್ತಾ ಜಾಗೃತಿ ಮೂಡಿಸಿ ಹಿಂದೂ ಧರ್ಮವನ್ನು ಪುನರುತ್ಥಾನ ಮಾಡಿದರು ಎಂದು ತಿಳಿಸಿದರು.
ಅವರು ೩೨ ವ? ಜೀವಿತಾವಧಿಯಲ್ಲಿ ಭಗವದ್ಗೀತೆ, ಉಪನಿ?ತ್ತು, ಬ್ರಹ್ಮಸೂತ್ರಗಳಿಗೆ ಬಾ?ವನ್ನು ಬರೆದ ಮೊದಲಿಗರಾಗಿದ್ದರು. ಯಾವುದೇ ಮತ, ಪಂಥವನ್ನು ಸ್ಥಾಪಿಸದೆ ವೇದ ಸಂಪ್ರದಾಯವನ್ನು ಎತ್ತಿ ಹಿಡಿದಿದ್ದರು ಎಂದರು.
ಮಾಜಿ ತಾಪಂ ಸದಸ್ಯ ನಿಂಗಣ್ಣ ಹುಳಗೋಳಕರ್ ಮಾತನಾಡಿ, ಭಾರತದಲ್ಲಿ ಹಿಂದೂ ಧರ್ಮ ೮ ನೇ ಶತಮಾನದಲ್ಲಿ ಸಂಕ? ಎದುರಿಸಿತ್ತು. ಈ ಸಂದರ್ಭದಲ್ಲಿ ಅದ್ವೈತ ಸಿದ್ದಾಂತದಡಿಯಲ್ಲಿ ವೈಚಾರಿಕತೆಯಲ್ಲಿ ಹೊಸ ಕ್ರಾಂತಿ ನಡೆಸಿದರು. ದೇಶದ ನಾಲ್ಕು ದಿಕ್ಕಿನಲ್ಲೂ ಸಂಚರಿಸಿ ೭ ಮಠಗಳು, ದೇವಾಲಯಗಳು, ಗುರುಪೀಠಗಳು, ಗುರು ಕುಲ ಹೀಗೆ ಅನೇಕ ಕಾರ್ಯಗಳೊಂದಿಗೆ ಹಿಂದೂ ಧರ್ಮವನ್ನು ಸಂರಕ್ಷಿಸಿದ್ದರು. ಜಗದ್ಗುರುಗಳಾಗಿ ದೈವಾಂಶ ಸಂಭೂತರಾಗಿ ಗುರುತಿಸಿಕೊಂಡಿದ್ದರು ಎಂದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಸದಾನಂದ ಕುಂಬಾರ, ಲೋಹಿತ್ ಕಟ್ಟಿ, ಶಿವಶರಣಪ್ಪ ಕುಂಬಾರ ಸೇರಿದಂತೆ ಅನೇಕರು ಇದ್ದರು.