ಆಜಾನ್‌ಗೆ ವಿರೋಧಿಸಿ ಶ್ರೀರಾಮ ಸೇನೆ ಅಭಿಯಾನ: ಮಸೀದಿ ಮುಂದೆ ಕಾವಲು ಕುಳಿತ ದಲಿತ ಸಂಘಟನೆ

0
83

ಕಲಬುರಗಿ:ಅಜಾನ್ ವಿರುದ್ಧ ಶ್ರೀರಾಮ ಸೇನೆ ಕರೆ ನೀಡಿದ ಸುಪ್ರಭಾತ ಅಭಿಯಾನಕ್ಕೆ ವಿರೋದ ವ್ಯಕ್ತವಾಗಿದೆ. ಮುಸ್ಲಿಂ ಸಮುದಾಯ ಜತೆಗೆ ದಲಿತ ಸಮುದಾಯದ, ಜೆಡಿಎಸ್ ಕಾರ್ಯಕರ್ತರು ಮಸೀದಿಗೆ ಕಾವಲಾಗಿ ನಿಂತಿದ್ದಾರೆ. ಇದರ ಮಧ್ಯೆಯೂ ಹನೂಮಾನ ಚಾಲಿಸಾ ಪಠಣ ಮಾಡುತ್ತ ತೆರಳುತ್ತಿರುವ ಶ್ರೀ ರಾಮ್ ಸೇನೆ ಕಾರ್ಯಕರ್ತರನ್ನ ಪೊಲೀಸರು ಬಂಧಿಸಿದ್ದಾರೆ.

Contact Your\'s Advertisement; 9902492681

ಇಂದು ನಸುಕಿನ ಜಾವ ಸುಪ್ರಭಾತ ಹಾಕಿದ ಶ್ರೀರಾಮ ಸೇನೆ ಕಾರ್ಯಕರ್ತರು, ನಂತರ ಮಧ್ಯಾನ ಹನುಮಾನ ಚಾಳಿಸ ಪಠಣಕ್ಕೆ ಸಿದ್ದತೆ ಮಾಡಿಕೊಂಡಿದ್ದರು. ಸುಪರ್ ಮಾರ್ಕೇಟ್ ಮಸೀದಿ ಬಳಿ ಇರುವ ಹನುಮಾನ ದೇವಸ್ಥಾನದಲ್ಲಿ ಹನುಮಾನ ಚಾಳಿಸ್ ಪಠಣಕ್ಕೆ ಶ್ರೀರಾಮ ಸೇನೆ ಮುಂದಾಗಿದ್ದು, ಜಗತ್ ವೃತ್ತದಿಂದ ಸುಪರ್ ಮಾರ್ಕೆಟ್ ವರೆಗೆ ಪಾದಯಾತ್ರೆ ಮುಲಕ ತೆರಳಿ ಹನುಮಾನ ಚಾಳಿಸ್ ಉದ್ದೇಶವನ್ನು ಹೊಂದಿದ್ದರು.

ಇದನ್ನೂ ಓದಿ: ಆಜಾನ್ ಮತ್ತು ಭಜನ್ ವಿಚಾರ: ಶಾಂತಿಗೆ ಕೊಳ್ಳಿ ಇಡುತ್ತಿರುವ ಪ್ರಮೋದ್‌ ಮುತಾಲಿಕ್‌ʼರನ್ನು ಒಳಗೆ ಹಾಕಿ: ಮಾಜಿ ಸಿಎಂ

ಆದ್ರೆ ಮುಸ್ಲಿಂ ಸಮುದಾಯಕ್ಕೆ ದಲಿತ ಸಂಘಟನೆಗಳು, ಜೆಡಿಎಸ್ ಕಾರ್ಯಕರ್ತರು ಬೆನ್ನೇಲಬಾಗಿ ನಿಂತಿದ್ದು, ನಾವು ಕಾವಲಿದ್ದೇವೆ. ಯಾರು ಬರ್ತಿರೋ ಬನ್ನಿ ಎಂದು ದಲಿತ ಸೇನೆ ಕಾರ್ಯಕರ್ತರು ಮಸಜೀದ್ ಬಳಿ ಕಾವಲು ಕುಳಿತಿದರು. ಹನೂಮಾನ ಚಾಲಿಸಾ ಪಠಣ ಮಾಡುತ್ತ ಹೊರಟ ೨೦ಕ್ಕೂ ಅಧಿಕ ಜನ ಶ್ರೀ ರಾಮ್ ಸೇನೆ ಕಾರ್ಯಕರ್ತರನ್ನ ಪೋಲಿಸರು ವಶಕ್ಕೆ ಪಡೆದರು.

ಇನ್ನು ಮುಂಜಾಗ್ರತಾ ಕ್ರಮವಾಗಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ನಗರದ ಬಹುತೇಕ ಪೊಲೀಸ್ ಸಿಬ್ಬಂದಿಗಳನ್ನ ಮಸಿದಿ ಮತ್ತು ಹನುಮಾನ ದೇವಸ್ಥಾನದ ಸುತ್ತ ನಿಯೋಜಿನೆ ಮಾಡಿರುವ ಪೋಲಿಸ್ ಇಲಾಖೆ ಯಾವುದೆ ಅಹಿತಕರ ಘಟನೆಗಳು ನಡೆಯದಂತೆ ಹದ್ದಿನ ಕಣ್ಣಿಟ್ಟಿದ್ದಾರೆ.

ಇದನ್ನೂ ಓದಿ: AIMIM ಕಲಬುರಗಿ ಜಿಲ್ಲಾ ಅಧ್ಯಕ್ಷರಾಗಿ ರಹೀಮ್ ಮಿರ್ಚಿ ಪುನಃ ನೇಮಕ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here