ಶೋಷಿತರನ್ನು ಸಮಾಜದ ಮುಖ್ಯ ವಾಹಿನಿಗೆ ತರವಲ್ಲಿ ಶ್ರಮಿಸಿದವರು ಜಗಜೀವನರಾಮ

1
80

ಶಹಾಬಾದ: ಬಾಬು ಜಗಜೀವನರಾಮ ಅವರು ಅಸ್ಪೃಶ್ಯತೆಯನ್ನು ತೊಡೆದು ಹಾಕಿ ಉತ್ತಮ ಸಮಾಜ ನಿರ್ಮಾಣಕ್ಕೆ ಕಾರಣಕರ್ತರಾಗಿದ್ದರು. ಶೋಷಿತರ ಪರವಾಗಿ ಹೋರಾಟ ಮಾಡಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಯಶಸ್ವಿಯಾಗಿದ್ದರು ಎಂದು ನಗರಸಭೆಯ ಮಾಜಿ ಅಧ್ಯಕ್ಷ ಗಿರೀಶ ಕಂಬಾನೂರ ಹೇಳಿದರು.

ಅವರು ರವಿವಾರ ಮಾದಿಗ ಸಮಾಜದ ವತಿಯಿಂದ ಆಯೋಜಿಸಲಾದ ಡಾ. ಬಾಬು ಜಗಜೀವನರಾಮ ರವರ ೧೧೫ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಡಾ. ಬಾಬು ಜಗಜೀವನರಾಮ್ ರವರು ಸ್ವಾತಂತ್ರ ಹೋರಾಟಗಾರರು, ಸಮಾಜ ಸೇವಕರಾಗಿದ್ದರಲ್ಲದೇ, ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಹೋರಾಡಿದ ಮಹಾನ್ ವ್ಯಕ್ತಿಯಾಗಿದ್ದರು.ಶಿಕ್ಷಣವನ್ನು ಮೂಲ ಅಸ್ತ್ರವಾಗಿಸಿಕೊಂಡು ಚೆನ್ನಾಗಿ ಓದಿ ಉನ್ನತ ಹುದ್ದೆ ಪಡೆದು ಸಮಾಜ ಸೇವೆ ಮಾಡಬೇಕು. ಆಗ ಮಾತ್ರ ಅಸ್ಪೃಶ್ಯತೆ ನಿವಾರಣೆ ಸಾಧ್ಯವಾಗುತ್ತದೆ ಎಂದರು.

ಇದನ್ನೂ ಓದಿ: ಸೇಂದಿ ಇಳಿಸಿ ಮಾರಲು ಅನುಮತಿ ನೀಡಬೇಕೆಂದು ಒತ್ತಾಯಿಸಿ ಪಾದಯಾತ್ರೆ

ಕಲಬುರಗಿಯ ಮಾಜಿ ಮಹಾಪೌರರಾದ ಮಲ್ಲಪ್ಪ ಅಭಿಶಾಳ ಮಾತನಾಡಿ, ಜಗಜೀವನರಾಮ ದಕ್ಷ ಆಡಳಿತಗಾರರಾಗಿದ್ದರು. ಮೂರು ದಶಕಗಳವರೆಗೆ ಸಂಪುಟ ದರ್ಜೆ ಸಚಿವರಾಗಿ, ಸಂಸದರಾಗಿ, ಉಪಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದು ಅವರ ದಕ್ಷತೆಯ ಪ್ರತೀಕವಾಗಿದೆ. ಅವರು ಅಸ್ಪೃಶ್ಯತೆ ನಿವಾರಣೆಯ ಹರಿಕಾರರು’ ಎಂದು ಸ್ಮರಿಸಿದರು.

ವಾಡಿ-ಶಹಾಬಾದ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕನಕಪ್ಪ ದಂಡಗುಲಕರ್ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಂ ಅವರು ದಲಿತ ನಾಯಕರಲ್ಲ. ಅವರು ಇಡಿ ಸಮಾಜದ ನಾಯಕರು. ಅವರು ಎಲ್ಲರಿಗಾಗಿ ಹೋರಾಡಿದ್ದಾರೆ ಹೇಳಿದರು.

ಜಯಂತೋತ್ಸವ ಸಮಿತಿ ಅಧ್ಯಕ್ಷ ಭೀಮರಾಯ ಮುದ್ನಾಳ ಮಾತನಾಡಿ, ಡಾ. ಬಾಬು ಜಗಜೀವನರಾಮ ಅವರ ಆದರ್ಶಗಳು, ಸಾಧನೆಗಳು ಮತ್ತು ಜಿಂತನೆಗಳು ಯುವ ಜನರಿಗೆ ತಲುಪುವಂತಾಗಬೇಕು ಹಾಗೂ ಅವರ ವಿಚಾರಧಾರೆಗಳನ್ನು ಯುವಜನತೆ ಪಾಲಿಸುವುದರಿಂದ ಸಮಾಜವು ಅಭಿವೃದ್ಧಿ ಪಥದೆಡೆಗೆ ಸಾಗುತ್ತದೆ ಎಂದರು.

ಇದನ್ನೂ ಓದಿ: AIMIM ಕಲಬುರಗಿ ಜಿಲ್ಲಾ ಅಧ್ಯಕ್ಷರಾಗಿ ರಹೀಮ್ ಮಿರ್ಚಿ ಪುನಃ ನೇಮಕ

ಮಹ್ಮದ ಖದೀರ ಮಾತನಾಡಿದರು. ಅಮರ ಕೋರೆ, ರಮೇಶ್ ಕಾಂಬಳೆ ನಗರ ಸಭೆಯ ಮಾಜಿ ಸ್ಥಾಯಿ ಸಮಿತಿಯ ಅಧ್ಯಕ್ಷ ಶರಣು ಪಗಲಾಪೂರ,ಡಾ.ಮಹೇಂದ್ರ ಕೋರಿ, ಭೀಮರಾಯ ಜಾಲಹಳ್ಳಿ, ಕಸಾಪ ಮಾಜಿ ಅಧ್ಯಕ್ಷ ಎನ್.ಸಿ.ವಾರದ, ಹಾಜಪ್ಪ ಬಿಳಾರ, ನಾಗರಾಜ ಮುದ್ನಾಳ,ವಿಶ್ವನಾಥ ಚಿತ್ತಾಪುರ, ಮಹೇಶ ಮುದ್ನಾಳ ವೇದಿಕೆಯ ಮೇಲಿದ್ದರು. ರೇವಣಸಿದ್ದ ಹೊನಗುಂಟಿ ನಿರೂಪಿಸಿದರು, ಶರಣಪ್ಪ ಮುದ್ನಾಳ ಸ್ವಾಗತಿಸಿದರು, ಮನೋಹರ ಮೇತ್ರೆ ವಂದಿಸಿದರು.

ಇದನ್ನೂ ಓದಿ: ಆಜಾನ್ ಮತ್ತು ಭಜನ್ ವಿಚಾರ: ಶಾಂತಿಗೆ ಕೊಳ್ಳಿ ಇಡುತ್ತಿರುವ ಪ್ರಮೋದ್‌ ಮುತಾಲಿಕ್‌ʼರನ್ನು ಒಳಗೆ ಹಾಕಿ: ಮಾಜಿ ಸಿಎಂ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here