ಕಲಬುರಗಿ: ಮಂಜಿಲೇಸ್ ಎ ಇತ್ತೇಹಾದ್ ಉಲ್ ಮುಸ್ಲಿಮೀನ್(ಎಐಎಂಐಎಂ) ಜಿಲ್ಲಾ ಅಧ್ಯಕ್ಷರಾಗಿ ಅಬ್ದುಲ್ ರಹೀಮ್ ಮಿರ್ಚಿ ಅವರನ್ನು ನೇಮಕ ಮಾಡಲಾಗಿದೆ.
ಸೋಮವಾರ ಹೈದರಾಬಾದ್ ದರುಸಲಾಮ್ ಪಕ್ಷದ ಮುಖ್ಯ ಕಚೇರಿಯಲ್ಲಿ ಎಐಎಂಐಎಂ ರಾಷ್ಟ್ರೀಯ ಅಧ್ಯಕ್ಷರಾದ ಸಂಸದ ಅಸದೊದ್ದೀನ್ ಓವೈಸಿ ಅವರಿಗೆ ಭೇಟಿ ನೀಡಿದರು. ರಹೀಮ್ ಮಿರ್ಚಿ ಅವರು ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷಕ್ಕೆ ಒಂದು ಸ್ಥಾನ ಗೇಲ್ಲಿಸಲು ಸಾಧ್ಯವಾಗಿಲ್ಲ ಎಂದು ನೈತಿಕ ಹೊಣೆ ಹೊತ್ತು ಪಕ್ಷದ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಮಿರ್ಚಿ ರಾಜೀನಾಮೆ ನಂತರ ಮಾಜಿ ಮಹಾಪೌರರಾದ ಇಕ್ಬಾಲ್ ಅಹ್ಮದ್ ಶಿನ್ನಿಫರೋಶ್ ಅವರಿಗೆ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲಾಗಿತ್ತು. ಇದೀಗ ಮತ್ತೆ ಅಬ್ದುಲ್ ರಹೀಮ್ ಮಿರ್ಚಿ ಅವರಿಗೆ ಪುನಃ ಪಕ್ಷ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿ ಆದೇಶ ಹೊರಡಿಸಿದೆ ಎಂದು ಅಬ್ದುಲ್ ರಹೀಮ್ ಮಿರ್ಚಿ ಮಾಹಿತಿ ನೀಡಿದ್ದಾರೆ.
ಈ ಕುರಿತು ಅಬ್ದುಲ್ ರಹೀಮ್ ಮಿರ್ಚಿ ಮಾತನಾಡಿ, ಜಿಲ್ಲೆಯಲ್ಲಿ ಪುತ್ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಕೆಲಸ ಮಾಡುವ ಮೂಲಕ ಪಕ್ಷವನ್ನು ಬಲಿಷ್ಠಿಗೊಳ್ಳಿಸುವ ಕೆಲಸ ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.