ಜೇವರ್ಗಿ :ಬಾಗಲಕೋಟೆಯಲ್ಲಿ ಮಹಿಳಾ ವಕೀಲೆಯ ಮೇಲೆ ಅಮಾನವೀಯವಾಗಿ ,ಹಲ್ಲೆ ನಡೆಸಿದ ವ್ಯಕ್ತಿಯನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ,ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ವಕೀಲರಿಗೆ ಸೂಕ್ತ ಕಾನೂನು ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯಪಾಲರಿಗೆ ಜೇವರ್ಗಿ ತಾಸಿಲ್ದಾರರಾದ ವಿನಯ್ ಕುಮಾರ್ ಪಾಟೀಲ್ ಇವರ ಮೂಲಕ ತಾಲೂಕು ವಕೀಲರ ಸಂಘದ ವತಿಯಿಂದ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಇದನ್ನೂ ಓದಿ: ಯಾದಗಿರಿ: ನಕಲಿ ಮಧ್ಯ ಮಾರಾಟ:20 ಲಕ್ಷ ಮೌಲ್ಯದ ಮದ್ಯ ಜಪ್ತಿ | ಇಬ್ಬರ ಬಂಧನ
ಸಾರ್ವಜನಿಕ ಸ್ಥಳದಲ್ಲಿ ಹೆಣ್ಣುಮಗಳು ಎನ್ನುವುದನ್ನು ನೋಡದೆ ಮನಸೋಇಚ್ಛೆ ಥಳಿಸಿರುವುದು ನಿಜಕ್ಕೂ ಮಾನವ ಸಮಾಜ ತಲೆತಗ್ಗಿಸುವ ಸಂಗತಿಯಾಗಿದೆ. ಇದೊಂದು ರಾಜಕೀಯ ಪ್ರೇರಿತ ಘಟನೆ. ಇಂತಹ ಘಟನೆಗಳು ಮಹಿಳೆಯರ ಗೌರವಕ್ಕೆ ಧಕ್ಕೆ ತರುವುದಲ್ಲದೆ ವಕೀಲರ ವೃತ್ತಿಯ ಮೇಲೆ ಗೌರವಕ್ಕೆ ಕಪ್ಪು ಚುಕ್ಕೆಯಾಗಿದೆ, ಬಂದಿಸಿರುವ ಆರೋಪಿತರನ್ನು ಕೂಡಲೇ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಲಾಯಿತು.
ಪ್ರತಿಭಟನೆಯಲ್ಲಿ ಜೇವರ್ಗಿ ತಾಲೂಕ ವಕೀಲರ ಸಂಘದ ಕಾರ್ಯದರ್ಶಿಗಳಾದ ಕೆ.ಇ ಬಿರಾದಾರ್, ಹಿರಿಯ ವಕೀಲರಾದ ಪ್ರಾಣೇಶ್ ಕುಲಕರ್ಣಿ, ಸಿದ್ದು ಯಂಕಂಚಿ, ಎಂ . ಅಯ್ ,ಸೂಗೂರ್, ಸಿದ್ದು ದೇಸಾಯಿ, ರಾಮನಾಥ ಭಂಡಾರಿ, ಭಾಷಾ ಪಟೇಲ್ ಯಾಳವಾರ್, ಕಾಸಿಂ ಮನಿಯರ್, ಅಪ್ಪಸಾಹೇಬ್ ಕೊಳಕುರ, ಎಸ್ ಎಸ್ ಹಾಲ್ ಕಾಯಿ,ರಾಜು ಮುದ್ದಡಗಿ, ಸೋಮಶೇಖರ್ ಸರ್ದಾರ್ , ಸೇರಿದಂತೆ ಇತರರು ಭಾಗವಹಿಸಿದ್ದರು.
ಇದನ್ನೂ ಓದಿ: ಆಮ್ ಆದ್ಮಿ ಪಕ್ಷಕ್ಕೆ ಬೆಂಬಲಿಗರೊಂದಿಗೆ ಪ್ರೊ. ಶಿವರಾಜ ಪಾಟೀಲ ಸೇರ್ಪಡೆ