ಜೇವರ್ಗಿ: ತಾಲೂಕಿನ ಸೊನ್ನ ಗ್ರಾಮದ ದಾಸೋಹ ವಿರಕ್ತಮಠದ ಶ್ರೀ ಸಿದ್ದಲಿಂಗೇಶ್ವರ ಜಾತ್ರೆ ಸಡಗರ ಸಂಭ್ರಮದಿಂದ ರಥೋತ್ಸವ ಜರುಗಿತು.
ಕಳೆದ ಐದು ದಿನಗಳಿಂದ ಶ್ರೀಮಠದಲ್ಲಿ ಸಿದ್ದಲಿಂಗ ಶಿವಯೋಗಿಗಳ ಪುರಾಣ ಪ್ರವಚನ ನಡೆದು ಇಂದು ಬೆಳಿಗ್ಗೆ ಸಿದ್ದಲಿಂಗೇಶ್ವರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಹಾಗೂ ಮಹಾ ಮಂಗಳಾರತಿಯೊಂದಿಗೆ ವಿಶೇಷ ಪೂಜೆ ನಡೆಯಿತು. ಮತ್ತು ಇಪ್ಪತ್ತೊಂದು ಜಂಗಮ ವಟುಗಳಿಗೆ ಅಯ್ಯಾಚಾರ ಕಾರ್ಯಕ್ರಮ ಜರುಗಿತು.
ಇದನ್ನೂ ಓದಿ: ಬಾಗಲಕೋಟೆಯಲ್ಲಿ ಮಹಿಳಾ ವಕೀಲರ ಮೇಲೆ ಹಲ್ಲೆಗೆ ಜೇವರ್ಗಿಯಲ್ಲಿ ಪ್ರತಿಭಟನೆ
ಬೆಳಿಗ್ಗೆ 09 ಘಂಟೆಯಿಂದ ಊರಿನ ಪ್ರಮುಖ ರಾಜ ಬೀದಿಗಳಲ್ಲಿ ಶ್ರೀ ಸಿದ್ದಲಿಂಗೇಶ್ವರ ಪಲ್ಲಕ್ಕಿ ಉತ್ಸವ ಬಾಜಾ ಭಜೇಂತ್ರಿಗಳೊಂದಿಗೆ ಪುರವಂತಿಕೆ ಮತ್ತು ಭಜನೆ ಮುತ್ತೈದೆಯರ ಕಳಸದೊಂದಿಗೆ ಅದ್ದೂರಿ ಮೆರವಣಿಗೆ ಜರುಗಿತು. ನಂತರ ಸಂಜೆ ಶ್ರೀ ಸಿದ್ದಲಿಂಗೇಶ್ವರರ ರಥೋತ್ಸವ ಸಾವಿರಾರು ಭಕ್ತರ ಜೈಘೋಷದೊಂದಿಗೆ ಅದ್ದೂರಿಯಾಗಿ ಜರುಗಿತು.
ರಥೋತ್ಸವ ಕಾರ್ಯಕ್ರಮದ ಚಾಲನೆಯನ್ನು ಸೊನ್ನ ವಿರಕ್ತ ಮಠದ ಪೂಜ್ಯರಾದ ಡಾ, ಶಿವಾನಂದ ಮಹಾಸ್ವಾಮಿಗಳು ನೀಡಿದರು.
ಜಾತ್ರೆಯಲ್ಲಿ ಸೊನ್ನ ಗ್ರಾಮದ ಮಾಜಿ ತಾಲುಕು ಪಂಚಾಯಿತಿ ಸದಸ್ಯ ಶಿವಾನಂದ ಮಾಕಾ. ವಿಜಯಕುಮಾರ ಬಿರಾದಾರ. ಶಿವಲಿಂಗ ಹಳ್ಳಿ. ಶರಣಬಸಪ್ಪ ಮಾಜನಶೆಟ್ಟಿ. ಶರಣು ಮಣುರ. ಮಲ್ಲಿಕಾರ್ಜುನ ಬಿರಾದಾರ. ನಿಂಗಣ್ಣ ಹಿರೇಗೌಡ. ಶಂಕರ ನಂದರಗಿಮಠ. ಶಿವಾನಂದ ಮುಧೋಳ. ರಮೇಶ ಕೋಳಕುರ. ಗುರುರಾಜ ಧನ್ನೂರ. ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಜಾತ್ರೆಯಲ್ಲಿ ಪಾಲ್ಗೊಂಡು ದರ್ಶನ ಪಡೆದರು.
ಇದನ್ನೂ ಓದಿ: ಯಾದಗಿರಿ: ನಕಲಿ ಮಧ್ಯ ಮಾರಾಟ:20 ಲಕ್ಷ ಮೌಲ್ಯದ ಮದ್ಯ ಜಪ್ತಿ | ಇಬ್ಬರ ಬಂಧನ