ಯಾದಗಿರಿ: ನಕಲಿ ಮಧ್ಯ ಮಾರಾಟ:20 ಲಕ್ಷ ಮೌಲ್ಯದ ಮದ್ಯ ಜಪ್ತಿ | ಇಬ್ಬರ ಬಂಧನ

0
33

ಯಾದಗಿರಿ: ನಕಲಿ ಮಧ್ಯ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ  ಬಂಧಸಿ, ಒಟ್ಟು 20 ಲಕ್ಷ ಮೌಲ್ಯದ ಮಧ್ಯ ಸ್ಟಾಕ್,  8.280  ಲೀ.ನಕಲಿ ಮದ್ಯ ಜಪ್ತಿ ಮಾಡಿಕೊಂಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ , ಐವರು ಪರಾರಿ ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಆಮ್ ಆದ್ಮಿ ಪಕ್ಷಕ್ಕೆ ಬೆಂಬಲಿಗರೊಂದಿಗೆ ಪ್ರೊ. ಶಿವರಾಜ ಪಾಟೀಲ ಸೇರ್ಪಡೆ

Contact Your\'s Advertisement; 9902492681

ಶಹಾಪುರಃ ಪಟ್ಟಣದ ಲಕ್ಷ್ಮೀ ವೈನ್ಸ್ ಶಾಪ್ ನಲ್ಲಿ ನಕಲಿ ಮಧ್ಯ ಮಾರಾಟ ಹಿನ್ನೆಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಒಟ್ಟು ಅಂದಾಜು 20 ಲಕ್ಷ ರೂ. ಮೌಲ್ಯದ ಮಧ್ಯ ಸ್ಟಾಕ್ ಇದ್ದು, ಅದರಲ್ಲಿ 8.280 ಲೀಟರ್ ನಕಲಿ ಮಧ್ಯ ದೊರೆತಿದ್ದು, ಮಧ್ಯ ಮಾರಾಟ ಅಂಗಡಿಗೆ ಬೀಗ ಜಡಿಯಲಾಗಿದೆ. ಅಲ್ಲದೆ ಲಕ್ಷ್ಮೀ ವೈನ್ಸ್ ಮಾಲೀಕ ಮುರುಳಿ ದಂಡು ಸೇರಿದಂತೆ 7 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ ಎಂದು ಅಬಕಾರಿ ಉಪ ನಿರೀಕ್ಷಕ ಸುರೇಶಕುಮಾರ ಮಳೇಕರ್ ಮಾಹಿತಿ ನೀಡಿದ್ದಾರೆ.

.ಇದನ್ನೂ ಓದಿ: ಅಂಬೇಡ್ಕರ್ ಜಯಂತ್ಯುತ್ಸವ | ಚಿಂತನೆಗೆ ವೇದಿಕೆಯಾಗಲಿ: ವಿಶಾಲ ಮಹಾದೇವ ತರನಳ್ಳಿ

ದಾಳಿ ವೇಳೆ ಟಂಟಂ ಆಟೋವೊಂದರಲ್ಲಿ ನಕಲಿ ಮಧ್ಯ ಸಾಗಿಸುತ್ತಿರುವದನ್ನು ತಡೆದ ಪರಿಶೀಲಿಸಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕಣಕ್ಕೆ ಸಂಬಂಧಿಸಿದಂತೆ ದೇವಿಂದ್ರಪ್ಪ ಮತ್ತು ಭೀಮಾಶಂಕರ ಇಬ್ಬರು ಬಂಧಿತ ಆರೋಪಿಗಳಾಗಿದ್ದು, ಆರೋಪಿಗಳಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನುಳಿದ ಐವರು ಆರೋಪಿಗಳಾದ ಗೋಪಾಲ, ಬನಶಂಕರ, ಮೊಗಲಯ್ಯ, ಶರಣಪ್ಪ, ಮುರುಳಿ ದಂಡು ಇವರ ಪತ್ತೆಗಾಗಿ ತೀವ್ರ ಶೋಧ ನಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ: ‘ಬುದ್ಧ ಪೂರ್ಣಿಮಾ’ದ ಇತಿಹಾಸ, ಮಹತ್ವ ಮತ್ತು ಉಲ್ಲೇಖಗಳೂ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here