ಯಾದಗಿರಿ: ಜಿಲ್ಲೆಯ ಶಹಾಪುರ ತಾಲ್ಲೂಕಿನ ಹತ್ತಿಗುಡೂರ ಗ್ರಾಮದ ವಾರ್ಡ್ ನಂಬರ್ ಎರಡು ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಕುಡಿಯುವ ನೀರಿಗಾಗಿ ದಿನಾಲೂ ಮಹಿಳೆಯರು ಪುರುಷರು ಮುದ್ದು ಮಕ್ಕಳು ಪರದಾಟ ನಡೆಯುತ್ತಿದ್ದು, ಕುಡಿಯುವ ನೀರಿನ ಬಗ್ಗೆ ಸಂಬಂಧಪಟ್ಟ ಅಕ್ಕನಾಗಮ್ಮ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದರೆ ಯಾವುದೇ ರೀತಿ ಸ್ಪಂದಿಸುತ್ತಿಲ್ಲ ಕುಡಿಯುವ ನೀರಿಗಾಗಿ ನಿತ್ಯ ಗೋಳಾಟ ತಪ್ಪುತ್ತಿಲ್ಲ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಬಾಗಲಕೋಟೆಯಲ್ಲಿ ಮಹಿಳಾ ವಕೀಲರ ಮೇಲೆ ಹಲ್ಲೆಗೆ ಜೇವರ್ಗಿಯಲ್ಲಿ ಪ್ರತಿಭಟನೆ
ತಕ್ಷಣ ಕುಡಿಯುವ ನೀರು ಸಮಸ್ಯೆ ಬಗೆಹರಿಸುವಂತೆ ಮಾಜಿ ಶಾಸಕರಾದ ಗುರುಪಾಟೀಲ್ ಶಿರವಾಳ ಅವರು ನಾವುಗಳು ಅವರ ಗಮನಕ್ಕೆ ತಂದಾಗ ಮಾಜಿ ಶಾಸಕರ ಅವರು ದೂರವಾಣಿ ಮೂಲಕ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಗಳಿಗೆ ದೂರವಾಣಿ ಮೂಲಕ ಸಂಪರ್ಕ ಮಾಡಿ ಹತ್ತಿಗುಡ್ಡ ಗ್ರಾಮದ ಎಸ್ ಸಿ ವಾರ್ಡ್ ನಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ ಯಂತೂ ಹೇಳಿದಾಗ ತಕ್ಷಣ ಕುಡಿಯುವ ನೀರು ಸಮಸ್ಯೆ ಬಗೆಹರಿಸುವಂತೆ ಸುಳ್ಳು ಹೇಳಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿರುವ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಸಂಭ್ರಮದಿಂದ ಜರುಗಿದ ಸೋನ್ನ ರಥೋತ್ಸವ
ಅಲ್ಪಸ್ವಲ್ಪ ಬರುತ್ತಿರುವ ಗಬ್ಬೆದ್ದು ನಾರುತ್ತಿರುವ ಚರಂಡಿಯ ನಳದ ನೀರಿನಲ್ಲಿ ಮಹಿಳೆಯರು ಮುದ್ದುಮಕ್ಕಳು ನೀರು ತುಂಬುತ್ತಿರುವದು ಕಲುಷಿತ ನೀರು ಕುಡಿಯುವುದರಿಂದ ಗ್ರಾಮದಲ್ಲಿ ಇನ್ನಷ್ಟು ರೋಗರುಜನಗಳಿಗೆ ಜನರು ತುತ್ತಾಗುತ್ತಿದ್ದಾರೆ ಇದಕ್ಕೆಲ್ಲಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ನಿರ್ಲಕ್ಷ್ಯತೆ ಎದ್ದು ಕಾಣುತ್ತಿದೆ ಎಂದರು.
ತಕ್ಷಣ ಕುಡಿಯುವ ನೀರು ಸಮಸ್ಯೆ ಬಗೆಹರಿಸಬೇಕು ಇದೇ ನಿರ್ಲಕ್ಷ್ಯತೆ ಮುಂದುವರೆದರೆ ಗ್ರಾಮ ಪಂಚಾಯತಿಗೆ ಬೀಗ ಜಡಿದು ಖಾಲಿ ಕೊಡಗಳೊಂದಿಗೆ ಧರಣಿ ಸತ್ಯಾಗ್ರಹ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಗ್ರಾಮದ ಮುಖಂಡರಾದ ಶರಣರಡ್ಡಿ ಹತ್ತಿಗೂಡೂರ , ಭೀಮರಾಯ ಆರ್ ಹೊಸ್ಮಫನಿ ,ಮಲ್ಲಪ್ಪ ಕನಕಗಿರಿ , ಹನಮಂತ ಟಣ ಕೇದಾರ್, ಶಿವಮ್ಮ ,ಎಲ್ಲಮ್ಮ , ಕೆಂಚಮ್ಮ ,ಕಾಳಮ್ಮ , ಶ್ರೀದೇವಿ, ಮಹಾಲಕ್ಷ್ಮಿ , ಸುನೀತಾ , ಚಂದ್ರಕಲಾ , ಮಲ್ಲಮ್ಮ , ಗಂಗಮ್ಮ , ಇತರರು ಇದ್ದರು.
ಇದನ್ನೂ ಓದಿ: ಯಾದಗಿರಿ: ನಕಲಿ ಮಧ್ಯ ಮಾರಾಟ:20 ಲಕ್ಷ ಮೌಲ್ಯದ ಮದ್ಯ ಜಪ್ತಿ | ಇಬ್ಬರ ಬಂಧನ