ಬಿಜೆಪಿಯೇ ಭ್ರಷ್ಟಾಚಾರ- ಹಗರಣಗಳ ಗಂಗೋತ್ರಿ: ಡಾ. ಅಜಯ್ ಸಿಂಗ್ ತಿರುಗೇಟು

0
29

ಕಲಬುರಗಿ: ಕಾಂಗ್ರೆಸ್ ಅಂದರೆ ಭ್ರಷ್ಟಾಚಾರ ಎಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಜೇವರ್ಗಿ ಶಾಸಕರಾಗಿರುವ ಡಾ. ಅಜಯ್ ಸಿಂಗ್ 2018 ರಿಂದ ಇಲ್ಲಿಯವರೆಗೂ ಸಾಲು ಸಾಲು ಹಗರಣಗಳಲ್ಲಿ ಬಿಜೆಪಿ ಮುಳುಗಿ ಹೋಗಿರೋದರಿಂದ ಬಿಜೆಪಿಯೇ ಭ್ರಷ್ಟಾಚಾರ, ಲಂಚಕೋರತನಗಳ ಗಂಗೋತ್ರಿಯಾಗಿ ಹೊರಹೊಮ್ಮಿದೆ ಎಂದು ತಿರುಗೇಟು ನೀಡಿದ್ದಾರೆ.

ಈ ಕುರಿತಂತೆ ಹೇಳಿಕೆ ನೀಡಿರುವ ಅವರು ಸಚಿವ ಜಾರಕಿಹೊಳಿ ಲೈಂಗಿಕ ಹಗರಣದಿಂದ ಆರಂಭವಾಗಿ ಬಿಟ್ ಕಾಯಿನ್, 40 ಪರ್ಸೆಂಟೇಜ್, ಉಪನ್ಯಾಸಕರ ನೇಮಕಾತಿ, ಪಿಡಬ್ಲೂಡಿ ಜೆಇ, ಎಇ ನೇಮಕಾತಿ, ತೀರ ಈಚೆಗಿನ ಪಿಎಸ್‍ಐ ನೇಮಕಾತಿ ಪರೀಕ್ಷೆಯಲ್ಲಿನ ಭಾರಿ ಪ್ರಮಾಣದ ಅಕ್ರಮಗಳೆಲ್ಲವೂ ಗಮನಿಸಿದರೆ ಬಿಜೆಪಿ ಆಡಳಿತ ಅದೆಂತಹ ಭ್ರಷ್ಟಾಚಾರದಿಂದ ಕೂಡಿದೆ ಎಂಬುದನ್ನು ಯಾರಾದರೂ ಅಂದಾಜಿಸಬಹುದಂದು ಬಿಜೆಪಿಯನ್ನು, ಆ ಪಕ್ಷದ ಅಧ್ಯಕ್ಷ ನಳೀನ್ ಕುಮಾರ್ ಕಟೀಲರನ್ನು ಕುಟುಕಿದ್ದಾರೆ.

Contact Your\'s Advertisement; 9902492681

ಇದನ್ನೂ ಓದಿ: ಶ್ರೀ 1008 ಆದಿನಾಥ ದಿಗಂಬರ ಜೈನ ಮಂದಿರಕ್ಕೆ ಡಿಯುವ ಯಂತ್ರ ವಿತರಣೆ

ಕಲ್ಯಾಣ ನಾಡಿನ ಜನ ಇದೇ ಮೊದಲ ಬಾರಿಗೆ ಐದಕ್ಕೆ ಐದು ಸಂಸತ್ ಸ್ಥಾನದಲ್ಲಿ ಕಮಲ ಅರಳಿಸಿದರು. ಅಸೆಂಬ್ಲಿಯಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ 19 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಿಸಿದರು. ರಾಜ್ಯ, ಕೇಂದ್ರದಲ್ಲಿ ಒಂದೇ ಪಕ್ಷದ ಡಬ್ಬಲ್ ಇಂಜಿನ್ ಸರ್ಕಾರವೆಂದು ಹೇಳುತ್ತ ಬಿಜೆಪಿಯವರು ಹಿಂದುಳಿದ ನೆಲದ ಜನರ ಜನಾದೇಶವನ್ನೇ ಅಲಕ್ಷಿಸಿತು. ಇಂದಿಗೂ ಈ ಭಾಗದಲ್ಲಿ ಒಂದೂ ಹೊಸ ಯೋಜನೆ ಆರಂಭಿಸದೆ ಯಾಕಾದರೂ ಮತ ಹಾಕಿದೆವೋ ಎಂದು ಜನರೇ ಅಲವತ್ತುಕೊಳ್ಳುವಂತೆ ಬಿಜೆಪಿ ಮಾಡಿದೆ.

ಹಿಂದುಳಿದ ನೆಲದ ನಿಜವಾದ ಕಾಳಜಿ ಕಾಂಗ್ರೆಸ್ ಪಕ್ಷ ಮಾಡುತ್ತಿದೆ. 2013 ರಲ್ಲಿ ನಾವು ನುಡಿದಂತೆ ನಡೆದು ಈ ಭಾಗಕ್ಕೆ ಸಂವಿಧಾನದ ಕಲಂ 371 (ಜೆ) ತಂದು ಕೊಟ್ಟೇವು. ಇದು ಇಂದು ಸಿಹಿಫಲ ಕೊಡುತ್ತಿದೆ. ಇಲ್ಲಿನ ನಾಯಕರಾದ ದಿ. ಧರಂಸಿಂಗ್, ಈಗಿನ ರಾಜ್ಯಸಭಾ ವಿಪಕ್ಷ ನಾಯಕರಾದ ಡಾ. ಮಲ್ಲಿಕಾರ್ಜುನ ಖರ್ಗೆ ನಿರಂತರ ಈ ಭಾಗದಲ್ಲಿ ಪ್ರಗತಿ ಯೋಜನೆ ಹೊತ್ತು ತಂದವರು.

ಇದನ್ನೂ ಓದಿ: ಬಿಜೆಪಿ ಪಕ್ಷದಲ್ಲೇ ಭ್ರಷ್ಟಾಚಾರ ತುಂಬಿ ತುಳುಕುತ್ತಿದ್ದರೂ ಏನೂ ಮಾಡಲು ಆಗುತ್ತಿಲ್ಲ: ಭೂಸನೂರ್

ಆದರೆ ಬಿಜೆಪಿ ಸರ್ಕಾರ ಈ ಭಾಗಕ್ಕೆ ಮಂಜೂರಾಗಿದ್ದ ರೇಲ್ವೆ ವಿಭಾಗೀಯ ಕಚೇರಿ ಯೋಜನೆ, ಸಿಪೆಟ್‍ನಂತಹ ಯೋಜನೆಗಳನ್ನು ರದ್ದು ಮಾಡಿದೆ. ಏಮ್ಸ್‍ನಂತಹ ವ್ಯವಸ್ಥೆ ಇಲ್ಲಿಗೆ ನೀಡದೆ ಕಡೆಗಣಿಸಿದೆ. ಟಕ್ಸಟೈಲ್ ಪಾರ್ಕ್ ಮಂಜೂರಾಗಿದ್ದು ರದ್ದಾಗಿದೆ. ಅಭಿವೃದ್ಧಿ ವಿರೋಧಿ ಧೋರಣೆಯ ಬಿಜೆಪಿ ಈ ಬಾರಿಯೂ ಚುನಾವಣೆಯಲ್ಲಿ ಏನಾದರೂ ಹುನ್ನಾರ ಮಾಡಿ ಗೆಲ್ಲುವ ಹವಣಿಕೆಯಲ್ಲಿದೆ. ಮತದಾರ ಬಿಜೆಪಿಯ ಇಂತಹ ಅಧಿಕಾರದ ಹಪಾಹಪಿಗೆ ಮೂಗುದಾರ ಹಾಕುತ್ತಾನೆಂದು ಡಾ. ಅಜಯ್ ಸಿಂಗ್ ಹೇಳಿದ್ದಾರೆ.

ಕಲಬುರಗಿಯನ್ನು ಕಾಂಗ್ರೆಸ್ ಮುಕ್ತ ಮಾಡೋದಾಗಿ ನಲೀನ್ ಕಟೀಲ್ ನೀಡಿರುವ ಹೇಳಿಕೆ ರಾಜಕೀಯ ಪ್ರೇರಿತವಷ್ಟೇ ಅಲ್ಲ ಹಾಸ್ಯಾಸ್ಪದವಾಗಿದೆ. ಸಾಕಷ್ಟು ಸವಲತ್ತು ಕಾಂಗ್ರೆಸ್ ಪಕ್ಷವೇ ಈ ಭಾಗಕ್ಕೆ ಕೊಡುಗೆ ನೀಡಿರುವಾಗ, ಯಾವುದೇ ಸವಲತ್ತು ನೀಡದ ಪಕ್ಷದವರು ಇಂತಹ ಬಂಡತನದ ಹೇಳಿಕೆ ನೀಡಿರೋದು ನೋಡಿದರೆ ನಾವಲ್ಲ, ಈ ಭಾಗದ ಮತದಾರರೇ ಬಿಜೆಪಿ ಪಕ್ಷಕ್ಕೆ, ಅಲ್ಲಿನ ಭಂಡತನದ ಧೋರಣೆಯ ನಾಯಕರಿಗೆ ಸರಿಯಾದಂತಹ ಪಾಠ ಮುಂಬರುವ ಅಸೆಂಬ್ಲಿ, ಸಂಸತ್ ಚುನಾವಣೆಗಳಲ್ಲಿ ಕಲಿಸಲಿದ್ದಾರೆಂದು ಡಾ. ಅಜಯ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ಅಲ್ಪಸಂಖ್ಯಾತ ಅಂಗನವಾಡಿಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಿ ಡಾ.ಉಮೇಶ ಜಾಧವ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here