ಕಲಬರುಗಿ: ಮನುಷ್ಯ ಆರೋಗ್ಯ ಪೂರ್ಣ ಜೀವನ ನಡೆಸಲು ಶುದ್ಧವಾದ ನೀರು ಸೇವನೆ ಅಗತ್ಯವಾಗಿದ್ದು ಸ್ವತ್ವವಾದ ಆಹಾರ ಶುಚಿತ್ವ ಪರಿಸರ ಹಾಗೂ ಶುದ್ಧವಾದ ನೀರು ಮಹತ್ವದಾಗಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ದಕ್ಷಿಣ ಶಾಸಕರಾದ ದತ್ತಾತ್ರೇಯ ಸಿ.ಪಾಟೀಲ ರೇವೂರ ಅಭಿಪ್ರಾಯಪಟ್ಟರು
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಕಲಬರುಗಿ ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಜೈನ ಧರ್ಮದ ಶೃದ್ದಾ ಕೇಂದ್ರವಾದ ಹುಣಿಸಿ ಹಡಗಿಲ ಗ್ರಾಮದ ಶ್ರೀ ಧರಣೇಂದ್ರ ಪದ್ಮಾವತಿ ದೇವಾಲಯ ಹಾಗೂ ನಗರದ ಗಾಜೀಪೂರ ಬಡಾವಣೆಯ ಶ್ರೀ 1008 ಆದಿನಾಥ ದಿಗಂಬರ ಜೈನ ಮಂದಿರಕ್ಕೆ ಮಂಜೂರಾದ ಶುದ್ಧವಾದ ಕುಡಿಯುವ ಯಂತ್ರಗಳನ್ನು ವಿತರಿಸಿ ಮಾತನಾಡಿದರು.
ಇದನ್ನೂ ಓದಿ: ಬಿಜೆಪಿ ಪಕ್ಷದಲ್ಲೇ ಭ್ರಷ್ಟಾಚಾರ ತುಂಬಿ ತುಳುಕುತ್ತಿದ್ದರೂ ಏನೂ ಮಾಡಲು ಆಗುತ್ತಿಲ್ಲ: ಭೂಸನೂರ್
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜನರ ಆರೋಗ್ಯಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ಪರಿಣಾಮಕಾರಿ ಅನುಷ್ಠಾನ ಮಾಡಿದರೆ ಖಂಡಿತವಾಗಿಯೂ ಜನರ ಆರೋಗ್ಯದ ಮಟ್ಟ ಸುಧಾರಣೆಯಾಗಲಿದೆ ಎಂದು ನುಡಿದ ಅವರು ಧಾರ್ಮಿಕ ಕ್ಷೇತ್ರಗಳಿಗೆ ಸಾವಿರಾರು ಭಕ್ತರು ದರ್ಶನ ಮತ್ತು ಯಾತ್ರಾ ನಿಮಿತ್ತವಾಗಿ ಆಗಮಿಸುತ್ತಾರೆ ಉಚಿತವಾಗಿ ಇತಂಹ ಶುದ್ಧವಾದ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಮೂಲಕ ಭಕ್ತರಿಗೆ ಉಪಯೋಗ ಆಗಲಿದ್ದು ಯಂತ್ರಗಳನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುವಂತೆ ಸೂಚಿಸಿದರು .
ಈ ಸಂದರ್ಭದಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದ ರಾಜ್ಯ ನಿರ್ದೇಶಕರಾದ ಸುರೇಶ ಎಸ್.ತಂಗಾ ಮುಖಂಡರಾದ ರವಿ ಬಿರಾದಾರ ಕಮಲಾಪೂರ. ಬಸವರಾಜ ಬಿರಾಳ.ಜೈನ ಸಮುದಾಯದ ಹಿರಿಯ ಮುಖಂಡರಾದ ನಾಗನಾಥ ಚಿಂದೆ. ರಮೇಶ ಗಡಗಡೆ. ದೀಪಕ ಪಂಡಿತ. ಭರಮ ಜಗಶಟ್ಟಿ. ರಾಜೇಂದ್ರ ಕುಣಚಗಿ.ವಿನೋದ ಪಾಟೀಲ. ಶ್ರೇಣಿಕ ಪಾಟೀಲ. ಧನ್ಯಕುಮಾರ ವರ್ಧಮಾನೆ.ಸುರೇಶ ಕಾಸರ.ರಾಜು ಕಿವಡೆ.ಅರಿಹಂತ ಪಾಟೀಲ. ರಾಜು ಕುರಿಕೋಟಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು ನಾಗಲಿಂಗಯ್ಯ ಮಠಪತಿ ನಿರೂಪಿಸಿದರು.
ಇದನ್ನೂ ಓದಿ: ಅಲ್ಪಸಂಖ್ಯಾತ ಅಂಗನವಾಡಿಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಿ ಡಾ.ಉಮೇಶ ಜಾಧವ