ಸುರಪುರ: ತಾಲೂಕಿನ ಕೂಡಲಗಿ ಗ್ರಾಮದ ಹೊರವಲಯದ ಜಮೀನೊಂದರಲ್ಲಿ ಪಂಪ್ ಹೌಸ್‌ಗೆ ಆಕಸ್ಮಿಕ ಬೆಂಕಿ ಬಿದ್ದು ಅಪಾರ ಪ್ರಮಾಣದ ವಸ್ತುಗಳು ಸುಟ್ಟು ಕರಕಲಾಗಿವೆ.ಕೂಡಲಗಿ ಗ್ರಾಮದ ರೈತ ರೇವಣಪ್ಪ ಪೂಜಾರಿ ಎನ್ನುವವರಿಗೆ ಸೇರಿದ ಜಮೀನಲ್ಲಿನ ಪಂಪ್ ಹೌಸ್‌ಗೆ ಬೆಂಕಿ ಬಿದ್ದಿರುವುದರಿಂದ ಅವಘಡ ಸಂಭವಿಸಿದೆ.
ಇದನ್ನೂ ಓದಿ: ಮಂಗಿಹಾಳ ಗ್ರಾಮದಲ್ಲಿ ಸಿಡಿಲಿಗೆ ವ್ಯಕ್ತಿ ಬಲಿ
ಅಗ್ನಿ ದುರಂತದಲ್ಲಿ ಪಂಪ್‌ಸೆಟ್ ಸಾಮಗ್ರಿಗಳು,ಗೊಬ್ಬರದ ಚೀಲಗಳು,ಸ್ಪಂಕಲರ್ ಪೈಪ್‌ಗಳು ಸೇರಿದಂತೆ ಲಕ್ಷಾಂತರ ರೂಪಾಯಿ ವಸ್ತುಗಳು ಕರಕಲಾಗಿವೆ ಎಂದು ರೈತ ರೇವಣಪ್ಪ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಮುಖಂಡರ ಭೇಟಿ: ಅಗ್ನಿ ಅವಘಡ ಸಂಭವಿಸಿದ ಘಟನಾ ಸ್ಥಳಕ್ಕೆ ಯುವ ಮುಖಂಡ ಕೃಷ್ಣಾರೆಡ್ಡಿ ಮುದನೂರ ಭೇಟಿ ನೀಡಿ ರೈತನಿಗೆ ಸಾಂತ್ವಾನ ಹೇಳುವುದರ ಜೊತೆಗೆ ನಮ್ಮ ನಾಯಕರಾದ ಶಾಸಕರ ಗಮನಕ್ಕೆ ತಂದು ಸಾಧ್ಯವಾದಷ್ಟು ರೈತನಿಗೆ ನೆರವಾಗುವುದಾಗಿ ಭರವಸೆ ನೀಡಿದ್ದಾರೆ.ಈ ಸಂದರ್ಭದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ಭುಗಿಲೇಳಲಿದೆ ಎಸ್‌ಟಿ ಮೀಸಲು ಹೋರಾಟ | ಮೇ.೨೦ ರಂದು ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ: ತಿಪ್ಪೇಸ್ವಾಮಿ