ಡಾ. ಸುನೀಲಕುಮಾರ ಹೆಚ್ ವಂಟಿಗೆ ವಿಧಾನ ಪರಿಷತ್ತಿಗೆ ನಾಮನಿರ್ದೇಶನಕ್ಕೆ ಒತ್ತಾಯ

0
72

ಕಲಬುರಗಿ: ಡಾ. ಸುನೀಲಕುಮಾರ.ಹೆಚ್. ವಂಟಿ ರವರಿಗೆ ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡುವಂತೆ ಜೈ ಕನ್ನಡಿಗರ ರಕ್ಷಣಾ ವೇದಿಕೆ ವತಿಯಿಂದ ಕರ್ನಾಟಕ ಸರಕಾರಕ್ಕೆ ಒತ್ತಾಯಿಸಲಾಯಿತು.

ಡಾ. ಸುನೀಲಕುಮಾರ.ಹೆಚ್. ವಂಟಿ ರವರು ಸುಮಾರು ೩೩ ವರ್ಷಗಳಿಂದ ಬಿ.ಜೆ.ಪಿ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಾ ಬಂದಿರುತ್ತಾರೆ. ಸದರಿಯವರು ಒಬ್ಬ ಪರಿಶಿಷ್ಠ ಜಾತಿಗೆ (ಬಲಗೈ) ಸಮುದಾಯಕ್ಕೆ ಸೇರಿದ್ದು. ಇವರು ಕಲಬುರಗಿ ನಗರದ ವಾರ್ಡ ನಂ: ೦೯ ರ ಉಪಾಧ್ಯಕ್ಷರಾಗಿ ಹಾಗೂ ನಗರ ಜಿಲ್ಲೆ ಕಾರ್ಯದರ್ಶಿ ಮತ್ತು ಕಲಬುರಗಿ ಗ್ರಾಮೀಣ ಜಿಲ್ಲಾ ಕಾರ್ಯದರ್ಶಿ ಹಾಗೂ ಎಸ್.ಸಿ. ಮೋರ್ಚಾದ ಅಧ್ಯಕ್ಷ ಹುದ್ದೆಗೆ ಎರಡು ಬಾರಿ ಆಯ್ಕೆಯಾಗಿದ್ದು, ಹಾಗೂ ಎಸ್.ಸಿ. ಮೋರ್ಚಾದ ರಾಜ್ಯ ಕಾರ್ಯದರ್ಶಿಗಳಾಗಿ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯ ಸಿಂಡಿಕೇಟ್ ಸಿಂಡಿಕೇಟ್ ಸದಸ್ಯರಾಗಿ ಕಾರ್ಯನಿರ್ವಹಿಸಿರುತ್ತಾರೆ ಮತ್ತು ತಮ್ಮನ್ನು ತಾವು ಸಾಮಾಜಿಕ ಕಾರ್ಯಕರ್ತರನ್ನಾಗಿ ಹಗಲಿರುಳು ಸೇವೆ ಸಲ್ಲಿಸುತ್ತಿದ್ದಾರೆ.

Contact Your\'s Advertisement; 9902492681

ಇದನ್ನೂ ಓದಿ: ಕೂಡಲಗಿ ಗ್ರಾಮದಲ್ಲಿ ಪಂಪ್ ಹೌಸ್‌ಗೆ ಬೆಂಕಿ ವಸ್ತುಗಳು ಭಸ್ಮ

ಆದ್ದರಿಂದ ಸದರಿ ಎಸ್.ಸಿ. ಪಂಗಡದಲ್ಲಿ ಎಡಗೈ ಸಮುದಾಯವರಿಗೆ ಬಿ.ಜೆ.ಪಿ. ಯಲ್ಲಿ ಯಾವುದೇ ರೀತಿಯ ಉನ್ನತ ಮಟ್ಟದ ಸ್ಥಾನ ಮಾನ ಸಿಗದೇ ಇರುವುದರಿಂದ ಅವರ ಮನಸ್ಸಿನಲ್ಲಿ ನೋವು ಇರುತ್ತದೆ.

ಆದ್ದರಿಂದ ಸದರಿ ೨೦೨೨ ರಲ್ಲಿ ನಡೆಯುವ ಶಾಸಕರ ಕರ್ನಾಟಕ ವಿಧಾನ ಪರಿಷತ್ ಹುದ್ದೆಗೆ ಡಾ. ಸುನೀಲಕುಮಾರ.ಹೆಚ್. ವಂಟಿ ರವರನ್ನು ಆಯ್ಕೆ ಮಾಡಬೇಕೆಂದು ಜೈ ಕನ್ನಡಿಗರ ರಕ್ಷಣಾ ವೇದಿಕೆ ಹಾಗೂ ದಲಿತ ಮುಖಂಡರು ಜಂಟಿಯಾಗಿ ಜೂನ್ ೨೫ ರಂದು ಕಲಬುರಗಿ ನಗರದಿಂದ ಬೆಂಗಳೂರು ನಿಯೋಗವನ್ನು ತೆಗೆದುಕೊಂಡು ಹೋಗಿ, ಮುಖ್ಯಮಂತ್ರಿಗಳಿಗೆ ಹಾಗೂ ಬಿ.ಜೆ.ಪಿ. ಪಕ್ಷದ ರಾಜ್ಯಾಧ್ಯಕ್ಷರಿಗೆ ಹಾಗೂ ಸಂಬಂಧಪಟ್ಟ ಸಚಿವರಿಗೆ ಮನವಿ ಸಲ್ಲಿಸುತ್ತೇವೆ ಎಂದು ಜೈ ಕನ್ನಡಿಗರ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಸಚೀನ್ ಫರತಾಬಾದ, ಪ್ರ.ಕಾರ್ಯದರ್ಶಿ ಕಾಶಿನಾಥ ಮಾಳಗೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಮಂಗಿಹಾಳ ಗ್ರಾಮದಲ್ಲಿ ಸಿಡಿಲಿಗೆ ವ್ಯಕ್ತಿ ಬಲಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here