ಬರ ಪರಿಸ್ಥಿತಿ ಹಿನ್ನೆಲೆ: ಜಿಲ್ಲೆಯಲ್ಲಿ 14 ಮೇವು ಬ್ಯಾಂಕ್‌ಗಳ ಸ್ಥಾಪನೆ

0
112

ಕಲಬುರಗಿ: ಜಿಲ್ಲೆಯಲ್ಲಿ ಬರಸ್ಥಿತಿ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಮುಂಜಾಗೃತ ಕ್ರಮವಾಗಿ ಜಿಲ್ಲೆಯಲ್ಲಿ ಒಟ್ಟು 14 ಮೇವು ಬ್ಯಾಂಕ್‌ಗಳನ್ನು ಸ್ಥಾಪಿಸಲಾಗಿದೆ. ಈ ಮೇವು ಬ್ಯಾಂಕ್‌ಗಳಲ್ಲಿ ಒಣಮೇವನ್ನು ಸಂಗ್ರಹಿಸಿಡಲಾಗಿದೆ. ಅವಶ್ಯಕವಿರುವ ಜಾನುವಾರುಗಳ ಮಾಲೀಕರು ಸಂಬಂಧಪಟ್ಟ ತಾಲೂಕಿನ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರುಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ಕಲಬುರಗಿ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ತಾಲೂಕಿನ ಹೆಸರು ಹಾಗೂ ಮೇವು ಬ್ಯಾಂಕ್ ಸ್ಥಾಪಿಸಿದ ಸ್ಥಳದ ವಿವರ ಇಂತಿದೆ. ಅಫಜಲಪುರ ತಾಲೂಕಿನ ರೇವೂರ ಹಾಗೂ ಅತನೂರ. ಆಳಂದ ತಾಲೂಕಿನ ಆಳಂದ ಹಾಗೂ ಖಜೂರಿ. ಚಿಂಚೋಳಿ ತಾಲೂಕಿನ ಐನಾಪುರ ಹಾಗೂ ಕೊಡ್ಲಿ. ಚಿತ್ತಾಪೂರ ತಾಲೂಕಿನ ಚಿತ್ತಾಪುರ ಹಾಗೂ ನಾಲವಾರ. ಜೇವರ್ಗಿ ತಾಲೂಕಿನ ಆಂದೋಲಾ ಹಾಗೂ ಹುಲ್ಲೂರ. ಕಲಬುರಗಿ ತಾಲೂಕಿನ ಅವರಾದ ಹಾಗೂ ಪಟ್ಟಣ. ಸೇಡಂ ತಾಲೂಕಿನ ಮುಧೋಳ ಹಾಗೂ ಮಳಖೇಡ.

Contact Your\'s Advertisement; 9902492681

ಸರ್ಕಾರ ನಿಗದಿಪಡಿಸಿದ ದರದಂತೆ ಪ್ರತಿ ಕೆ.ಜಿ ೨ರೂ. ಗಳ ದರವನ್ನು ಪಾವತಿಸಿ ಮೇವನ್ನು ಖರೀದಿಸಬಹುದಾಗಿದೆ. ರೈತರು ಆಧಾರ ಕಾರ್ಡ್ ಅಥವಾ ಯಾವುದಾದರೂ ಗುರುತಿನ ಚೀಟಿಯ ಪ್ರತಿಯನ್ನು ಕಡ್ಡಾಯವಾಗಿ ತರಬೇಕು. ಸಂಬಂಧಪಟ್ಟ ರೈತರು ಆಯಾ ಭಾಗದ ಪಶು ಚಿಕಿತ್ಸಾಲಯ ವ್ಯಾಪ್ತಿಯಲ್ಲಿ ಬರುವ ಪಶು ವೈದ್ಯಾಧಿಕಾರಿಗಳಿಂದ ಜಾನುವಾರುಗಳ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ತರಬೇಕೆಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here