ಕಾರಜೋಳ್‌ರಿಗೆ ಉಪ ಮುಖ್ಯಮಂತ್ರಿ ಸ್ಥಾನ: ಬಿಜೆಪಿ ವರಿಷ್ಠರಿಗೆ ಮಾದಿಗ ಮಹಾಸಭಾ ಮೊರೆ

0
69

ಕಲಬುರಗಿ: ರಾಜ್ಯದಲ್ಲಿ ರಚನೆಯಾಗಲಿರುವ ಬಿಜೆಪಿ ಸರ್ಕಾರದಲ್ಲಿ ಮಾದಿಗ ಸಮಾಜದ ಪರಮೋಚ್ಛ ನಾಯಕ, ಮಾಜಿ ಸಚಿವ ಗೋವಿಂದ್ ಕಾರಜೋಳ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ಕೊಡಬೇಕು ಎಂದು ಅಣ್ಣಾಬಾಬಹು ಸಾಠೆ ಮಾದಿಗ ಮಹಾಸಭಾ ಕರ್ನಾಟಕ ಸಂಸ್ಥಾಪಕ ಅಧ್ಯಕ್ಷ ಹಾಗೂ ಮಹಾನಗರ ಪಾಲಿಕೆ ಸದಸ್ಯ ನಾಗರಾಜ್ ಡಿ. ಗುಂಡಗುರ್ತಿ ಅವರು ಇಲ್ಲಿ ಮನವಿ ಮಾಡಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋವಿಂದ್ ಕಾರಜೋಳ್ ಅವರು ಬಿಜೆಪಿ ಪಕ್ಷದಲ್ಲಿ ಹಲವಾರು ವರ್ಷಗಳಿಂದ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದ್ದಾರೆ. ಬಿಜೆಪಿ ಇಲ್ಲಿಯವರೆಗೆ ನೀಡಿದ ಎಲ್ಲ ಜವಾಬ್ದಾರಿಗಳನ್ನು ಕಾರಜೋಳ್ ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ.

Contact Your\'s Advertisement; 9902492681

ಬಿಜೆಪಿ ಪಕ್ಷವು ವಿಧಾನ ಪರಿಷತ್ ಪ್ರತಿಪಕ್ಷ ಸ್ಥಾನ ನೀಡಲಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿ ಮಾದಿಗ ಸಮಾಜದ ಮುಖಂಡ, ಮಾಜಿ ಸಚಿವ ಕೆ.ಬಿ. ಶಾಣಪ್ಪ ಅವರು ಪಕ್ಷ ತ್ಯಜಿಸಿದ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗುಂಡಗುರ್ತಿ ಅವರು, ಶಾಣಪ್ಪ ಅವರು ಬಿಜೆಪಿಗೆ ಹೊಸದಾಗಿ ಬಂದರೂ ಸಹ ಮಾದಿಗ ಸಮಾಜಕ್ಕೆ ಪ್ರಾತಿನಿಧ್ಯ ನೀಡಲು ಅವರಿಗೆ ರಾಜ್ಯಸಭಾ ಸದಸ್ಯತ್ವ ಹಾಗೂ ವಿಧಾನ ಪರಿಷತ್ ಸದಸ್ಯತ್ವ ನೀಡಲಾಯಿತು.

ಬಿಜೆಪಿ ಸರ್ಕಾರದಲ್ಲಿ ನಾವು ಯಾವುದೇ ರೀತಿಯಲ್ಲಿ ಪ್ರಾತಿನಿಧ್ಯ ನಿರೀಕ್ಷಿಸುವುದಿಲ್ಲ. ಗೋವಿಂದ್ ಕಾರಜೋಳ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿದರೆ ಅದೇ ಸಮಾಜಕ್ಕೆ ಪ್ರಾತಿನಿಧ್ಯ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ರಾಜು ಹದನೂರ್, ರಾಜು ಕಟ್ಟಿಮನಿ, ರಮೇಶ್ ವಾಡೇಕರ್, ಸಿದ್ದು ಹೊಸಮನಿ, ಅಂಬಾರಾಯ್ ಬೆಳಕೋಟಾ, ಅಂಬಾರಾಯ್ ಚಲಗೇರಾ, ಬಿಡೇಶ್ ರತ್ನಡಗಿ, ರಾಜು ತೇಲಂಗೆ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here