ಕಲಬುರಗಿ: ಇತ್ತೀಚಿಗೆ ಪಂಜಾಬ ರಾಜ್ಯದಲ್ಲಿ ಭಗವಂತ ಮಾನ್ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಿರುವ ಆಮ್ ಆದ್ಮಿ ಪಕ್ಷ ಭ್ರಷ್ಟಾಚಾರದ ವಿರುದ್ಧ ಕ್ರಮಗೈಂಡಿರುವ ಕ್ರಮ ನಿಜಕ್ಕೂ ಜನಪರ ಸರಕಾರ ಎನ್ನುವದು ಸಾಭಿತಾಗಿದೆ. ಆದರೆ ರಾಜ್ಯದಲ್ಲಿ ೪೦% ಕಮೀಷನ್ ಬೇಡಿಕೆ ಆರೋಪ ಮಾಡಿ ಗುತ್ತಿಗೆದಾರರೊಬ್ಬರು ಆತ್ಮಹತ್ಯ ಮಾಡಿಕೊಂಡರು ಇದುವರೆಗೂ ಯಾರನ್ನು ಬಂಧಿಸಿದ ರಾಜ್ಯದ ಪೊಲೀಸರು. ರಾಜ್ಯದಲ್ಲಿ ಜೀವ ಹೋದರೂ ಬೆಲೆಯಿಲ್ಲದಂತಾಗಿದೆಯೇ ಎಂದು ಆಮ್ ಆದ್ಮಿ ಪಕ್ಷದ ಕಲಬುರಗಿ ದಕ್ಷಣಿ ಮತಕ್ಷೇತ್ರದ ಉಸ್ತುವಾರಿ ಸಿದ್ದು ಪಾಟೀಲ(ತೆಗನೂರ) ಆರೋಪಿಸುತ್ತಾ ಆಕ್ರೋಶ ಹೊರಹಾಕಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು ಆಮ್ ಆದ್ಮಿ ಪಕ್ಷವು ದೆಹಲಿಯಲ್ಲಿ ೨೦೧೫ರಲ್ಲಿ ಅಲ್ಲಿನ ಮುಖ್ಯಮಂತ್ರಿ ಕೇಜ್ರಿವಾಲ್ ಅವರ ಮಂತ್ರಿಮಂಡಲ್ಲಿರುವ ಸಚಿವರೊಬ್ಬರು ಲಂಚ ಪಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದ ತಕ್ಷಣ ಅವರ ವಿರುದ್ಧ ಸಿಬಿಐ ತನಿಖೆ ಆದೇಶಿಸಿದಲ್ಲದೇ ಅವರನ್ನು ಸಚಿವ ಸ್ಥಾನದಿಂದ ತೆಗೆದು ಹಾಕಿದ್ದರು. ಆಮ್ ಆದ್ಮಿ ಪಕ್ಷದಲ್ಲಿ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಎಂದು ಹೇಳಿಕೆ ನೀಡುವ ಅರವಿಂದ ಕೇಜ್ರಿವಾಲ್ ಅವರು ನುಡಿದಂತೆ ನಡೆದಿದ್ದಾರೆ.
ಪಂಜಾಬ ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷದ ನೇತೃತ್ವದ ಸರಕಾರದಲ್ಲಿ ಅಲ್ಲಿನ ಆರೋಗ್ಯ ಸಚಿವರು ತಮ್ಮ ಕ್ಷೇತ್ರದ ಅಭಿವೃದ್ಧಿ ಕಾಮಗಾರಿ ಕೆಲಸದಲ್ಲಿ ಕೇವಲ ೧% ಕಮಿಷನ್ ಬೇಡಿಕೆ ಇಟ್ಟಿದ್ದರೂ ಎಂಬ ಮಾಹಿತಿ ಪಡದು ಕೊಂಡ ಅಲ್ಲಿನ ಮುಖ್ಯ ಮಂತ್ರಿ ಭಗವಂತ ಮಾನ್ ಅವರು ಸಚಿವರನ್ನು ಕರೆಸಿಕೊಂಡು ಅವರೊಂದಿಗೆ ಚರ್ಚಿಸಿ ಕೂಡಲೆ ಅವರನ್ನು ಎಸಿಬಿ ಪೊಲೀಸರಿಗೆ ಬಂಧಿಸಲು ಸೂಚಿಸಿದ್ದು ನುಡಿದಂತೆ ನಡೆಯುವ ಪಕ್ಷ ಆಮ್ ಆದ್ಮಿ ಪಕ್ಷವಾಗಿದೆ.
ರಾಜ್ಯದಲ್ಲಿ ಹಿಂದಿ ಸಚಿವರೊಬ್ಬರು ಕಾಮಗಾರಿ ಬಿಲ್‌ಗಳು ಪಾಸ್ ಮಾಡಬೇಕಾದರೆ ಮದ್ಯವರ್ತಿಗಳ ಮುಖಾಂತರ ೪೦% ಕಮಿಷನ್ ನೀಡಲೇ ಬೇಕು ಎಂಬ ಬೇಡಿಕೆ ಇಟ್ಟಿದ್ದರು ಎಂದು ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದರರು ಬರೆದಿಟ್ಟಿದ್ದ ಡೆತ್‌ನೋಟ್‌ನಲ್ಲಿ ಹಾಗೂ ವಿಡಿಯೋದಲ್ಲಿ ಹೇಳಿಕೆ ನೀಡಿದ್ದರು.
ಒಬ್ಬ ಆರೋಪಿಯನ್ನು ಬಂಧಿಸಲು ಇದಕ್ಕಿಂತ ಸಾಕ್ಷಿ ಬೇಕೆ ಎಂದು ಮಾತುಗಳು ರಾಜ್ಯದಲ್ಲಿ ಕೇಳಿಬಂದಿತ್ತು. ಇಲ್ಲಿ ಜನಸಾಮಾನ್ಯರಿಗೆ ಒಂದು ನ್ಯಾಯ ಮತ್ತು ಅಧಿಕಾರದಲ್ಲಿರುವವರಿಗೆ ಒಂದು ನ್ಯಾಯವೇ? ಮಾತುಗಳು ಇಂದು ಜನಸಾಮಾನ್ಯರು ಆಡಿಕೊಳ್ಳುತ್ತಿದ್ದಾರೆ ಎಂದು ತಿಳಿದ್ದಾರೆ.