ಹಳ್ಳಿಹಕ್ಕಿ ಹೆಚ್. ವಿಶ್ವನಾಥ್‌ಗೆ ಸಚಿವ ಸ್ಥಾನ ನೀಡುವಂತೆ ಸದಾನಂದ ಗೌಡರಿಗೆ ಮನವಿ

0
73

ಮೈಸೂರು: ಹಳ್ಳಿಹಕ್ಕಿ ಹೆಚ್. ವಿಶ್ವನಾಥ್‌ಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಪ್ರಧಾನಮಂತ್ರಿಅವರಿಂದ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡುವಂತೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರಿಗೆ ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿಯ ಅಧ್ಯಕ್ಷರಾದ  ಜಾಕೀರ್ ಹುಸೇನ್ ಮನವಿ ಸಲ್ಲಿಸಿದರು.

ದಿ. ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಗರಡಿಯಲ್ಲಿ ಬೆಳೆದು ಅರಸುರವರ ಆದರ್ಶ, ತತ್ವ ಸಿದ್ದಾಂತಗಳನ್ನು ಮೈಗೂಡಿಸಿಕೊಂಡ ಯುವ ವಕೀಲಾರಾಗಿದ್ದ ಅಡಗುರು ಹೆಚ್.ವಿಶ್ವನಾಥ್ ೧೯೭೮ ರಲ್ಲಿ ಇಂದಿರಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕೆ.ಆರ್.ನಗರದ ಕ್ಷೇತ್ರದಿಂದ ಮೊಟ್ಟ ಮೊದಲ ಬಾರಿಗೆ ವಿಧಾನ ಸಭೆ ಪ್ರವೇಶಿಸಿದರು ಕಳೆದ ೪೫ ವರ್ಷಗಳಿಂದಲು ಸಕ್ರಿಯ ರಾಜಕಾರಣದಲ್ಲಿರುವ ಹೆಚ್.ವಿ.ವಿಧಾನಸಭೆ, ಲೋಕಸಭೆ ಸುತ್ತಿ ಬಂದು ಪ್ರಸ್ತುತ ರಾಜ್ಯ ಬಿ.ಜೆ.ಪಿ.ಪಕ್ಷದಲ್ಲಿ ಸಾಹಿತ್ಯ ಕ್ಷೇತ್ರದಿಂದ ನಾಮನಿರ್ದೇಶನಗೊಂಡು ಹಾಲಿ ವಿಧಾನ ಪರಿಷತ್ ಸದಸ್ಯರಾಗಿದ್ದರೆ. ರಾಜ್ಯ ಬಿ.ಜೆ.ಪಿ.ಪಕ್ಷದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ವೈ ಬಿಟ್ಟರೆ ಹಿರಿಯ ಮುತ್ಸದ್ಧಿ ರಾಜಕಾರಿಣಿ ಹೆಚ್.ವಿಶ್ವನಾಥ್ ಮಾತ್ರ, ಜೆ.ಡಿ.ಎಸ್.ಪಕದಲ್ಲಿ ಅವರು ರಾಜ್ಯಾಧ್ಯಕ್ಷರಾಗಿದ್ದ ಸಮಯದಲ್ಲಿ ಕೆಲವು ರಾಜಕೀಯ ಬೆಳವಣಿಗೆಗಳಿಂದ ಮನನೊಂದು ಆ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಬಿ.ಜೆ.ಪೀ ಪಕ್ಷ ಅಧಿಕಾರಕ್ಕೆ ತರಲು ಪಣತೊಟ್ಟು ಯಶಸ್ವಿಯಾದ್ದಾರೆ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ಈ  ಹಳ್ಳಿಹಕ್ಕಿ ಈ ಸಂಗತಿಯನ್ನು ತಾವು ಮರೆಯುವಂತಿಲ್ಲ, ,ಹೀಗಾಗಿ ಇವರನ್ನು ಕರ್ನಾಟಕ ರಾಜ್ಯ ಕಾರಣದ ಚಾಣಾಕ್ಷ ಎಂದರು ತಪ್ಪಾಗಲಾರದು ಇದಕ್ಕೆ ಸಾಕ್ಷಿ ಇಂದಿನ ನಿಮ್ಮ ರಾಜ್ಯ ಬಿ.ಜೆ.ಪಿ. ಸರ್ಕಾರ.ಆದರೂ ಕೂಡ ನಿಮ್ಮ ಸರ್ಕಾರ ರಚನೆಗೆ ರೂವಾರಿಯಾದ ಹೆಚ್.ವಿಶ್ವನಾಥ್ ರವರಿಗೆ ಇಂದಿಗೂ ಮಂತ್ರಿಗಿರಿ ನೀಡಿಲ್ಲ , ತಾವು ನೀಡುತ್ತಿರವ   ಕಾರಣಗಳು, ಪಕ್ಷಾಂತರ ಖಾಯ್ದೆ ಅಡಿ ಶಾಸಕತ್ವದಿಂದ ಅನರ್ಹ ಗೊಂಡಿದ್ದು ಹಾಗೂ ಕೋರ್ಟ್ ತೀರ್ಪು ೨೦೨೩ ರ ವರೆಗೂ ಮಂತ್ರಿಗಿರಿ ನೀಡುವಂತಿಲ್ಲ ಎಂಬ ಸಬೂಬುಗಳು ನಮಾಧಾನವಿಲ್ಲ.  ೧೯೮೯ ರಲ್ಲಿ ಶ್ರೀ ಎಂ.ವೀರಪ್ಪ ಮೊಯ್ಲಿ ರವರ ಸಂಪುಟದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಂತರ ಅರಣ್ಯ ಖಾತೆ ಸಚಿವರಾಗಿದ್ದರು,೧೯೯೯ ರಲ್ಲಿ ಎಸ್.ಎಂ.ಕೃಷ್ಣ ರವರ ಸಂಪುಟದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮತ್ತು ಸಹಕಾರ ಸಚಿವರಾಗಿದ್ದರೂ,  ಶಿಕ್ಷಣ ಸಚಿವರಾಗಿ ಶಾಲೆಗಳಲ್ಲಿ ಮಧ್ಯಾಹ್ನ ದ ಬಿಸಿಯೂಟ ಯೋಜನೆ ಜಾರಿ ಮಾಡಿದ ಅನ್ನ ದಾಸೋಹಿ, ಶಿಕ್ಷಣ ವ್ಯವಸ್ಥೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ಸಿ.ಇ.ಟಿ.ಯೋಜನೆ, ನಮ್ಮ ಊರು-ನಮ್ಮ ಶಾಲೆ, ಸಮುದಾಯದತ್ತಶಾಲೆ ಈ ರೀತಿಯ ಯೋಜನೆ ನೀಡಿದ ಅಕ್ಷರ ದಾಸೋಹಿ. ಹಾಗೂ ಸಹಕಾರ ಸಚಿವರಾಗಿದ್ದಾಗ ಯಶಸ್ವಿನಿ ಯೋಜನೆ ಜಾರಿ ಮಾಡಿದರು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಇಂತಹ ಹಲವಾರು ಶಾಶ್ವತ ಜನಪರ ಯೋಜನೆಗಳನ್ನು ತಮ್ಮ ಅಧಿಕಾರಾವಧಿಯಲ್ಲಿ ನೀಡಿದ ಹಳ್ಳಿಹಕ್ಕಿ. ಸದಾ ಸಮಾಜದ ಒಳಿತಿಗಾಗಿ ಚಿಂತಿಸುವ ಮುತ್ಸದ್ದಿ ಹೆಚ್.ವಿಶ್ವನಾಥ್ ರವರಿಗೆ ಈ ಬಾರಿಯ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ನೀಡುವಂತೆ ಮನವಿಯಲ್ಲಿ ಕೋರಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here