ಆನೆಗುಂದಿ ಜಯಲಕ್ಷಿ ದೇಗುಲ ತರಾತುರಿಯಲ್ಲಿ ಸ್ಥಳಾಂತರ ತನಿಖೆಯಾಗಲಿ: ಪತ್ರೇಶ ಹಿರೇಮಠ್

0
11

ಹಗರಿಬೊಮ್ಮನಹಳ್ಳಿ:- ಆನೆಗೊಂದಿ ಪಕ್ಕದ ಪಂಪಾ ಸರೋವರದ ಬಳಿಯ ಪುರಾತತ್ವ ಇಲಾಖೆಗೆ ಸೇರಿರುವ ಪುರಾತನ ಜಯಲಕ್ಷಿ ದೇಗುಲವನ್ನು ತರಾತುರಿಯಲ್ಲಿ ಸ್ಥಳೀಯ ಭಕ್ತರ ಗಮನಕ್ಕೂ ತಾರದೇ ಸಚಿವ ಶ್ರೀರಾಮುಲು ನೇತೃತ್ವದ ತಂಡದವರು ಜೀರ್ಣೋದ್ಧಾರ ನೆಪದಲ್ಲಿ ಹಿಂದೂ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸದೇ ಸ್ಥಳಾಂತರಿಸಿದ್ದೇಕೆ? ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಪತ್ರೇಶ್ ಹಿರೇಮಠ್ ಪ್ರಶ್ನಿಸಿದ್ದಾರೆ.

ಹಿಂದುತ್ವ ಸಂಪ್ರದಾಯ ಆಚರಣೆ ಭಕ್ತಿಯ ಬಗ್ಗೆ ಮತ್ತೆ ಮಾತನಾಡುವ ಬಿಜೆಪಿಗರೇ ಜಯಲಕ್ಷಿ ದೇಗುಲವನ್ನು ಕನಿಷ್ಠ ಧಾರ್ಮೀಕ ವಿಧಿವಿಧಾನ ಅನುಸರಿಸದೇ ಸ್ಥಳಾಂತರಿಸಿರುವ ಮೂಲಕ ತಾವು ಏನು ಮಾಡಿದರೂ ಸರಿ ಮಾಡಿದ್ದೇ ಸಂಪ್ರದಾಯ ಎನ್ನುವಂತೆ ನಡೆದುಕೊಳ್ಳುತ್ತಿದ್ದು ಒಂದು ಬಾರಿ ಪುರಾತತ್ವ ಇಲಾಖೆ ವಶಪಡಿಸಿಕೊಂಡ ಮೇಲೆ ದೇಗುಲವನ್ನು ಯಥಾಸ್ಥಿತಿ ಕಾಪಾಡುವುದು ಇಲಾಖೆಯ ಜವಾಬ್ದಾರಿಯಾಗಿದ್ದು ಜೀರ್ಣೋದ್ಧಾರಕ್ಕೆ ಬೇರೆಯವರಿಗೆ ಅನುಮತಿ ನೀಡಿದ್ದೂ ಏಕೆ? ಎಂದು ಪತ್ರೇಶ್ ಕೇಳಿದ್ದಾರೆ

Contact Your\'s Advertisement; 9902492681

ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ತರಾತುರಿಯಲ್ಲಿ ಮೂರ್ತಿ ಸ್ಥಳಾಂತರ ಮಾಡಿರುವುದನ್ನು ನೋಡಿದರೆ ಇದು ನಿಧಿ ಶೋಧವೇ ಅಥವಾ ಶಕ್ತಿ ದೇವತೆಯನ್ನು ವೈಯುಕ್ತಿಕ ಹೋಮಹವನಕ್ಕೆ ಬಳಸಿಕೊಳ್ಳುವ ಪ್ರಯತ್ನವೇ ಎನ್ನುವ ಅನುಮಾನ ಜನರಲ್ಲಿ ಮೂಡಿದ್ದು ತಕ್ಷಣವೇ ಉನ್ನತ ಮಟ್ಟದ ಅಧಿಕಾರಿಗಳ ತಂಡದಿಂದ ತನಿಖೆ ನಡೆಸಬೇಕೆಂದು ಪತ್ರೇಶ್ ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here