ಚಿಂಚೋಳಿ: ತಾಲೂಕಿನ ಮಿರಿಯಾಣ ಪೋಲಿಸ್ ಠಾಣೆಯಲ್ಲಿ ಎ.ಎಸ್. ಐ ಆಗಿ ಕಾರ್ಯ ನಿರ್ವಹಿಸಿ ಮೇ. 31 ರಂದು ವಯೋನಿವೃತ್ತಿ ಹೊಂದಿದ ಪ್ರಯುಕ್ತ ನೀಮಾಹೋಸಳ್ಳಿ ಕ್ರಾಸ್ ಹತ್ತಿರ ಉಮಾಕಾಂತ ಟೈಗರ್ ಅವರಿಗೆ ಕೆ.ಹೆಚ್.ಬಿ ಗ್ರೀನ್ ಪಾರ್ಕ್ ಗೆಳೆಯರ ಬಳಗದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಇದನ್ನೂ ಓದಿ: ಕಲಬುರಗಿ ಪೇಟೆ ಧಾರಣೆ
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಮಾಜ ಸೇವಕ ಸಂಜೀವಕುಮಾರ ಶೆಟ್ಟಿ ಯಾವ ಅಧಿಕಾರಿಗೆ ತಾಳ್ಮೆ, ಸಮಾಧಾನ, ಸಹನೆ ಇರುತ್ತದೋ ಆತ ಯಶಸ್ವಿಯಾಗಿ ಅಧಿಕಾರ, ಆಡಳಿತ ನಡೆಸುತ್ತಾನೆ. ವಿಶೇಷವಾಗಿ ಪೊಲೀಸ್ ಕೆಲಸಕ್ಕೆ ತಾಳ್ಮೆ ತುಂಬಾನೆ ಅಗತ್ಯ. ಟೈಗರ್ ಅವರ ಪ್ರಮಾಣಿಕ ಸೇವೆ ಬಹಳ ಅನನ್ಯವಾಗಿತ್ತು. ಅವರು ಪೋಲಿಸ್ ವೃತ್ತಿ ಜೀವನದಲ್ಲಿ ಎಂದಿಗೂ ಪೋಲಿಸ್ ದರ್ಪ ತೋರಿಸಲಿಲ್ಲ ಎಂದರು.
ಇದನ್ನೂ ಓದಿ: ಮೂಲ ಸೌಕರ್ಯ ಒದಗಿಸಲು ಒತ್ತಾಯಿಸಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರಗೆ ಮನವಿ
ಕಾರ್ಯಕ್ರಮದಲ್ಲಿ ಶಿವಕಾಂತ ಚಿಮ್ಮಾ, ವೀರೇಶ ಬೋಳಶೆಟ್ಟಿ ನರೋಣಾ, ಬಾಲಕೃಷ್ಣ ಕುಲಕರ್ಣಿ, ಸೂರ್ಯಕಾಂತ ಸಾವಳಗಿ, ಚಂದ್ರಕಾಂತ ತಳವಾರ, ಶ್ರೀನಿವಾಸ ಬುಜ್ಜಿ, ಡಿ.ವಿ ಕುಲಕರ್ಣಿ, ಬಸವರಾಜ ಹೆಳವರ ಯಾಳಗಿ, ರಮೇಶ ಕೋರಿಶೆಟ್ಟಿ, ಕುಶಾಲ ದರ್ಗಿ, ಪ್ರದೀಪ್ ಕುಂಬಾರ, ದೀಲಿಪ ಬಕ್ರೆ, ನಾಗೆಂದ್ರಪ್ಪ ದಂಡೋತಿಕರ, ಮಲಕಾರಿ ಪೂಜಾರಿ, ಮಶಾಕ ಸಾಬ, ಚಂದ್ರು ಮಲ್ಕಾಪುರೆ, ರಾಜಶೇಖರ ಜಕ್ಕಾ, ಹಾಗೂ ಇನ್ನಿತರರಿದ್ದರು.