ರಾಜಮಾತ ಅಹಲ್ಯಾಬಾಯಿ ಹೋಳ್ಕರವರ ಮನೋಸ್ಥಿತಿ ಅಳವಡಿಸಿಕೊಳ್ಳಬೇಕು : ತೋಂಟಾಪುರ

0
42

ಕಲಬುರಗಿ : ರಾಜಮಾತಾ ಅಹಲ್ಯಾಬಾಯಿ ಹೋಳ್ಕರ್ ಅವರು ಮಹಿಳಾ ಹೋರಾಟಗಾರರ ದಿವ್ಯ ಮಾಣಿಕ್ಯವಾಗಿ ಸುಭದ್ರವಾದ ಆಡಳಿತ ನಿರ್ವಹಿಸಿ ನಮ್ಮ ಭಾರತೀಯ ಇತಿಹಾಸದಲ್ಲಿ ಅಜರಾಮರವಾಗಿ ಉಳಿದಿರುವರು . ಅವರ ಆದರ್ಶದ ಬದುಕು ನಮ್ಮೆಲ್ಲರಿಗೂ ಮಾದರಿಯವಾಗಿದೆಯೇ ಮುಂದೆ ಕೂಡ ಆಗಬೇಕು ಅಹಲ್ಯಬಾಯಿ ಹೋಲ್ಕರ್ ಎಂಬುವರು ಅಚ್ಚಳಿದು ಒಂದು ನಕ್ಷತ್ರ ಎಂದು ರಾಷ್ಟ್ರೀಯ ಸಮಾಜ ಪಕ್ಷ- ಕರ್ನಾಟಕ ಉಸ್ತುವಾರಿಯಾದ ಧರ್ಮಣ್ಣ ತೊಂಟಾಪುರ ಹೇಳಿದರು.

ನಗರದ ರಾಮಮಂದಿರ ಹಿಂದುಗಡೆ ಇರುವ ಹರಳಯ್ಯ ಸಮುದಾಯ ಭವನದಲ್ಲಿ ರಾಷ್ಟ್ರೀಯ ಸಮಾಜ ಪಕ್ಷ – ಕರ್ನಾಟಕ, ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಕಲಬುರಗಿ ಸಹಯೋಗದಲ್ಲಿ ರಾಜಮಾತಾ ಅಹಲ್ಯಾಬಾಯಿ ಹೋಳ್ಕರ ಅವರ 297 ನೇ ಜಯಂತಿ ಕಾರ್ಯಕ್ರಮದ ಅಂಗವಾಗಿ ನಮ್ಮ ನಡೆ ಗುಲಾಮಗಿರಿಯಿಂದ ಅಧಿಕಾರದ ಕಡೆಗೆ ವಿಚಾರ ಸಂಕಿರ್ಣ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ವಿಶೇಷ ಉಪನ್ಯಾಸನೀಡಿ ಮಾತನಾಡಿದ ಅವರು ಅವರು ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾದ ಅಹಲ್ಯಾ ಬಾಯಿ ಹೋಳರ್ ಸಂಸ್ಥಾನದ ಜವಾಬ್ದಾರಿಗಳನ್ನು ಅರಿತುಕೊಳ್ಳುತ್ತಾಳೆ ಹಾಗೂ ಪತಿ ಖಂಡೋಬರಾವ್ ಅವರ ದುಶ್ಚಟಗಳನ್ನು ಪರಿವರ್ತಿಸಿ ರಾಜ್ಯ ಭಾರವನ್ನು ಮಾಡುವಂತೆ ಧೈರ್ಯ ತುಂಬುತ್ತಾಳೆ . ಮತ್ತು ಪತಿ ಯುದ್ಧದಲ್ಲಿ ಮಡಿದ ನಂತರ ಆತ್ಮ ಸೈರ್ಯ ಕಳೆದುಕೊಳ್ಳದೇ ದೀರ ಮಹಿಳೆಯಾಗಿ ಯುದ್ಧ ನೀತಿಗಳನ್ನು ತಿಳಿದುಕೊಂಡು ಸಂಸ್ಥಾನವನ್ನು ಮುಂದುವರೆಸಿ ಹಿಂದೂ ಧರ್ಮದ ಹಲವಾರು ದೇವಾಲಯಗಳನ್ನು ಕಟ್ಟಿಸುತ್ತಾಳೆ ಹಾಗೂ ಪುನರುತ್ಥಾನ ಮಾಡಿಸುವುದರ ಜೊತೆಗೆ ಮಹಿಳೆಯರಿಗೆ ಶಿಕ್ಷಣ , ಸಂಸ್ಕಾರ ಹಾಗೂ ಧೈರ್ಯವನ್ನು ತುಂಬುವ ಕಾರ್ಯ ಮಾಡುತ್ತಾಳೆ. ಕುರುಬ ಸಮಾಜದಲ್ಲಿ ಜನಿಸಿ ಇಷ್ಟೆಲ್ಲ ಸಾಧನೆ ಮಾಡಿದರು ಎಂದು ಹೇಳಿದರು .

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರಾಷ್ಟ್ರೀಯ ಸಮಾಜ ಪಕ್ಷ ಕರ್ನಾಟಕ ಮುಖಂಡರಾದ ಶಿವಲಿಂಗಪ್ಪ ಕಿನ್ನುರ್ ಮಾತನಾಡಿ ರಾಜಕೀಯ ಕ್ಷೇತ್ರದಲ್ಲಿ ಸಾಮಾಜಿಕ ಸಮಾನತೆ , ಸಾಮಾಜಿಕ ಸುಧಾರಣೆ ಮಹಿಳಾ ಪರ ಅಭಿವೃದ್ಧಿಯನ್ನು ಮಾಡಿದರಾಜಮಾತಾಅಹಲ್ಯಾ ಬಾಹಿಹೋಳ್ವರ್‌ ಅವರು ಎಂದೆಂದಿಗೂ ಆದರ್ಶ ಮಹಿಳೆಯೆಂದು ಹೇಳಿದರು .

ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಕಾರ್ಯದರ್ಶಿ ಬಿಎಂ ರಾವೂರ ಮಾತನಾಡಿದರು.

ಕಾರ್ಯನಿರ್ವಾಹಕ ಇಂಜಿನಿಯರ್ ( ನಿವೃತ್ತ ) ಕೆ. ಬಿ. ಜೆ. ಏನ್. ಎಲ್ ಏಷಿಯನ್ ವೈದಿಕ ಕಲ್ಚರ್ ವಿಶ್ವವಿದ್ಯಾಲಯ ಚೆನ್ನೈ ಗೌರವಾನ್ವಿತ ಡಾಕ್ಟರೇಟ್ ಪುರಸ್ಕೃತರಾದ ಡಾಕ್ಟರ್ ಸುಭಾಶ್ಚಂದ್ರ ಸಂಭಾಜಿ , ಶ್ರೀ ಗುರು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಡಾಕ್ಟರ್ ಶಂಕರ ಬಾಳಿ, ಯುವ ಮುಖಂಡರು ರಾಜೇಂದ್ರ ರಾಜನಾಳ, ಲೋಕೋಪಯೋಗಿ ಇಲಾಖೆಯ ನಿಬಂಧಕರು (ನಿವೃತ್ತ) ರಾದ ಎಸ್. ಎ. ಪೂಜಾರಿ ಕಾಶಿಬಾಯಿ ಗುತ್ತೇದಾರ ಇತರರು ಭಾಗವಹಿಸಿದ್ದರು. ರಾಜೇಂದ್ರ ರಾಜನಾಳ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here