ಉಪಯೋಗಕ್ಕೆ ಬಾರದ ಸಾರ್ವಜನಿಕ ಶೌಚಾಲಯ

1
43

ಶಹಾಬಾದ: ನಗರದ ವಾರ್ಡ ನಂ. ೧೬ ರ ಅಶೋಕ ನಗರದಲ್ಲಿ ಬರುವ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ಸಾರ್ವಜನಿಕ ಶೌಚಾಲಯ ಜಾಲಿ ಕಂಟಿ ಗಿಡಗಳು ಬೆಳೆದು ಶೌಚಾಲಯ ಕಾಣದಂತಾಗಿದೆ.ಇದರಿಂದ ಇಲ್ಲಿನ ಜನರ ಉಪಯೋಗಕ್ಕೆ ಬಾರದಂತಾಗಿ ಸ್ಥಳೀಯ ತೊಂದರೆಯಾಗುತ್ತಿದೆ.

ಇದನ್ನೂ ಓದಿ: ಒಟ್ಟಾಗಿ ಸೇರಿ ಪತ್ರಕರ್ತರ ಸಂಘವನ್ನು ಮುನ್ನಡೆಸಿಕೊಂಡು ಹೋಗಿ: ಯಡ್ರಾಮಿ

Contact Your\'s Advertisement; 9902492681

ನಗರಸಭೆಯ ಎಸ್‌ಎಫ್‌ಸಿ ಅನುದಾನ(ಮುಕ್ತನಿಧಿ) ೨೦೦೭-೦೮ ರಲ್ಲಿ ನಿರ್ಮಾಣ ಮಾಡಿದ ಸಾರ್ವಜನಿಕ ಶೌಚಾಲಯದ ಸುತ್ತಲೂ ಕಟ್ಟಡದೆತ್ತರಕ್ಕೆ ಜಾಲಿಗಿಡಗಳು ಬೆಳೆದಿದೆ.ಇದರಿಂದ ಶೌಚಾಲಯದ ಒಳಗಡೆ ಹೋಗಲಾರದ ಪರಿಸ್ಥಿತಿ ಮೂಡಿದೆ. ಶೌಚಾಲಯದ ಗೋಡೆಗಳು ಬಿರುಕು ಬಿಟ್ಟಿವೆ.ಹಲವು ವರ್ಷಗಳಿಂದ ಅಧಿಕಾರಿಗಳಿಗೆ ತಿಳಿಸಿದರೂ ಕ್ಯಾರೆ ಎನ್ನುತ್ತಿಲ್ಲ ಎಂಬುವುದು ಸ್ಥಳೀಯ ಜನರ ಗೋಳಾಗಿದೆ.ಶೌಚಾಲಯ ಸಂಪೂರ್ಣ ಹಾಳಾಗಿ ಹಾಳು ಕೊಂಪೆಯಾಗಿ ಮಾರ್ಪಟ್ಟಿದೆ.ಹಂದಿಗಳ ವಾಸಸ್ಥಾನವಾಗಿದೆ.

ಇದನ್ನೂ ಓದಿ: ಊಟ ಬೇಡಿದ ತಪ್ಪಿಗೆ ಮಗಳ ಬೆರಳಿಗೆ ಬರೆಯಿಟ್ಟಳು ಮಲತಾಯಿ!

ಈಗಾಗಲೇ ಹಲವು ಬಾರಿ ಅಧಿಕಾರಿಗಳಿಗೆ ತಿಳಿಸಿದರೂ ಇಲ್ಲಿನ ಅಧಿಕಾರಿಗಳು ಮಾತ್ರ ತಮಗೆ ಸಂಬಂಧವಿಲ್ಲಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ. ಅಲ್ಲದೇ ಸಾರ್ವಜನಿಕ ಶೌಚಾಲಯ ನಿರ್ಮಿಸಿ ನೀರಿನ ವ್ಯವಸ್ಥೆಯೂ ಮಾಡಿಲ್ಲ.ಕೂಡಲೇ ಅಧಿಕಾರಿಗಳು ಶೌಚಾಲಯವನ್ನು ಸ್ವಚ್ಛಗೊಳಿಸಬೇಕು.ನೀರಿನ ವ್ಯವಸ್ಥೆ ಮಾಡಬೇಕು.ಬಿರುಕು ಬಿಟ್ಟಿರುವ ಗೋಡೆಗಳನ್ನು ಸರಿಪಡಿಸಬೇಕು.ಅಲ್ಲದೇ ಸಂಪೂರ್ಣ ನವೀಕರಣಗೊಳಿಸಿ ಇಲ್ಲಿನ ಜನರಿಗೆ ಉಪಯೋಗವಾಗುವಂತೆ ಅನುಕೂಲಮಾಡಿಕೊಡಬೇಕೆಂದು ನಗರಸಭೆಯ ಸದಸ್ಯ ಅವಿನಾಶ ಕಂಬಾನೂರ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಸರ್ಕಾರದ ವಜಾಕ್ಕೆ ಬಿಎಸ್‌ಪಿ ಆಗ್ರಹ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here