ಆಳಂದ: ಕಾಶ್ಮೀರದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಎರಡು ಗುಂಡು ತಾಗಿ ತೀವ್ರ ಸ್ವರೂಪದ ಗಾಯಗೊಂಡು ಸಾವು ಬದುಕಿನ ನಡುವೇ ಹೋರಾಡಿ ಚೇರಿಸಿಕೊಂಡಿರುವ ವಿಶೇಷ ಭದ್ರತಾ ಪಡೆಯ ಯೋಧ ಹಿರೋಳಿಯ ವಿಠ್ಠಲ ಶಾಂತಪ್ಪ ವಾಡೇದ ಅವರಿಗೆ ಮುಂದುವರೆದ ತುರ್ತು ಚಿಕಿತ್ಸೆಗೆ ಎಲ್ಲಾ ರೀತಿಯ ನೆರವು ಕಲ್ಪಿಸಲು ರಾಜ್ಯ ಸರ್ಕಾರ ಕ್ರಮವಹಿಸಬೇಕು ಎಂದು ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಮಹಾದೇವ ವಡಗಾಂವ ಅವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಗಾಯಗೊಂಡಿರುವ ಯೋಧ ವಿಠ್ಠಲ ಅವರ ತಾಲೂಕಿನ ಹಿರೋಳಿಯ ನಿವಾಸಕ್ಕೆ ಆಗಮಿಸಿ ವಿಶ್ರಾಂತಿ ಪಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಮುಖರೊಂದಿಗೆ ಅವರು ಭೇಟಿ ಮಾಡಿ ಯೋಧನ ಆರೋಗ್ಯ ವಿಚಾರಿಸಿದ್ದು ಅಲ್ಲದೆ, ಕಾಶ್ಮೀರದಲ್ಲಿ ಅಂದು ನಡೆದ ಯೋಧರ ಮೇಲಿನ ದಾಳಿಯ ಕುರಿತು ಅವರಿಂದ ಘಟನೆ ಮಾಹಿತಿ ಕಲೆಹಾಕಿ ಮಾತನಾಡಿದರು.
ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಶಿಕ್ಷಕರ ಕೊಡುಗೆ ಅಪಾರ: ದೇಶಮುಖ
ದಾಳಿಯಲ್ಲಿ ಒರ್ವ ಯೋಧ ಮೃತಪಟ್ಟಿದ್ದು, ಯೋಧರ ಪ್ರತಿದಾಳಿಯಲ್ಲೂ ಇಬ್ಬರು ಉಗ್ರರನ್ನು ಸದೆಬಡೆಯಲಾಗಿದೆ. ಈ ವೇಳೆ ಉಗ್ರರೊಂದಿಗೆ ಸೇಣಸಾಟದಲ್ಲಿ ಯೋಧ ವಿಠ್ಠಲ ಅವರಿಗೆ ಎರಡು ಗುಂಡುಗಳ ದೇಹಹೊಕ್ಕು ಹೊರಬಂದಿವೆ. ಒಂದು ತಿಂಗಳಕಾಲ ಕಾಶ್ಮೀರದ ಯೋಧರ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿಟ್ಟು ನೀಡಿದ ಚಿಕಿತ್ಸೆ ಫಲಕಾರಿಯಾದ ಬಳಿಕ ಚೇತರಿಸಿಕೊಂಡಿದ್ದಾರೆ ಎಂದರು.
ಗಂಭೀರ ಸ್ವರೂಪದ ಗಾಯಕ್ಕೆ ನೀಡಿದ ಗುಣಮಟ್ಟದ ಉನ್ನತ ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದಾರೆ. ವೈದ್ಯರು ಮೂರು ತಿಂಗಳ ಬಳಿಕ ಕಾಶ್ಮೀರದ ಆಸ್ಪತ್ರೆಗೆ ಮತ್ತೆ ಬರಲು ಹೇಳಿದ್ದಾರೆ. ಈ ಅವಧಿಯಲ್ಲಿ ಹತ್ತಿರದ ಮಲ್ಟಿಸ್ಪೇಶಾಲಿಟಿ ಆಸ್ಪತ್ರೆಯಲ್ಲಿ ನಿರಂತರ ಚಿಕಿತ್ಸೆಗೆ ವೈದ್ಯರು ಸಲಹೆ ನೀಡಿದ್ದಾರೆ. ಈ ಚಿಕಿತ್ಸೆಯ ವೆಚ್ಚ ನಂತರ ಕೇಂದ್ರ ಭರಿಸಿದರು ಸಹಿತ ಸದ್ಯದ ಚಿಕಿತ್ಸೆಗೆ ಆರ್ಥಿಕವಾಗಿ ಸಹಾಯ ನೀಡಬೇಕಾಗಿದೆ. ರಾಜ್ಯ ಸರ್ಕಾರ ಹತ್ತಿರದ ಪುಣೆ ಅಥವಾ ಬೆಂಗಳೂರಿನ ಸೈನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಆಸ್ಪತ್ರೆಗಳ ಖರ್ಚು ವ್ಯೆಚ್ಚವನ್ನು ಭರಿಸಿ ಯೋಧನ ಆರೋಗ್ಯ ಮೊದಲಿನಂತಾಗಲು ಆರ್ಥಿಕ ಮತ್ತು ಮಾನಸಿಕವಾಗಿ ಬಲ ತುಂಬಲು ಕ್ರಮಕೈಗೊಳ್ಳಬೇಕು. ದುಃಖದಲ್ಲಿರುವ ಯೋಧನ ಕುಟುಂಬಕ್ಕೆ ಭರವಸೆ ಮೂಡಿಸುವ ಕಾರ್ಯ ನಡೆಯಲಿ ಎಂದು ಹೇಳಿದರು.
ಇದನ್ನೂ ಓದಿ: ಉಪಯೋಗಕ್ಕೆ ಬಾರದ ಸಾರ್ವಜನಿಕ ಶೌಚಾಲಯ
ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗಮಾಡಲು ಸಿದ್ಧರಾದ ಯೋಧರ ಸಂಕಷ್ಟ ಬಂದಾಗ ಅವರಿಗೆ ಎಲ್ಲಾ ರೀತಿಯ ನೆರವು ನೀಡಬೇಕಾಗಿರುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.
ಪತ್ರಕರ್ತ ಶಿವಲಿಂಗ ಎಸ್. ಶಾಂತಪ್ಪ ಕೋರೆ, ತೇಲ್ಕರ್, ಸೂರಜ್ ಪತಂಗೆ, ಜಗದೀಶ ಕೋರೆ, ಕಿಸಾನಸಭಾ ಮುಖಂಡ ರಾಜಶೇಖರ ಬಸ್ಮೆ ಸೇರಿದಂತೆ ಇನ್ನಿತರು ಇದ್ದರು.
ಇದನ್ನೂ ಓದಿ: ಒಟ್ಟಾಗಿ ಸೇರಿ ಪತ್ರಕರ್ತರ ಸಂಘವನ್ನು ಮುನ್ನಡೆಸಿಕೊಂಡು ಹೋಗಿ: ಯಡ್ರಾಮಿ