ಎಲ್ಲರ ಕಣ್ಮನ ಸೆಳೆಯುತ್ತಿರುವ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿಯವರ ಸಿಲಿಕಾನ್ ಪ್ರತಿಮೆ

0
101

ಕಲಬುರಗಿ; ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳ ಸಿಲಿಕಾನ್ ಪ್ರತಿಮೆ ಕಲಬುರಗಿ ನಗರದ ಪ್ರಸಿದ್ಧ ಶರಣಬಸವೇಶ್ವರ ಪುಣ್ಯಕ್ಷೇತ್ರ ಹಾಗೂ ದಾಸೋಹ ಮಹಾಮನೆಗೆ ಭೇಟಿ ನೀಡುತ್ತಿರುವ ಎಲ್ಲರ ಕಣ್ಮನ ಸೆಳೆಯುತ್ತಿದೆ.

ಆಕ್ಟೋಜೆನೆರಿಯನ್ ದಾರ್ಶನಿಕ, ಶಿಕ್ಷಣತಜ್ಞ, ಪೂಜ್ಯ ಡಾ. ಅಪ್ಪಾಜಿ ಅವರಂತೆ ಹೋಲುವ ಎಲ್ಲಾ ಬಾಹ್ಯರೇಖೆಗಳೊಂದಿಗೆ ಸುಂದರವಾದ ಮತ್ತು ನೈಸರ್ಗಿಕವಾದ ಬಣ್ಣಗಳನ್ನು ಉಪಯೋಗಿಸಿ ಸಹಜಗಾತ್ರದ ಸಿಲಿಕಾನ್ ಪ್ರತಿಮೆಯನ್ನು ಆಸನದ ಭಂಗಿಯಲ್ಲಿ ತಯ್ಯಾರಿಸಲಾಗಿದೆ. ಬೆಂಗಳೂರು ಮೂಲದ ಶಿಲ್ಪಿ ಆನಂದ್ ಬೀಳಗಿ ಅವರು ಕಂಚು, ಫೈಬರ್, ಮತ್ತು ಮೇಣ ಉಪಯೋಗಿಸಿ ಸಿಲಿಕಾನ್ ಪ್ರತಿಮೆಗಳನ್ನು ತಯ್ಯಾರಿಸುವಲ್ಲಿ ಪರಿಣತಿ ಹೊಂದಿದ್ದಾರೆ.

Contact Your\'s Advertisement; 9902492681

ದಾಸೋಹ ಮಹಾಮನೆಗೆ ಎರಡು ಬಾರಿ ಭೇಟಿ ನೀಡಿದ ಶ್ರೀ ಆನಂದ ಬೀಳಗಿ, ಅವರು ಪ್ರತಿಮೆಯನ್ನು ಸಿದ್ಧಪಡಿಸಲು ಪೂಜ್ಯ ಡಾ. ಅಪ್ಪಾಜಿ ಅವರ ದೇಹದ ವಿವಿಧ ಭಾಗಗಳ ಅಳತೆಯನ್ನು ತೆಗೆದುಕೊಂಡು ಪೂಜ್ಯ ಡಾ.ಅಪ್ಪಾಜಿಯವರ ಎಲ್ಲಾ ವೈಶಿಷ್ಟ್ಯಗಳನ್ನು ಅದರ ನೈಜ ಸ್ವರೂಪಕ್ಕೆ ತರುವುದು ಮತ್ತು ಯಾರಾದರೂ ಪ್ರತಿಮೆಯನ್ನು ಮುಟ್ಟಿದಾಗ ನಿಜವಾದ ವ್ಯಕ್ತಿಯನ್ನು ಸ್ಪರ್ಶಿಸುವ ಭಾವನೆಯನ್ನು ನೀಡುವುದು ಸವಾಲಿನ ಕೆಲಸವಾಗಿತ್ತು ಎಂದರು.

ಈ ಮೊದಲು ಶ್ರೀ ಬೀಳಗಿ ಅವರು ಮೈಸೂರು ಮೂಲದ ಚಾಮುಂಡೇಶ್ವರಿ ಸೆಲೆಬ್ರಿಟಿ ಮ್ಯೂಸಿಯಂನಲ್ಲಿ ಗಣ್ಯರಾದ ಮದರ್ ತೆರೆಸಾ, ಸಿದ್ದಗಂಗಾ ಮಠದ ಡಾ ಶಿವಕುಮಾರ ಸ್ವಾಮಿಗಳು, ಡಾ ಬಿ ಆರ್ ಅಂಬೇಡ್ಕರ್, ವಲ್ಲಭಭಾಯಿ ಪಟೇಲ್, ದಲೈಲಾಮಾ, ಚಾರ್ಲಿ ಚಾಪ್ಲಿನ್ ಮತ್ತು ಇತರರ ಜೀವಿತಾವಧಿಯ ಪ್ರತಿಮೆಗಳನ್ನು ಕೆತ್ತಿದ್ದಾರೆ. ಶ್ರೀ ಬೀಳಗಿ ಅವರು ವಿಜಯಪುರದ ಅಭಿನವ ಶಿವಪುತ್ರ ಸ್ವಾಮಿಗಳು ಮತ್ತು ಇತರ ಸಿಲಿಕಾನ್ ಪ್ರತಿಮೆಗಳನ್ನು ಸಹ ತಯ್ಯಾರಿಸಿದ್ದಾರೆ.

ಪೂಜ್ಯ ಡಾ.ಅಪ್ಪಾಜಿ ಅವರು ಭೌತಿಕ ದರ್ಶನಕ್ಕೆ ಲಭ್ಯವಿಲ್ಲದಿದ್ದಾಗ, ಶರಣಬಸವೇಶ್ವರ ದೇಗುಲಕ್ಕೆ ಆಗಮಿಸುವ ಭಕ್ತರಿಗೆ ದರ್ಶನ ಹಾಗೂ ಆಶೀರ್ವಾದ ಪಡೆಯಲು ದಾಸೋಹ ಮಹಾಮನೆಯಲ್ಲಿ ಪ್ರತಿμÁ್ಠಪಿಸಲಾಗಿರುವ ಈ ಮೂರ್ತಿಯನ್ನು ವಿನ್ಯಾಸಗೊಳಿಸಲು ಸುಮಾರು ನಾಲ್ಕು ತಿಂಗಳು ತೆಗೆದುಕೊಂಡಿದ್ದೇನೆ ಎಂದು ಶಿಲ್ಪಿ ಹೇಳಿದರು.

ವೈದ್ಯಕೀಯ ದರ್ಜೆಯ ಸಿಲಿಕಾನ್ ವಸ್ತುವನ್ನು ಭಾರತದಲ್ಲಿ ತಯಾರಿಸದ ಕಾರಣ ಅದನ್ನು ಆಮದು ಮಾಡಿಕೊಂಡು ಪ್ರತಿಮೆಯನ್ನು ಕೆತ್ತಲಾಗಿದೆ ಎಂದು ಶ್ರೀ ಬೀಳಗಿ ಹೇಳಿದರು. ವೈದ್ಯಕೀಯ ದರ್ಜೆಯ ಸಿಲಿಕಾನ್ ವಸ್ತುವು ಪ್ರತಿಮೆಯನ್ನು ಪರಿಪೂರ್ಣತೆಗೆ ತಕ್ಕಂತೆ ರೂಪಿಸಲು ಶಿಲ್ಪಿಗೆ ಅಗತ್ಯವಾದ ಕರಕುಶಲತೆಯನ್ನು ಒದಗಿಸುತ್ತದೆ ಎಂದರು.

ಡಾ.ಅಪ್ಪಾಜಿಯವರ ಪ್ರತಿಮೆಗೆ ಮೇಣ, ನಾರಿನಂಥ ಇತರ ವಸ್ತುಗಳು ಸೀಮಿತ ಮತ್ತು ಕಡಿಮೆ ಜೀವಿತಾವಧಿಯನ್ನು ಹೊಂದಿದ್ದವಾದ್ದರಿಂದ, ವೈದ್ಯಕೀಯ ದರ್ಜೆಯ ಸಿಲಿಕಾನ್ ವಸ್ತುವನ್ನು ಪ್ರಮುಖವಾಗಿ ಆಯ್ಕೆ ಮಾಡಲಾಗಿದ್ದು, ವಿವಿಧ ವಸ್ತುಗಳ ಸೆಲೆಯಿಂದ ಪ್ರತಿಮೆಗಳನ್ನು ಕೆತ್ತುವಲ್ಲಿ ಪರಿಣತರಾಗಿರುವ ಶಿಲ್ಪಿ ಹೇಳಿದರು. ಸಿಲಿಕಾನ್ ಆಧಾರಿತ ಪ್ರತಿಮೆಯು ಕನಿಷ್ಟ 25 ವರ್ಷಗಳ ದೀರ್ಘಾವಧಿಯ ಆಯುಷ್ಯವನ್ನು ಹೊಂದಿದೆ ಮತ್ತು ಸುಲಭವಾಗಿ ನಿರ್ವಹಿಸಬಹುದಾಗಿದೆ. ಪ್ರತಿಮೆಯ ಮೇಲೆ ಬಳಸುವ ಬಟ್ಟೆಗಳನ್ನು ಅಗತ್ಯವಿದ್ದಾಗ ಬದಲಾಯಿಸಬಹುದು ಮತ್ತು ನಿಜವಾದ ಆಭರಣಗಳನ್ನು ಪ್ರತಿಮೆಯ ಮೇಲೆ ಪರಿಪೂರ್ಣ ನೋಟವನ್ನು ನೀಡಲು ಬಳಸಬಹುದು ಎಂದು ತಿಳಿಸಿದರು.

ಇದರ ಹೊರತಾಗಿ ಮೇಣ ಮತ್ತು ಫೈಬರ್ ವಸ್ತುಗಳು ಸ್ಕ್ರ್ಯಾಚ್ ಪ್ರೂಫ್ ಆಗಿರುವುದಿಲ್ಲ್ಲ ಮತ್ತು ಧೂಳನ್ನು ಸ್ವಚ್ಛಗೊಳಿಸುವುದು ಒಂದು ಕಠಿಣ ವಿಧಾನವಾಗಿದೆ. ಆದಾಗ್ಯೂ, ಸಿಲಿಕಾನ್ ಆಧಾರಿತ ಪ್ರತಿಮೆಯನ್ನು ತೊಳೆಯಬಹುದು ಮತ್ತು ಸ್ವಚ್ಛಗೊಳಿಸಬಹುದು. ಪ್ರತಿಮೆಯ ಮತ್ತೊಂದು ವೈಶಿಷ್ಟ್ಯವೆಂದರೆ ಹುಬ್ಬು, ತಲೆ, ಕೈಗಳು ಮತ್ತು ಕಾಲಿನ ಮೇಲೆ ಕೂದಲು ಬೆಳವಣಿಗೆಯಿರುವಲ್ಲೆಲ್ಲಾ ನೈಸರ್ಗಿಕ ಕೂದಲನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.

ವೈದ್ಯಕೀಯ ಆಧಾರಿತ ಸಿಲಿಕಾನ್ ಅನ್ನು ವೈದ್ಯಕೀಯ ವೃತ್ತಿಪರರು ಪ್ರಯೋಗಾಲಯಗಳಲ್ಲಿ ದೇಹದ ಭಾಗಗಳನ್ನು ಮಾಡೆಲಿಂಗ್ ಮಾಡಲು ಮತ್ತು ನಿರ್ಣಾಯಕ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ವ್ಯಾಪಕವಾಗಿ ಬಳಸುತ್ತಾರೆ. ಕೆಲವು ವೈದ್ಯಕೀಯ ವೃತ್ತಿಪರರು ಮೂಗು, ಕಿವಿ ಮತ್ತು ಇತರ ಹಾನಿಗೊಳಗಾದ ದೇಹದ ಭಾಗಗಳ ತಾತ್ಕಾಲಿಕ ಬದಲಿಗಾಗಿ ಈ ವಸ್ತುಗಳನ್ನು ಬಳಸುತ್ತಾರೆ.

ವಿಜಯಪುರ ಮೂಲದ ಶ್ರೀ ಬೀಳಗಿ ಅವರು ದಾವಣಗೆರೆ ಸ್ಕೂಲ್ ಆಫ್ ಆಟ್ರ್ಸ್‍ನಿಂದ ದೃಶ್ಯ ಕಲೆಯಲ್ಲಿ ಪದವಿ ಪಡೆದಿದ್ದಾರೆ ಮತ್ತು ಈಗ ಬೆಂಗಳೂರಿನಲ್ಲಿ “ಶಿಲ್ಪಕರ” ಎಂಬ ಸ್ಟುಡಿಯೋವನ್ನು ಸ್ಥಾಪಿಸಿದ್ದಾರೆ ಮತ್ತು ಅವರ ಹಲವಾರು ಕೃತಿಗಳನ್ನು ಅನೇಕ ಖಾಸಗಿ ಮನೆಗಳಲ್ಲಿ ಮತ್ತು ವಸ್ತುಸಂಗ್ರಹಾಲಯಗಳಲ್ಲಿ ಪ್ರದರ್ಶಿಸಲಾಗಿದೆ.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‍ಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ, ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ, ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ನಿರಂಜನ್ ವಿ. ನಿಷ್ಠಿ, ವಿಶ್ವವಿದ್ಯಾಲಯದ ಕುಲಸಚಿವ ಡಾ.ಅನಿಲಕುಮಾರ ಬಿಡವೆ, ಡೀನ್ ಡಾ.ಲಕ್ಷ್ಮೀ ಪಾಟೀಲ್ ಮಾಕಾ, ಹಣಕಾಸು ಅಧಿಕಾರಿ ಪೆÇ್ರ. ಕಿರಣ ಮಾಕಾ, ಬೀಳಗಿಯವರ ಕಾರ್ಯವನ್ನು ಅಭಿನಂದಿಸಿ ಶ್ಲಾಘಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here