- ಇಡಿ ಇಲಾಖೆ ನೀಡುತ್ತಿರುವ ನೋಟಿಸ್ ಅಕ್ರಮವಾಗಿದೆ-ರಾಜಾ ವೆಂಕಟಪ್ಪ ನಾಯಕ
ಸುರಪುರ: ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪಕ್ಷದ ರಾಷ್ಟ್ರ ನಾಯಕರಾದ ರಾಹುಲ್ ಗಾಂಧಿರವರಿಗೆ ಜಾರಿ ನಿರ್ದೇಶನಾಲಯ (ಇಡಿ) ಇಲಾಖೆಯ ಅಧಿಕಾರಿಗಳು ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ವಿನಾಕಾರಣ ಸಮನ್ಸ ನೀಡಲಾಗಿದೆ ಎಂದು ಆರೋಪಿಸಿ ಹಾಗೂ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಿದ್ದನ್ನು ಖಂಡಿಸಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮಂಗಳವಾರದಂದು ತಹಶೀಲ್ ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ ನ್ಯಾಷನಲ್ ಹೆರಾಲ್ಡ ಪತ್ರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಬ್ರಮಣಿಯನ್ ಸ್ವಾಮಿ ಅವರ ಸಲ್ಲಿಸಿದ್ದ ದಾವೆ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯವು ೨೦೧೫ರಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಇಬ್ಬರಿಗೂ ಜಾಮೀನು ನೀಡಿದ್ದು, ೨೦೧೬ರಲ್ಲಿ ಖುದ್ದಾಗಿ ವಿಚಾರಣೆಗೆ ಹಾಜರಾಗುವದರಿಂದ ವಿನಾಯಿತಿ ನೀಡಿತ್ತು ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಕಾಂಗ್ರೆಸ್ ಪಕ್ಷದ ರಾಷ್ಟ್ರ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರುಗಳ ಮೇಲೆ ಕಾನೂನು ಬಾಹಿರವಾಗಿ ನೋಟಿಸ್ ನೀಡಿ ವಿಚಾರಣೆ ನಡೆಸುತ್ತಿದ್ದು ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಇಡಿ ಇಲಾಖೆಯವರ ವಿಚಾರಣೆಗೆ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ಹಾಜರಾಗಿ ಉತ್ತರ ನೀಡಿದ್ದರೂ ಪದೇ ಪದೇ ಇಡಿ ಅಧಿಕಾರಿಗಳು ವಿಚಾರಣೆ ಹಾಜರಾಗಲು ನೋಟಿಸ್ ನೀಡಿ ಕಿರುಕುಳ ನೀಡುತ್ತಿದ್ದಾರೆ ಇಡಿ ಇಲಾಖೆಯವರು ನೀಡುತ್ತಿರುವ ನೋಟಿಸ್ ಅಕ್ರಮವಾಗಿದೆ ಎಂದು ದೂರಿದರು.
ಕಾಂಗ್ರೆಸ್ ನಾಯಕರುಗಳ ಮೇಲೆ ಇಡಿ ಇಲಾಖೆಯರು ನೋಟಿಸ್ ನೀಡಿದನ್ನು ಖಂಡಿಸಿ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ನಡೆಸುತ್ತಿದ್ದು ಶಾಂತಿಯುತ ಪ್ರತಿಭಟನೆಗೆ ಪೋಲಿಸರು ತಡೆವೊಡ್ಡಿದ್ದು ವಿನಾಕಾರಣ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಮಹಿಳಾ ನಾಯಕಿಯರ ಮೇಲೆ ದೈಹಿಕ ಹಲ್ಲೆವೆಸಗಲು ಯತ್ನಿಸುತ್ತಿದ್ದಾರೆ ಪಕ್ಷವು ನಡೆಸುತ್ತಿರುವ ಪ್ರತಿಭಟನೆಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಕಾಂಗ್ರೆಸ್ ಪಕ್ಷದ ಸರ್ವೋಚ್ಛ ನಾಯಕಿ ಸೋನಿಯಾ ಗಾಂಧಿ, ರಾಷ್ಟ್ರ ನಾಯಕ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರುಗಳಿಗೆ ಇಡಿ ಇಲಾಖೆಯವರು ನೋಟಿಸ್ ನೀಡಿ ವಿಚಾರಣೆ ನಡೆಸುತ್ತಿರುವದು ಕಾನೂನು ಬಾಹಿರವಾಗಿದ್ದು ಕೂಡಲೇ ವಿಚಾರಣೆಯನ್ನು ಕೈಬಿಡಬೇಕು, ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಕೈಗೊಳ್ಳುವ ಪ್ರತಿಭಟನೆಗೆ ಯಾವುದೇ ತಡೆವೊಡ್ಡದೇ ಅವಕಾಶ ನೀಡಬೇಕು ಹಾಗೂ ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವ ಪಕ್ಷದ ಮುಖಂಡರುಗಳ ಮೇಲೆ ಪೋಲಿಸರು ನಡೆಸುತ್ರಿರುವ ದೈಹಿಕವಾಗಿ ದಬ್ಬಾಳಿಕೆವೆಸಗಿ ಅಸಭ್ಯವಾಗಿ ವರ್ತಿಸುವದನ್ನು ಕೂಡಲೇ ನಿಲ್ಲಿಸುವಂತೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು, ರಾಷ್ಟ್ರಪತಿಗಳಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರರ ಮೂಲಕ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ, ಮುಖಂಡರಾದ ವಿಠಲ್ ಯಾದವ್, ಕಾಳಪ್ಪ ಕವಾತಿ, ಅಬ್ದುಲ್ ಗಫಾರ ನಗನೂರಿ, ಅಹ್ಮದ ಪಠಾಣ, ಶೇಖ ಮಹಿಬೂಬ ಒಂಟಿ, ಭೀಮರಾಯ ಮೂಲಿಮನಿ, ಪ್ರಕಾಶ ಗುತ್ತೇದಾರ, ರವಿಚಂದ್ರ ಸಾಹುಕಾರ, ಮಜೀದಸಾಬ, ಪರಮಣ್ಣಗೌಡ ದೇವತ್ಕಲ್, ವೆಂಕಟರೆಡ್ಡಿ, ಖತ್ತುಮಿಯಾ, ದೇಸಾಯಿಗೌಡ ವಾಗಣಗೇರಾ, ಹಣಮಮಗೌಡ ಬೈಲಕುಂಟಿ, ಮಲ್ಲಣ್ಣ ಐಕೂರು, ಸಿದ್ರಾಮ ಎಲಿಗಾರ, ಖಾಜಾ ಖಲೀಲ್ ಅಹ್ಮದ ಅರಕೇರಿ, ಬೀರಲಿಂಗ ಬಾದ್ಯಾಪುರ, ಗುಂಡಪ್ಪ ಸೊಲ್ಲಾಪುರ, ಯುವ ಮುಖಂಡರಾದ ರಾಜಾ ಸಂತೋಷ ನಾಯಕ, ರಾಜಾ ವಿಜಯಕುಮಾರ ನಾಯಕ, ರಾಜಾ ಸುಶಾಂತ ನಾಯಕ, ರಮೇಶ ದೊರಿ, ವೆಂಕಟೇಶ ಬೇಟೆಗಾರ, ಭಂಡಾರೆಪ್ಪ ನಾಟೇಕಾರ, ಪ್ರವೀಣ ನಾಯಕ ಡೊಣ್ಣಿಗೇರಿ, ಚಂದ್ರು ದನಕಾಯಿ, ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.