ವಿಶ್ವಕ್ಕೆ ಯೋಗ ದಿನ ಕೊಟ್ಟ ನರೇಂದ್ರ ಮೋದಿಯವರಿಗೆ ಕೃತಜ್ಞತೆ: ಶಾಸಕ ರಾಜುಗೌಡ

0
15
  • ಸುರಪುರ:ಗರುಡಾದ್ರಿ ಕಲಾ ಮಂದಿರದಲ್ಲಿ ಅಂತರಾಷ್ಟ್ರೀಯ ಯೋಗ ದಿನ

ಸುರಪುರ: ಇಂದು ಕೇವಲ ಭಾರತ ಮಾತ್ರವಲ್ಲದೆ ಇಡೀ ವಿಶ್ವವೇ ಯೋಗ ದಿನವನ್ನು ಆಚರಣೆ ಮಾಡುತ್ತಿದೆ.ಇದಕ್ಕೆ ಕಾರಣ ನಮ್ಮ ನೆಚ್ಚಿನ ಪ್ರಧಾನಿಗಳು.ಇಂತಹ ಯೋಗ ದಿನವನ್ನು ವಿಶ್ವಕ್ಕೆ ಕೊಟ್ಟ ನರೇಂದ್ರ ಮೋದಿಜಿಯವರಿಗೆ ಕೃತಜ್ಞತೆ ಸಲ್ಲಿಸುವುದಾ ಶಾಸಕ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ನರಸಿಂಹ ನಾಯಕ (ರಾಜುಗೌಡ) ಮಾತನಾಡಿದರು.

ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತಿ,ಆಯುಷ್ ಇಲಾಖೆ,ತಾಲೂಕು ಆಡಳಿತ,ತಾಲೂಕು ಪಂಚಾಯಿತಿ,ನಗರಸಭೆ ಹಾಗೂ ಇತರೆ ಇಲಾಖೆಗಳು ಮತ್ತು ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ ೮ನೇ ಅಂತರಾಷ್ಟ್ರೀಯ ಯೋಗ ದಿನಾಚಣೆಯನ್ನು ಉದ್ಘಾಟಿಸಿ ಮಾತನಾಡಿ,ಪ್ರತಿಯೊಬ್ಬ ಮನುಷ್ಯನಿಗೂ ಯೋಗ ತುಂಬಾ ಅವಶ್ಯಕವಾಗಿದೆ.ಯಾವುದೇ ಚಿಕಿತ್ಸೆ,ಔಷಧಿ ಇಲ್ಲದೆ ಮನುಷ್ಯ ರೋಗ ದಿಂದ ದೂರವಿರಲು ಯೋಗ ತುಂಬಾ ಮುಖ್ಯವಾಗಿದೆ.ಈಗ ನಿತ್ಯವು ಯೋಗ ಮಾಡುವವರು ಮತ್ತು ವರ್ಷಕ್ಕೆ ಒಂದು ದಿನ ಯೋಗ ಮಾಡುವವರು ಇರುತ್ತಾರೆ,ಆದರೆ ಯಾರುಕೂಡ ವರ್ಷಕ್ಕೊಮ್ಮೆ ಯೋಗ ಮಾಡುವುದನ್ನು ನಿಲ್ಲಿಸಿ ನಿತ್ಯವು ಯೋಗ ಮಾಡುವುದನ್ನು ರೂಢಿಸಿಕೊಳ್ಳುವಂತೆ ಸಲಹೆ ನೀಡಿದರು.ಇಂದು ನಮ್ಮ ಪ್ರಧಾನ ಮಂತ್ರಿಗಳು ಇಂದಿಗುಕೂಡ ಅಷ್ಟೊಂದು ಲವಲವಿಕೆಯಿಂದ ಇರಲು ಅದಕ್ಕೆ ಅವರು ಮಾಡುವ ಯೋಗವೇ ಕಾರಣವಾಗಿದೆ ಎಂದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಓಂಕಾರ ಯೋಗ ಪ್ರತಿಷ್ಠಾನದ ಸಂತೋಷ ಹೆಡಗಿನಾಳ ಮತ್ತು ಮಲ್ಲಿಕಾರ್ಜುನ ಸಜ್ಜನ್ ಅವರ ಮಾರ್ಗದರ್ಶನದಲ್ಲಿ ಹಲವಾರು ಭಂಗಿಗಳ ಯೋಗ ಮಾಡಿಸಲಾಯಿತು.ಈ ಸಂದರ್ಭದಲ್ಲಿ ಶಾಸಕ ರಾಜುಗೌಡ ಯೋಗದಲ್ಲಿ ಭಾಗವಹಿಸಿ ಎಲ್ಲರಿಗೂ ಪ್ರೇರಣೆಯಾದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರಸಭೆ ಅಧ್ಯಕ್ಷೆ ಸುಜಾತಾ ವೇಣುಗೋಪಾಲ ನಾಯಕ ಜೇವರ್ಗಿ ವಹಿಸಿದ್ದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ,ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ.ನಾಯಕ,ನಗರಸಭೆ ಉಪಾಧ್ಯಕ್ಷ ಮಹೇಶ ಪಾಟೀಲ್,ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದ ನಾಯಕ,ಆಯುಷ್ ಇಲಾಖೆಯ ಸಂಜಯ್ ಕುಲಕರ್ಣಿ,ಡಾ:ಮೀರಾ ಜೋಷಿ,ಡಾ:ಶಫೀಕ್ ಅಹ್ಮದ್ ಉಪಸ್ಥಿತರಿದ್ದರು.ಬಸವರಾಜ ದೇವಾಪುರ ಸ್ವಾಗತಿಸಿದರು,ಸಚಿನ ನಾಯಕ ಪ್ರಾರ್ಥಿಸಿದರು,ಲಕ್ಷ್ಮಣ ಬಿರಾದಾರ ನಿರೂಪಿಸಿದರು,ಆಯಷ್ ವೈದ್ಯ ಡಾ:ಸಂಜಯ್ ಕುಲಕರ್ಣಿ ವಂದಿಸಿದರು.

ಮುಖಂಡರಾದ ವೇಣುಗೋಪಾಲ ನಾಯಕ ಜೇವರ್ಗಿ,ರಾಜು ಪುಲ್ಸೆ,ಯಲ್ಲಪ್ಪ ಹುಲಿಕಲ್,ಬಿಇಒ ಮಹಾದೇವರೆಡ್ಡಿ,ಸಿಡಿಪಿಒ ಲಾಲಸಾಬ್ ಪೀರಾಪುರ,ಸಮಾಜ ಕಲ್ಯಾಣ ಇಲಾಖೆ ಎಡಿ ಸತ್ಯನಾರಾಯಣ ದರಬಾರಿ,ಬಿಸಿಎಮ್ ಇಲಾಖೆಯ ತಿಪ್ಪಾರಡ್ಡಿ ಪಾಟೀಲ್,ಪಿಎಸ್‌ಐ ಕೃಷ್ಣಾ ಸುಬೇದಾರ ಸೇರಿದಂತೆ ಎಲ್ಲಾ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ನೂರಾರು ಸಂಖ್ಯೆಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here