ಕಲಬುರಗಿ:ಶಿಕ್ಷಣದ ಖಾಸಗೀಕರಣ, ಸರಕಾರಿ ಶಾಲಾ ಕಾಲೇಜುಗಳ ಬಲಪಡಿಸಬೇಕೆಂದು ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್(ಎಐಡಿಎಸ್.ಓ) ವಯಿಂದ ಹತ್ತನೇ ವಿದ್ಯಾರ್ಥಿಗಳ ಸಮ್ಮೇಳನ ಪ್ರತಿಭಟನಾ ಮೆರವಣಿಗೆ ನಡೆಸುವ ಮೂಲಕ ಆಚರಿಸಲಾಯಿತು.
ಮೆರವಣಿಗೆಯನ್ನು ಸಂಘಟನೆಯ ರಾಜ್ಯಧ್ಯಕ್ಷ ಡಾ. ಪ್ರಮೋದ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಶಿಕ್ಷಣದಲ್ಲಿ ಖಾಸಗೀಕರಣ ನಿಲಿಸಿ ಎಂದು ಆಗ್ರಹಿಸಿ, ಸರಕಾರಿ ಶಾಲೆ ಕಾಲೇಜು ಬಲಪಡಿಸಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸಬೇಕೆಂದು ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದರು.
ಸಂಘಟನೆ ರಾಜ್ಯಕಾರ್ಯದರ್ಶಿ ಅಜಯ್ ಕಾಮತ್ ಮಾತನಾಡಿ, ವಿದ್ಯಾರ್ಥಿಗಳಿಗೆ ಭದ್ರತೆಗಳ ಕುರಿತು ಸರಕಾರ ಖಾತ್ರಿ ಪಡಿಸಲಿ ಎಂದು ಸಮ್ಮೇಳನದ ಘೋಷವಾಕ್ಯ ನಮದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಎಸ್. ಎಚ್. ಹಣಮಂತ ಸೇರಿದಂತೆ ಕಲಬುರಗಿ ಜಿಲ್ಲೆಯ ಹಾಗೂ ತಾಲ್ಲೂಕಗಳ ವಿದ್ಯಾರ್ಥಿಗಳು ಈ ಮೆರವಣಿಗೆಯಲ್ಲಿ ಭಾಗವಹಿದ್ದರು..