ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಬಿಎಸ್ ವೈ ಅವರು ದೇವರ ಹೆಸರಿನಲ್ಲಿ ನೂತನ ಸಿಎಂ ಪ್ರಮಾಣವಚನ ಸ್ವೀಕರಿಸಿದ್ದು, ಬಿಎಸ್‌ವೈಗೆ ರಾಜ್ಯಪಾಲ ವಜುಭಾಯ್ ವಾಲಾ ಪ್ರತಿಜ್ಞಾವಿಧಿ ಬೋಧಿಸಿದರು.
ಪ್ರಮಾಣ ವಚನಕ್ಕೂ ಮುನ್ನ ಯಡಿಯೂರಪ್ಪ ಕಾಡುಮಲ್ಲೇಶ್ವರನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ರು. ತದನಂತರ ಬಿಜೆಪಿ ಕಚೇರಿಗೆ ಭೇಟಿ ನೀಡಿ ಪಕ್ಷದ ಕಾರ್ಯಕರ್ತರೊಂದಿಗೆ ಮಾತನಾಡಿ ಒಂದು ವರ್ಷದಿಂದ ರಾಜ್ಯದ ಜನ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವುದನ್ನ ಕಾಯುತ್ತಿದ್ದರು. ಇದೀಗ ಆ ಘಳಿಗೆ ಸಮೀಪಿಸಿದೆ. ಸೇಡಿನ ರಾಜಕಾರಣ ಮಾಡದೇ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆಂದು ಹೇಳಿದರು.
ಪ್ರಮಾಣವಚನ ಮಾಜಿ ಸಿಎಂ ಎಸ್.ಎಂ.ಕೃಷ್ಣ, ಸಿ.ಪಿ.ಯೋಗೇಶ್ವರ್, ಶ್ರೀರಾಮುಲು, , ಕೆ.ಎಸ್.ಈಶ್ವರಪ್ಪ, ವಿ.ಸೋಮಣ್ಣ, ಬಿ.ಎಲ್.ಸಂತೋಷ್, ಮಾದುಸ್ವಾಮಿ, ನಳೀನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹ ಸೇರಿ ಸಮಾರಂಭಕ್ಕೆ ಬಿಜೆಪಿ ಕಾರ್ಯಕರ್ತರು, ಶಾಸಕರೆಲ್ಲ ಸೇರಿ ಹಲವರು ಭಾಗಿಯಾಗಿದ್ದರು.
ಸಮಾಜ ಜಾಗೃತಿ ಪ್ರಗತಿ ಆಗಬೇಕು ಸಿಕ್ಕ ಅವಕಾಶ ಉಪಯುಕ್ತ ರೈತರ ಕಾರ್ಮಿಕರ ಕಲ್ಯಾಣ ಶಿಕ್ಷಣ ಆರೋಗ್ಯ ರಸ್ತೆ ಸಾರಿಗೆ ವಿದ್ಯುತ್ ನೀರು ಸರಳ ಸಿಗಲಿ ರೈತರ ಅಭಿವೃದ್ಧಿ ನಾಡಜನರ ಅಭಿವೃದ್ಧಿ